ಮನಸು-ಕಾಯ ಸದೃಢಗೊಳಿಸುವ ಕ್ರೀಡೆ ಆದ್ಯತೆಯಾಗಲಿ

cricket-turnament
ಅಳವಂಡಿಯಲ್ಲಿ ನಡೆದ ಎಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಶ್ರೀಮರುಳಾರಾದ್ಯ ಶಿವಾಚಾರ್ಯರು, ಪ್ರಮುಖರಾದ ಬಸವರಾಜ, ಉಮೇಶಗೌಡ, ಕಾಂತು ಸರ್, ವಸಂತರಡ್ಡಿ, ಬಿ.ಎಸ್.ತೊಂಡಿಹಾಳ, ಶ್ರೀಶೈಲಪ್ಪ ಇತರರು ಇದ್ದರು.
Published on

ಅಳವಂಡಿ: ಯುವಕರು ಓದಿನ ಜತೆಗೆ ಮನಸು ಮತ್ತು ಕಾಯವನ್ನು ಸದೃಢಗೊಳಿಸುವ ಕ್ರೀಡೆಗೂ ಆದ್ಯತೆ ನೀಡಬೇಕು ಎಂದು ಸಿದ್ದೇಶ್ವರ ಮಠದ ಶ್ರೀ ಶ್ರಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.

ಗ್ರಾಮದಲ್ಲಿ 2010ನೇ ಸಾಲಿನ ಎಸ್ಸೆಸ್ಸೆಲ್ಸಿ ಗೆಳೆಯರ ಬಳಗದಿಂದ ನಡೆದ ಅಳವಂಡಿ ಪ್ರಿಮಿಯರ್ (ಎಪಿಎಲ್) ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಗುರುವಾರ ಮಾತನಾಡಿದರು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಎರಡನ್ನೂ ಸಮನಾಗಿ ಸ್ವಕರಿಸಬೇಕೆಂದು ಸಲಹೆ ನೀಡಿದರು.

ಪಂದ್ಯಾವಳಿಯಲ್ಲಿ ಅಳವಂಡಿ ಕೇಸರಿ ಬಾಯ್ಸ ತಂಡ ಪ್ರಥಮ ಸ್ಥಾನ, ಅಳವಂಡಿ ಲಯನ್ಸ್ ತಂಡ ದ್ವಿತೀಯ, ಡೆವಿಲ್ಸ್ ಅಳವಂಡಿ ತಂಡ ತೃತೀಯ ಸ್ಥಾನ ಪಡೆದುಕೊಂಡವು.

ಪ್ರಮುಖರಾದ ಬಸವರಾಜ ತಳಕಲ್, ಉಮೇಶಗೌಡ, ಕಾಂತು ಸರ್, ವಸಂತರಡ್ಡಿ, ಬಿ.ಎಸ್.ತೊಂಡಿಹಾಳ, ಶ್ರೀಶೈಲಪ್ಪ, ದಾದು, ಅಶೋಕ, ಸುಭಾಷ್‌ರಡ್ಡಿ, ಹನುಮರಡ್ಡಿ, ದೇವಪ್ಪ, ಮೈಲಾರಪ್ಪ, ಮಾರುತಿ, ಸತೀಶ, ಜಗದೀಶ, ನೀಲಪ್ಪ, ವಿರೂಪಾಕ್ಷಗೌಡ, ಸಂತೋಷ, ಸುಭಾಷ, ಪರಶು, ಇಸ್ಮಾಯಿಲ್, ನಾಗು, ಸಚಿನರಡ್ಡಿ, ಮೈಲಾರಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net