ರಹಾನೆಗೆ ಮುಳುವಾಯ್ತಾ ಬ್ಯಾಟಿಂಗ್ ವೈಫಲ್ಯ? ಮೂಲಬೆಲೆಗೆ ಚೆನ್ನೈ ಪಾಲಾದ ಟೆಸ್ಟ್​ ತಂಡದ ಮಾಜಿ ಉಪನಾಯಕ

Rahane
Published on

ಕೊಚ್ಚಿ: ಐಪಿಎಲ್​ 16ನೇ ಆವೃತ್ತಿಯ ಪೂರ್ವಭಾವಿಯಾಗಿ ನಡೆದ ಮೊದಲ ದಿನದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಟೆಸ್ಟ್​ ತಂಡದ ಮಾಜಿ ಉಪನಾಯಕ ಅಜಿಂಕ್ಯಾ ರಹಾನೆ ಮೂಲ ಬೆಲೆ 50 ಲಕ್ಷ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್​​ ತಂಡದ ಪಾಲಾಗಿದ್ದಾರೆ.

2022-23ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಪರ ಆರಂಭಿಕನಾಗಿ ಅಜಿಂಕ್ಯಾ ರಹಾನೆ ಸದ್ಯ ಆಡುತ್ತಿದ್ದಾರೆ. ಕಳಪೆ ಫಾರ್ಮ್ಸ್​ನಿಂದಾಗಿ ರಹಾನೆ ಟೀಂ ಇಂಡಿಯಾದ ಟೆಸ್ಟ್​ ತಂಡದಿಂದಲು ಹೊರಗುಳಿದಿದ್ದರು. ರಹಾನೆ ಕಳೆದ ಬಾರಿಯ ಐಪಿಎಲ್​ನಲ್ಲಿ ಕೊಲ್ಕತಾ ನೈಟ್ ರೈಡರ್ಸ್​ ತಂಡದ ಭಾಗವಾಗಿದ್ದರು.

ರಹಾನೆಯ ಕಳಪೆ ಫಾರ್ಮ್​​ ಈ ಬಾರಿಗೆ ಐಪಿಎಲ್ ಹರಾಜಿನಲ್ಲಿ ಹಿನ್ನೆಡೆಯಾಗಿದೆ. ಹೀಗಾಗಿ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ರಹಾನೆಯನ್ನು ಖರೀದಿಸಲು ಆರಂಭದಲ್ಲಿ ಯಾವ ಪ್ರಾಂಚೈಸಿಯೂ ಆಸಕ್ತಿ ತೋರಿಸಿರಲಿಲ್ಲ. ಅಂತಿಮವಾಗಿ ಸಿಎಸ್​ಕೆ ಮೂಲಬೆಲೆ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತು. ಹೀಗಾಗಿ ಈ ಬಾರಿಗೆ ಐಪಿಎಲ್​ನಲ್ಲಿ ರಹಾನೆ ಧೋನಿ ತಂಡ ಕೂಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net