ಏಷ್ಯಾಡ್​ನಲ್ಲಿ ಎಲ್ಲ ಪದಕಕ್ಕೂ ಒಂದೇ ಮೌಲ್ಯವಿಲ್ಲ! ವ್ಯತ್ಯಾಸ ಮೂಡಲು ಕಾರಣ ಹೀಗಿದೆ…

asian med web
Published on

ಹಾಂಗ್​ರೆೌ: ಎಲ್ಲ ಕ್ರೀಡಾಕೂಟಗಳಂತೆ ಏಷ್ಯನ್​ ಗೇಮ್ಸ್​ನಲ್ಲೂ ಪದಕ ಗೆಲುವು ಮಹತ್ವದ್ದಾಗಿದೆ. ಆದರೆ ಇದರಲ್ಲಿ ಎಲ್ಲ ಕ್ರೀಡೆಗಳಲ್ಲೂ ಗೆಲ್ಲುವ ಪದಕಗಳಿಗೆ ಒಂದೇ ತೂಕ ನೀಡುವುದು ಸರಿ ಎನಿಸದು. ಯಾಕೆಂದರೆ ಜಾಗತಿಕ ಮಟ್ಟದ ಕೆಲವು ಕ್ರೀಡೆಗಳಲ್ಲಿ ಏಷ್ಯಾದ ದೇಶಗಳ ಪ್ರಾಬಲ್ಯವಿದ್ದರೆ, ಇನ್ನು ಕೆಲವು ಕ್ರೀಡೆಗಳಲ್ಲಿ ಇಲ್ಲ.

ಉದಾಹರಣೆಗೆ ಅಥ್ಲೆಟಿಕ್ಸ್​ನಲ್ಲಿ (ಸದ್ಯ ಜಾವೆಲಿನ್​ ಥ್ರೋ ಹೊರತಾಗಿ) ಅಮೆರಿಕ, ಯುರೋಪ್​, ಆಫ್ರಿಕಾದ ಪ್ರಾಬಲ್ಯವಿದ್ದು, ಏಷ್ಯಾಡ್​ನಲ್ಲಿ ಚಿನ್ನ ಗೆದ್ದವರು ಒಲಿಂಪಿಕ್ಸ್​ನಲ್ಲಿ ಪದಕದ ಸನಿಹಕ್ಕೂ ಬರುವ ಖಾತ್ರಿ ಇರುವುದಿಲ್ಲ. ಇನ್ನು ಬ್ಯಾಡ್ಮಿಂಟನ್​, ಆರ್ಚರಿ, ವೇಟ್​ಲಿಫ್ಟಿಂಗ್​ನಲ್ಲಿ ಏಷ್ಯಾದ್ದೇ ಪ್ರಾಬಲ್ಯವಿದ್ದು, ಇದರಲ್ಲಿ ಕಂಚು ಗೆದ್ದರೂ, ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದಷ್ಟೇ ಮಹತ್ವ ಹೊಂದಿರುತ್ತದೆ. ಆದರೆ ಯಾರೇ ಪದಕ ವೇದಿಕೆ ಏರಿದರೂ ದೇಶದ ಗೌರವ ಎತ್ತಿ ಹಿಡಿಯುವುದಂತೂ ನಿಶ್ಚಿತ.

ಮತ್ತೆ ಚೀನಾ ಪ್ರಾಬಲ್ಯ ನಿರೀಕ್ಷೆ

ಆತಿಥೇಯ ಚೀನಾ ಸರ್ವಾಧಿಕ 887 ಕ್ರೀಡಾಪಟುಗಳ ಬೃಹತ್​ ತಂಡದೊಂದಿಗೆ ಕಣಕ್ಕಿಳಿಯುತ್ತಿದ್ದು, ಏಷ್ಯಾಡ್​ ಪದಕಪಟ್ಟಿಯ ಪ್ರಾಬಲ್ಯವನ್ನು ಮುಂದುವರಿಸುವ ಹಂಬಲದಲ್ಲಿದೆ. ಎಂದಿನಂತೆ ಜಪಾನ್​ ಮತ್ತು ದಣ ಕೊರಿಯಾ 2ನೇ ಸ್ಥಾನಕ್ಕೆ ಪೈಪೋಟಿ ನಡೆಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net