VIDEO: ತಂದೆ ಬರ್ತ್​ಡೇ ಪಾಟಿರ್ಯಲ್ಲಿ ಎಬಿ ಡಿವಿಲಿಯರ್ಸ್​ ಹಾಡಿದ ಹಾಡುಗಳಿಗೆ ಅಭಿಮಾನಿಗಳು ಫಿದಾ

abd villers
Published on

ಬೆಂಗಳೂರು: ಕೋವಿಡ್​-19 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಐಪಿಎಲ್​ ಮುಂದೂಡಿಕೆಯಾದ ಬಳಿಕ ತವರಿಗೆ ಮರಳಿರುವ ದಕ್ಷಿಣ ಆಫ್ರಿಕಾದ ಸ್ಫೋಟಕದ ಬ್ಯಾಟ್ಸ್​ಮನ್​, ಆರ್​ಸಿಬಿ ತಂಡದ ಎಬಿ ಡಿವಿಲಿಯರ್ಸ್​ ಕುಟುಂಬ ಸದಸ್ಯರೊಂದಿಗೆ ಕಾಲಕಳೆಯುತ್ತಿದ್ದಾರೆ. ಭಾರತದಿಂದ ತವರಿಗೆ ಮರಳಿದ ಬಳಿಕ ಕ್ವಾರಂಟೈನ್​ಗೆ ಒಳಗಾದ ಎಬಿ ಡಿವಿಲಿಯರ್ಸ್​, 10 ದಿನಗಳ ಬಳಿಗೆ ಕುಟುಂಬ ಸೇರಿಕೊಂಡರು. ಬಳಿಕ ಮನೆಯಲ್ಲಿ ತಂದೆಯ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ತಂದೆಯವರ ಫೇವರಿಟ್​ ಹಾಡುಗಳನ್ನು ಹಾಡುವ ಮೂಲಕ ಕುಟುಂಬ ಸದಸ್ಯರ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.

ಎಬಿ ಡಿವಿಲಿಯರ್ಸ್​ ತಂಡ ಪತ್ನಿ ಡೇನೀಲ್​ ಡಿ ವಿಲಿಯರ್ಸ್​ ಕೂಡ ತಮ್ಮ ಮಾವನವರ ಹುಟ್ಟುಹಬ್ಬದ ಆಚರಣೆಯಲ್ಲಿ ಹಾಡು ಸಂಭ್ರಮಿಸಿದ್ದಾರೆ. ಮೇ 29 ರಂದು ತಂದೆಯವರ 70ನೇ ಹುಟ್ಟುಹಬ್ಬ ಆಚರಿಸಲಾಯಿತು. ಪತ್ನಿಯೊಂದಿಗೆ ಸೇರಿ ನನ್ನ ಹಾಗೂ ತಂದೆಯವರ ಕೆಲವೊಂದು ಫೇವರಿಟ್​ ಹಾಡುಗಳನ್ನು ಹಾಡಿದೆ. ಇದಕ್ಕಿಂತ ಸಂತೋಷ ಮತ್ತೆನಿದೆ. ದೇವರು ಸದಾಕಾಲ ನಮ್ಮೊಂದಿಗೆ ಇರುತ್ತಾರೆ ಎಂದು ಎಬಿಡಿ ವಿಲಿಯರ್ಸ್​ ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ವಿಡಿಯೋ ಸಮೇತ ಪ್ರಕಟಿಸಿದ್ದಾರೆ

ಎಬಿಡಿ ವಿಲಿಯರ್ಸ್​ ವಿಡಿಯೋಗೆ ಐಪಿಎಲ್​ನ ಆರ್​ಸಿಬಿ ಆಟಗಾರರಾದ ಗ್ಲೇನ್​ ಮ್ಯಾಕ್ಸ್​ವೆಲ್​, ನಾಯಕ ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಪ್ರತಿಕ್ರಿಯೆ ನೀಡಿ, ಶುಭಾಶಯ ತಿಳಿಸಿದ್ದಾರೆ. ಮೇ 4 ರಂದು ಅನಿದಿರ್ಷ್ಟಾವಧಿವರೆಗೆ 14ನೇ ಐಪಿಎಲ್​ ಟೂರ್ನಿಯನ್ನು ಮುಂದೂಡಲಾಗಿತ್ತು. ಲೀಗ್​ನ ಉಳಿದ 31 ಪಂದ್ಯಗಳು ಸೆಪ್ಟೆಂಬರ್​ ಹಾಗೂ ಅಕ್ಟೋಬರ್​ ತಿಂಗಳಲ್ಲಿ ಯುಎಇಯಲ್ಲಿ ಆಯೋಜಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net