ಆರ್‌ಸಿಬಿ ತಂಡದಿಂದ ರಿಚರ್ಡ್​ಸನ್ ಔಟ್, ಆಡಂ ಜಂಪಾ ಇನ್

zampa for web
Published on

ಬೆಂಗಳೂರು: ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಂ ಜಂಪಾ, ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಆಸ್ಟ್ರೇಲಿಯಾದವರೇ ಆದ ವೇಗಿ ಕೇನ್ ರಿಚರ್ಡ್‌ಸನ್ ಅಲಭ್ಯರಾಗುತ್ತಿದ್ದಾರೆ. ಸೆ.19 ರಿಂದ ಯುಎಇಯಲ್ಲಿ ಆರಂಭವಾಗಲಿರುವ ಟೂರ್ನಿಗೆ ಆರ್‌ಸಿಬಿ ಕಡೇ ಹಂತದಲ್ಲಿ ಬದಲಾವಣೆ ಮಾಡಿಕೊಂಡಿದೆ.

ಜಂಪಾ ಆಗಮನದೊಂದಿಗೆ ಆರ್‌ಸಿಬಿ ಸ್ಪಿನ್ ವಿಭಾಗಕ್ಕೆ ಮತ್ತಷ್ಟು ಶಕ್ತಿ ಬಂದಂಥಾಗಿದೆ. ಈಗಾಗಲೇ ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಯಿನ್ ಅಲಿ, ಪವನ್ ನೇಗಿ, ಶಾಬಾಜ್ ಅಹಮದ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಕೌಟುಂಬಿಕ ಕಾರಣದಿಂದ ರಿಚರ್ಡ್‌ಸನ್ ಟೂರ್ನಿಯಿಂದ ಹೊರಬಿದ್ದಿದ್ದು, ಬದಲಿಗೆ ಆಸ್ಟ್ರೇಲಿಯಾದವರೇ ಆದ ಜಂಪಾ ಅವರನ್ನು ತಂಡ ಕೂಡಿಕೊಳ್ಳಲಿದ್ದಾರೆ ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ.

ಆಡಂ ಜಂಪಾ ಆಸ್ಟ್ರೇಲಿಯಾ ಪರ 55 ಏಕದಿನ, 30 ಟಿ20 ಪಂದ್ಯಗಳನ್ನಾಡಿದ್ದಾರೆ. ಇದಕ್ಕೂ ಮೊದಲು ಐಪಿಎಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದರು. ಆಡಿದ 11 ಪಂದ್ಯಗಳಿಂದ 19 ವಿಕೆಟ್ ಕಬಳಿಸಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net