

ಬೆಂಗಳೂರು: ಭಾರತದ ಅಗ್ರ ಕ್ಯೂ ಆಟಗಾರ ಹಾಗೂ ಕನ್ನಡಿಗ ಪಂಕಜ್ ಆಡ್ವಾಣಿ ಕೇವಲ 3 ದಿನಗಳ ಅಂತರದಲ್ಲಿ 2ನೇ ವಿಶ್ವ ಕಿರೀಟ ಗೆದ್ದುಕೊಂಡಿದ್ದಾರೆ. ಈ ಮೂಲಕ ಒಟ್ಟಾರೆ 27ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡಿದ್ದಾರೆ. ದೋಹಾದಲ್ಲಿ ಶುಕ್ರವಾರ ಮುಕ್ತಾಯಗೊಂಡ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನ (150-ಅಪ್) ಅಂಕ ಮಾದರಿಯಲ್ಲಿ ಪಂಕಜ್ ಪ್ರಶಸ್ತಿ ಜಯಿಸಿದ್ದಾರೆ.
ಮಂಗಳವಾರವಷ್ಟೇ ಅವರು ದೀರ್ಘ ಮಾದರಿಯಲ್ಲೂ ಪ್ರಶಸ್ತಿ ಗೆದ್ದಿದ್ದರು. 38 ವರ್ಷದ ಪಂಕಜ್ ಫೈನಲ್ನಲ್ಲಿ ದೇಶಬಾಂಧವ ಸೌರವ್ ಕೊಠಾರಿ ಎದುರು 5-0 ಅಂತರದಿಂದ ಗೆಲುವು ದಾಖಲಿಸಿದರು. ಭಾರತದ ಇನ್ನಿಬ್ಬರು ಆಟಗಾರರಾದ ಧ್ರುವ ಸಿತ್ವಾಲಾ ಮತ್ತು ಶ್ರೀಕೃಷ್ಣ ಸೂರ್ಯನಾರಾಯಣನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಪಂಕಜ್ 27 ವಿಶ್ವ ಪ್ರಶಸ್ತಿಗಳು
*ವಿಶ್ವ ಬಿಲಿಯರ್ಡ್ಸ್ (ಅಂಕ ಮಾದರಿ): 9 (2005, 2008, 2014, 2016, 2017, 2018, 2019, 2022, 2023)
*ವಿಶ್ವ ಬಿಲಿಯರ್ಡ್ಸ್ (ದೀರ್ಘ ಮಾದರಿ): 9 (2005, 2007, 2008, 2009, 2012, 2014, 2015, 2018, 2023)
*ವಿಶ್ವ ತಂಡ ಬಿಲಿಯರ್ಡ್ಸ್ ಚಾಂಪಿಯನ್ಷಿಪ್: 1 (2014)
*ವಿಶ್ವ ಸ್ನೂಕರ್ ಚಾಂಪಿಯನ್ಷಿಪ್: 3 (2003, 2015, 2017)
*ವಿಶ್ವ 6-ರೆಡ್ ಸ್ನೂಕರ್: 3 (2015, 2014, 2021)
*ವಿಶ್ವ ಸ್ನೂಕರ್ ತಂಡ ಚಾಂಪಿಯನ್ಷಿಪ್: 2 (2018, 2019)