VIDEO| ಭಾರತದ ಕ್ರಿಕೆಟಿಗನನ್ನು ತೆಗಳಿ ಪಾಕ್​ ಆಟಗಾರನನ್ನು ಹೊಗಳಿದ ಊರ್ವಶಿ ರೌಟೇಲಾ

Urvashi Naseem
Published on

ಮುಂಬೈ: ನಟಿ ಊರ್ವಶಿ ರೌಟೇಲಾ ಹಾಗೂ ಕ್ರಿಕೆಟಿಗ ರಿಷಭ್​ ಪಂತ್​ ಹೆಸರು ಆಗಿಂದಾಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುತ್ತವೆ. ಇಬ್ಬರು ಸ್ಟಾರ್​ಗಳ ನಡುವಿನ ಕಿತ್ತಾಟ ಇಂದೆ ನೆನೆಯದಲ್ಲ ಎಂದು ಹೇಳಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಟಿ ಊರ್ವಶಿ ರೌಟೆಲಾ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಖಾಸಗಿ ವಾಹಿನಿ ಒಂದರ ಸಂದರ್ಶನದಲ್ಲಿ ಮಾತನಾಡಿರುವ ನಟಿ ಊರ್ವಶೀ ರೌಟೇಲಾ ಪಾಕ್​ ಕ್ರಿಕೆಟಿಗನನ್ನು ಹಾಡಿಹೊಗಳಿದ್ದು, ಇವರನ್ನು ಬ್ಯಾನ್​ ಮಾಡುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ನಿರೂಪಕಿ ರಿಷಭ್‌ ಪಂತ್ ನಿಮ್ಮನ್ನು ತುಂಬಾ ಗೌರವಿಸುತ್ತಾರೆ, ತುಂಬಾ ಚೆನ್ನಾಗಿಯೂ ನೋಡಿಕೊಳ್ಳುತ್ತಾರೆ, ನೀವು ಅವರನ್ನು ಮದುವೆಯಾಗಬೇಕು ಅನ್ನೋದು ನಮ್ಮ ಬಯಕೆ, ಇದಕ್ಕೆ ಏನಂತೀರಾ ಎಂದು ಅಭಿಮಾನಿಗಳು ಪ್ರಶ್ನಿಸಿರುವುದಾಗಿ ಹೇಳುತ್ತಾರೆ.

ಇದಕ್ಕೆ ಉತ್ತರಿಸಿದ ಊರ್ವಶಿ ಇದಕ್ಕೆ ನೋ ಕಾಮೆಂಟ್ಸ್‌ ಎಂದು ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ. ಪಂತ್​ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದಾಗ ಆರೋಗ್ಯ ಸುಧಾರಿಸಿಕೊಳ್ಳಲಿ ಇದಕ್ಕಾಗಿ ಹ್ಯಾಶ್​ ಟ್ಯಾಗ್​ ಹೆಲ್ತ್​ ಎಂದು ಉತ್ತರಿಸಿದ್ದಾರೆ. ಇದೇ ವೇಳೆ ಪಾಕ್​ ಯುವ ವೇಗಿ ನಸಿಮ್​ ಷಾ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಪಾಕಿಸ್ತಾನ ತಂಡದ ಸ್ಟಾರ್‌ ಯುವ ವೇಗಿ ನಸೀಮ್‌ ಶಾ ಬಗ್ಗೆ ನಿರೂಪಕಿ ಪ್ರಶ್ನೆ ಕೇಳಿದಾಗ, ಖುಷಿಯಿಂದಲೇ ಉತ್ತರಿಸಿದ ಊರ್ವಶಿ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ ಬೌಲರ್‌ ಎಂದು ಹೇಳಿದರು. ನಸೀಮ್‌ ಒಳ್ಳೆಯ ಬೌಲರ್‌, ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಲ್ಲಂತೂ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ. ಇತ್ತ ಊರ್ವಶಿಯ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಶತ್ರು ರಾಷ್ಟ್ರದವರನ್ನು ಹೊಗಳುವ ಈಕೆಯನ್ನು ಮೊದಲು ಬ್ಯಾನ್​ ಮಾಡಿ ಎಂದು ಕಮೆಂಟ್​ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net