ಬಾಂಗ್ಲಾ ಬಗ್ಗುಬಡಿದು, ಸೆಮಿಸ್​ಗೆ ಎಂಟ್ರಿ ಕೊಟ್ಟ ಆಫ್ಘಾನ್​! ಆಸಿಸ್​ ಕನಸು ನುಚ್ಚುನೂರು ಮಾಡಿದ ರಶೀದ್​ ಖಾನ್

Untitled design - 2024-06-25T114746.405 (2)
Published on

ವೆಸ್ಟ್ ಇಂಡೀಸ್​: ಇಂದು ಇಲ್ಲಿನ ಅರ್ನೋಸ್ ವೇಲ್ ಸ್ಟೇಡಿಯಂನಲ್ಲಿ ನಡೆದ ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ರೋಚಕ ಪಂದ್ಯದಲ್ಲಿ 8 ರನ್​ಗಳ ಅಂತರದಿಂದ ಆಫ್ಘಾನ್​ ಗೆದ್ದು ಬೀಗಿತು. ಈ ಗೆಲುವಿನ ಮೂಲಕ ಇದೀಗ ಐಸಿಸಿ ಟಿ20 ವಿಶ್ವಕಪ್​ ಸೆಮಿಫೈನಲ್​ಗೆ ಅಧಿಕೃತ ಎಂಟ್ರಿ ಕೊಟ್ಟ ಆಫ್ಘಾನಿಸ್ತಾನ, ತಮ್ಮ ಸೋಲಿಗಾಗಿ ಕಾದು ಕುಳಿತ್ತಿದ್ದ ಆಸ್ಟ್ರೇಲಿಯಾ ತಂಡದ ಸೆಮಿಸ್​ ಕನಸನ್ನು ನುಚ್ಚುನೂರು ಮಾಡಿದೆ.

ಟಾಸ್​ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡು, ಬಾಂಗ್ಲಾಗೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿತು. 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 115 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಈ ಮಧ್ಯೆ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿದ ಹಿನ್ನೆಲೆ ಡಿಎಲ್​ಎಸ್​ ವಿಧಾನ ಅನುಸರಿಸಿ, ಚೇಸಿಂಗ್ ವೇಳೆ ಪಂದ್ಯವನ್ನು ಒಂದು ಓವರ್​ಗೆ ಇಳಿಸಲಾಯಿತು. ಆಫ್ಘಾನ್​ ಕೊಟ್ಟ 115 ರನ್​ ಗುರಿ ತಲುಪಲು ಮುಗ್ಗರಿಸಿದ ಬಾಂಗ್ಲಾ ಬ್ಯಾಟರ್ಸ್​, 10ಕ್ಕೆ 10 ವಿಕೆಟ್​ಗಳನ್ನು ಆಫ್ಘಾನ್​ ಬೌಲರ್​​ಗಳಿಗೆ ಒಪ್ಪಿಸುವ ಮೂಲಕ ಟೂರ್ನಿಯಿಂದ ಹೊರಗುಳಿಯಿತು.

ಬಾಂಗ್ಲಾದೇಶವನ್ನು 8 ರನ್‌ಗಳಿಂದ ಮಣಿಸಿದ ಆಫ್ಘಾನಿಸ್ತಾನ ತಂಡ, ಈ ಮೂಲಕ ಐಸಿಸಿ ಟಿ20 ವಿಶ್ವಕಪ್ 2024ರ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. 114 ರನ್‌ಗಳನ್ನು ಬೆನ್ನಟ್ಟಿದ ಟೈಗರ್ಸ್ 105 ರನ್‌ಗಳಿಗೆ ಆಲೌಟ್ ಆಯಿತು. ಎದುರಾಳಿಗಳ ಬೆವರಳಿಸಿದ್ದು, ನಾಯಕ ರಶೀದ್ ಖಾನ್ ಮತ್ತು ನವೀನ್ ಉಲ್ ಹಕ್. ಈ ಇಬ್ಬರು ಬೌಲರ್​ಗಳು ತಲಾ 4 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿ ಹೊರಹೊಮ್ಮಿದರು. ಅತ್ಯುತ್ತಮ ಪ್ರದರ್ಶನ ನೀಡಿದ ನವೀನ್​ ಮತ್ತು ರಶೀದ್​ಗೆ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net