More

    ಸುದ್ದಿಗೋಷ್ಠಿ ಬಹಿಷ್ಕರಿಸಿ ಫ್ರೆಂಚ್ ಓಪನ್ ನಿಂದ ಹೊರನಡೆದ ಒಸಾಕ ಬಗ್ಗೆ ಮಿಥಾಲಿ ಹೇಳಿದ್ದೇನು ?

    ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್​ಗೆ ಮಾಧ್ಯಮದವರ ಬೆಂಬಲ ಅತ್ಯಗತ್ಯ. ಹೀಗಾಗಿ ನಾನು ಯಾವತ್ತೂ ಸುದ್ದಿಗೋಷ್ಠಿ ಬಹಿಷ್ಕರಿಸಲು ಒಪ್ಪಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಹಿಳಾ ತಂಡಕ್ಕೆ ಮಾಧ್ಯಮದ ಬೆಂಬಲ ಅಗತ್ಯ ಎಂದು ಭಾರತ ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ ತಂಡದ ನಾಯಕಿ ಮಿಥಾಲಿ ರಾಜ್​ ಹೇಳಿದ್ದಾರೆ. ಸುದ್ದಿಗೋಷ್ಠಿಗೆ ಗೈರು ವಿವಾದದಿಂದಾಗಿ ಜಪಾನ್​ ತಾರೆ ನವೊಮಿ ಒಸಾಕ ಪ್ರಸಕ್ತ ಫ್ರೆಂಚ್​ ಓಪನ್​ನಿಂದ ಹೊರಬಿದ್ದ ಕುರಿತು ಪ್ರತಿಕ್ರಿಯಿಸಿದ ಮಿಥಾಲಿ ರಾಜ್​, ವೈಯಕ್ತಿಕವಾಗಿ ನಾನು ಸುದ್ದಿಗೋಷ್ಠಿ ಬಹಿಷ್ಕರಿಸಲು ಇಷ್ಟಪಡುವುದಿಲ್ಲ. ಪ್ರತಿಯೊಬ್ಬರಿಗೂ ಮಾಧ್ಯಮ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್​ನಿಂದ ಹೊರಬಿದ್ದ ಸ್ಟಾರ್​ ಷಟ್ಲರ್​, ಪಿವಿ ಸಿಂಧುಗಿದೆ ಸ್ವರ್ಣ ಗೆಲುವಿನ ಅವಕಾಶ..

    ಕ್ರಿಕೆಟ್​ ಸೇರಿದಂತೆ ತಂಡದ ಕ್ರೀಡೆಗಳಿಗೆ ಕೋಚ್​, ನಾಯಕ, ಸಹಾಯಕ ಸಿಬ್ಬಂದಿ ಸುದ್ದಿಗೋಷ್ಠಿಗೆ ಹೋಗುವುದಕ್ಕೂ ಮುನ್ನ ಕೆಲವೊಂದು ಸಲಹೆ ನೀಡುತ್ತಾರೆ. ಆದರೆ, ವೈಯಕ್ತಿಕ ಕ್ರೀಡೆಯಲ್ಲಿ ಅದು ಸಾಧ್ಯವಿಲ್ಲ. ಕೆಲವು ಮಂದಿ ಸುದ್ದಿಗೋಷ್ಠಿಗಳಿಂದ ದೂರ ಉಳಿಯಲು ಬಯಸುತ್ತಾರೆ ಎಂದು ಮಿಥಾಲಿ ಹೇಳಿದ್ದಾರೆ. ಮಾನಸಿಕವಾಗಿ ಶಾಂತ ರೀತಿಯಿಂದ ಇರುವ ಸಲುವಾಗಿ ಕೆಲವರು ಸುದ್ದಿಗೋಷ್ಠಿಯಿಂದ ದೂರ ಇರಲು ಬಯಸುತ್ತಾರೆ ಎಂದು ಮಿಥಾಲಿ ಹೇಳಿದ್ದಾರೆ.

    ಇದನ್ನೂ ಓದಿ: ಅವಳಿ ಒಲಿಂಪಿಕ್​ ಪದಕ ವಿಜೇತ ಪೈಲ್ವಾನ್​ ಸುಶೀಲ್​ ಕುಮಾರ್​ಗೆ ದೆಹಲಿ ಪೊಲೀಸರಿಂದ ಶಾಕ್​ ಮೇಲೆ ಶಾಕ್

    ಮಿಥಾಲಿ ರಾಜ್​ ಸಾರಥ್ಯದ ಭಾರತ ಮಹಿಳಾ ತಂಡ ಬುಧವಾರ ಪುರುಷರ ತಂಡದೊಂದಿಗೆ ಲಂಡನ್​ಗೆ ತೆರಳಲಿದೆ. ಜೂನ್​ 16 ರಿಂದ ಇಂಗ್ಲೆಂಡ್​ ಎದುರು ಏಕೈಕ ಟೆಸ್ಟ್​ ಆಡಿದರೆ, ಆ ಬಳಿಕ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಿದ್ದಾರೆ.

    ಜೀವನದ ಎರಡನೇ ಇನಿಂಗ್ಸ್​ ಆರಂಭಿಸಿದ ಪಂಜಾಬ್​ ಕಿಂಗ್ಸ್​ ಬ್ಯಾಟ್ಸ್​ಮನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts