

ನವದೆಹಲಿ: ಫರೀದಾಬಾದ್ನ ಖಾಸಗಿ ಶೂಟಿಂಗ್ ರೇಂಜ್ನಲ್ಲಿ 10 ಮೀ. ಏರ್ ಪಿಸ್ತೂಲ್ ಸಿಲಿಂಡರ್ ಸ್ಫೋಟದಿಂದಾಗಿ ರಾಷ್ಟ್ರೀಯ ಮಟ್ಟದ ಶೂಟರ್ ಒಬ್ಬರು ಎಡಗೈ ಹೆಬ್ಬೆರಳನ್ನು ಭಾಗಶಃ ಕಳೆದುಕೊಂಡಿದ್ದಾರೆ. ಶನಿವಾರ ಸಂಜೆ ನಡೆದ ಈ ಅವಘಡ ಎಲ್ಲರನ್ನೂ ಬೆಚ್ಚೀಬಿಳಿಸಿದೆ.
ಭಾರತೀಯ ವಾಯು ಸೇನೆಗೆ ಸೇರಿದ ಪುಷ್ಪೇಂದ್ರ ಕುಮಾರ್ ರಾಷ್ಟ್ರೀಯ ಚಾಂಪಿಯನ್ಷಿಪ್ ಸಿದ್ಧತೆಯ ಅಂಗವಾಗಿ ಶೂಟಿಂಗ್ ರೇಂಜ್ನಲ್ಲಿ ತರಬೇತಿ ಪಡೆಯುತ್ತಿದ್ದರು. ಆಗ ಪಿಸ್ತೂಲ್ ಸಿಲಿಂಡರ್ಗೆ ಪ್ರಧಾನ ಸಿಲಿಂಡರ್ನಿಂದ ಸಂಕುಚಿತ ಗಾಳಿಯನ್ನು ತುಂಬಿಸುವ ವೇಳೆ ಸಂಭವಿಸಿದ ಅವಡದಿಂದ ಎಡಗೈ ಹೆಬ್ಬೆರಳಿಗೆ ಭಾರಿ ಗಾಯವಾಗಿದ್ದು, ತಕ್ಷಣವೇ ಭಾರತೀಯ ಸೇನೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಏರ್ ಪಿಸ್ತೂಲ್ ಮತ್ತು ಏರ್ ರೈಲ್ಗಳು ಬ್ಯಾರೆಲ್ನ ಕೆಳಗೆ ನಯವಾದ ಗ್ಯಾಸ್ ಸಿಲಿಂಡರ್ ಹೊಂದಿರುತ್ತವೆ. ಶೂಟರ್ ಟ್ರಿಗರ್ ಒತ್ತಿದಾಗ ಈ ಸಿಲಿಂಡರ್ನಿಂದ ಗ್ಯಾಸ್ ಬಿಡುಗಡೆಯಾಗಿ ಏರ್ಗನ್ನೊಳಗೆ ಹ್ಯಾಮರ್ನಿಂದ ಹೊಡೆಯುತ್ತವೆ ಮತ್ತು ಸೀಸದ ಬುಲೆಟ್ ಹೊರಚಿಮ್ಮುತ್ತವೆ. ಕೆಲ ಶಾಟ್ಗಳ ಬಳಿಕ ಈ ಸಿಲಿಂಡರ್ಅನ್ನು ತುಂಬುತ್ತಿರಬೇಕಾಗುತ್ತದೆ.