

ಇಂದೋರ್: ಇತ್ತೀಚೆಗೆ ಐಪಿಎಲ್ ಹರಾಜಿನಲ್ಲಿ 10.75 ಕೋಟಿ ರೂ.ಗೆ ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಉತ್ತರ ಪ್ರದೇಶ ಪರ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿ ಗಮನಸೆಳೆದಿದ್ದಾರೆ. ಈ ಮೂಲಕ ಯುಪಿ ತಂಡದ 10 ವಿಕೆಟ್ ಗೆಲುವಿಗೆ ನೆರವಾದರು.
ಅಭಿಷೇಕ್ 28 ಎಸೆತಗಳಲ್ಲಿ ಶತಕ
ಪಂಜಾಬ್ ಬ್ಯಾಟರ್ ಅಭಿಷೇಕ್ ಶರ್ಮ (106 ರನ್, 29 ಎಸೆತ, 6 ಬೌಂಡರಿ, 11 ಸಿಕ್ಸರ್) 28 ಎಸೆತಗಳಲ್ಲೇ ಶತಕ ಸಿಡಿಸಿ ಭಾರತೀಯ ದಾಖಲೆ ಸರಿಗಟ್ಟಿದರು. ಹಾಲಿ ಟೂರ್ನಿಯಲ್ಲೇ ಗುಜರಾತ್ನ ಊರ್ವಿಲ್ ಪಟೇಲ್ ಕೂಡ ಇತ್ತೀಚೆಗೆ ತ್ರಿಪುರ ವಿರುದ್ಧ 28 ಎಸೆತಗಳಲ್ಲೇ ಶತಕ ಸಿಡಿಸಿ ಅತಿವೇಗದ ಭಾರತೀಯ ಸಾಧಕ ಎನಿಸಿದ್ದರು. ಒಟ್ಟಾರೆಯಾಗಿ ಟಿ20 ಕ್ರಿಕೆಟ್ನಲ್ಲಿ ಇದು 2ನೇ ಅತಿವೇಗದ ಶತಕವಾಗಿದೆ.
ಈಸ್ಟೋನಿಯಾದ ಸಾಹಿಲ್ ಚೌಹಾಣ್ ಹಾಲಿ ವರ್ಷವೇ ಸೈಪ್ರಸ್ ವಿರುದ್ಧ 27 ಎಸೆತಗಳಲ್ಲಿ ಶತಕ ಸಿಡಿಸಿರುವುದು ವಿಶ್ವದಾಖಲೆಯಾಗಿದೆ. ಅಭಿಷೇಕ್ ಸಾಧನೆಯಿಂದ ಪಂಜಾಬ್ ತಂಡ 143 ರನ್ ಸವಾಲನ್ನು ಕೇವಲ 9.3 ಓವರ್ಗಳಲ್ಲೇ ಬೆನ್ನಟ್ಟಿ ಗೆದ್ದಿತು.