ರಿಷಭ್​ ಪಂತ್​ ಏಕಾಂಗಿ ಹೋರಾಟ ವ್ಯರ್ಥ; Team India ಎದುರು ಐತಿಹಾಸಿಕ ಸರಣಿ ಗೆಲುವು ದಾಖಲಿಸಿದ New Zealand

Rishabh Pant
Published on

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್​ (New Zealand) ನಡುವಿನ ಟೆಸ್ಟ್​ ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ತಂಡವು 25 ರನ್​ಗಳ ಜಯ ಸಾಧಿಸಿದ್ದು, ಈ ಮೂಲಕ ಭಾರತದ ನೆಲದಲ್ಲಿ ಸರಣಿ ಒಂದನ್ನು ಕ್ಲೀನ್​ಸ್ವೀಪ್​ ಮಾಡುವ ಐತಿಹಾಸಿಕ ದಾಖಲೆಯನ್ನು ಬರೆದಿದೆ.

92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್​ ತಂಡವು ಭಾರತದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಭಾರತ ತಂಡವನ್ನು (Team India) 3-0 ಅಂತರದಿಂದ ಸೋಲಿಸಿ ತವರಿನಲ್ಲಿ ಟೀಮ್ ಇಂಡಿಯಾವನ್ನು ವೈಟ್ ವಾಶ್ ಮಾಡಿದ ಐತಿಹಾಸಿಕ ಸಾಧನೆಯನ್ನು ಸಹ ನ್ಯೂಜಿಲೆಂಡ್​ ತಂಡ ಮಾಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್​ (New Zealand) ತಂಡವು ಡೆರಿಲ್​ ಮಿಚೆಲ್​ (82 ರನ್​, 129 ಎಸೆತ, 3 ಬೌಂಡರಿ, 3 ಸಿಕ್ಸರ್​), ವಿಲ್​ ಯಂಗ್​ (71 ರನ್​, 138 ಎಸೆತ, 4 ಬೌಂಡರಿ, 2 ಸಿಕ್ಸರ್​) ಅರ್ಧಶತಕಗಳ ಫಲವಾಗಿ 65.4 ಓವರ್​ಗಳಲ್ಲಿ 235 ರನ್​ಗಳಿಗೆ ಆಲೌಟ್​ ಆಯಿತು. ಭಾರತದ (Team India) ಪರ ರವೀಂದ್ರ ಜಡೇಜಾ (Ravindra Jadeja) (22-1-65-5), ವಾಷಿಂಗ್ಟನ್​ ಸುಂದರ್​ (18.4-2-81-4), ಆಕಾಶ್​ ದೀಪ್​ (5-0-22-1) ರನ್​ ನೀಡಿ ವಿಕೆಟ್​ ಪಡೆದಿದ್ದರು.

ಇದರ ಬೆನ್ನಲ್ಲೇ ಮೊದಲ ಇನ್ನಿಂಗ್ಸ್​ ಆರಂಭಿಸಿದ ಭಾರತ ತಂಡವು  ಶುಭಮನ್​ ಗಿಲ್​ (90 ರನ್, 146 ಎಸೆತ, 7 ಬೌಂಡರಿ, 1 ಸಿಕ್ಸರ್), ರಿಷಭ್​ ಪಂತ್​ (60 ರನ್​, 59 ಎಸೆತ, 8 ಬೌಂಡರಿ, 2 ಸಿಕ್ಸರ್​) ಅರ್ಧಶತಕಗಳ ಫಲವಾಗಿ 263 ರನ್​ಗಳಿಸಿ ಆಲೌಟ್​ ಆಯಿತು. ಈ ಮೂಲಕ ಎದುರಾಳಿಗಳ ವಿರುದ್ಧ 28 ರನ್​ಗಳಅ ಅತ್ಯಲ್ಪ ಮುನ್ನಡೆಯನ್ನು ಭಾರತ ತಂಡ (Team India) ಸಾಧಿಸಿತು. ನ್ಯೂಜಿಲೆಂಡ್​ ಪರ ಏಜಾಜ್​ ಪಟೇಲ್​ (21.4-3-103-5), ಮ್ಯಟ್​ ಹೆನ್ರಿ (8-1-26-1), ಗ್ಲೆನ್​ ಫಿಲಿಪ್ಸ್​ (20-0-84-1), ಇಶ್​ ಸೋಧಿ (7-0-36-1) ರನ್​ ನೀಡಿ ವಿಕೆಟ್​ ಪಡೆದಿದ್ದರು.

ಪ್ರಥಮ ಇನಿಂಗ್ಸ್​ನಲ್ಲಿನ 28 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ (New Zealand)​ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ (Team India) ಬೌಲರ್​​ಗಳು ವಿಲ್​ ಯಂಗ್​ (51 ರನ್​, 100 ಎಸೆತ, 2 ಬೌಂಡರಿ, 1 ಸಿಕ್ಸರ್​) ದಿಟ್ಟ ಪ್ರತಿರೋಧದ ಹೊರತಾಗಿಯೂ ಎದುರಾಳಿಗಳನ್ನು ಮೂರನೇ ದಿನದಾಟದ ಆರಂಭದಲ್ಲೇ ಕಟ್ಟಿ ಹಾಕಿತು. ಈ ಮೂಲಕ ಭಾರತ ತಂಡವು 147 ರನ್​ಗಳ ಗುರಿಯನ್ನು ಪಡೆಯಿತು. ಭಾರತದ (Team India)  ಪರ ರವೀಂದ್ರ ಜಡೇಜಾ (13.5-3-55-5), ಆರ್​. ಅಶ್ವಿನ್​ (17-1-63-3), ವಾಷಿಂಗ್ಟನ್​ ಸುಂದರ್​ (10-0-30-1), ಆಕಾಶ್​ದೀಪ್​ (5-0-10-1) ರನ್​ ನೀಡಿ ವಿಕೆಟ್​ ಪಡೆದಿದ್ದರು.

ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆಯೊಂದಿಗೆ 147 ರನ್​ಗಳ ಗುರಿ ಪಡೆದ ಭಾರತ ತಂಡದ (Team India) ಬ್ಯಾಟರ್​ಗಳನ್ನು ಇನ್ನಿಲ್ಲದಂತೆ ಕಾಡಿದ ಬೌಲರ್​ಗಳು ರಿಷಭ್​ ಪಂತ್​ (64 ರನ್​, 57 ಎಸೆತ, 9 ಬೌಂಡರಿ, 1 ಸಿಕ್ಸರ್​) ದಿಟ್ಟ ಪ್ರತಿರೋಧದ ಹೊರತಾಗಿಯೂ 21 ರನ್​ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾ 25 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಮೂಲಕ ಭಾರತ ತಂಡವನ್ನು ತವರಿನಲ್ಲೇ ವೈಟ್ ವಾಶ್ ಮಾಡಿದ ಐತಿಹಾಸಿಕ ಸಾಧನೆಯನ್ನು ನ್ಯೂಜಿಲೆಂಡ್​ ತಂಡ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net