

ಬೆಂಗಳೂರು: ಮಿ.360 ಎಂದೇ ಖ್ಯಾತನಾಮರಾದ ಆರ್ಸಿಬಿಯ ಮಾಜಿ ಆಟಗಾರ, ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್(AB de Villiers ) ಮತ್ತೊಮ್ಮೆ ಕ್ರೀಡಾಂಗಣಕ್ಕೆ ಮರಳುವ ಸಾಧ್ಯತೆ ಇದ್ದು, ಮಿ.360 ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಹೌದು, ಈಗಾಲೇ ಆರ್ಸಿಬಿ ಪ್ರಾಂಚೈಸಿ ತಂಡಕ್ಕೆ ಸೇರಿದಂತೆ ಎಲ್ಲ ವಿವಿಧ ಕ್ರಿಕೆಟ್ಗೆ 2021ರಲ್ಲಿ ವಿದಾಯ ಹೇಳಿದ್ದಾರೆ. ಆದರೆ, 2025 ಚಾಂಪಿಯನ್ ಟ್ರೋಪಿಗೂ ಮುನ್ನ ಅಟವಾಡಲಿದ್ದಾರೆ. ಇದೀಗ ಮತ್ತೊಮ್ಮೆ ಆಟ ಹೇಗೆ ಆಡುತ್ತಾರೆ ಎಂದು ಕೇಳುತ್ತಿರಾ.. ಈ ಕುರಿತು ಎಬಿಡಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಎಬಿ ಡಿವಿಲಿಯರ್ಸ್, '' ಒಂದು ದಿನ ಮತ್ತೆ ಕ್ರೆಕೆಟ್ ಆಡುತ್ತೇನೆ. ನನ್ನ ಮಕ್ಕಳು ಮತ್ತು ಕುಟುಂಬ ಕ್ರಿಕೆಟ್ ಆಡುವಂತೆ ಒತ್ತಡ ಹೇರುತ್ತಿದ್ದಾರೆ. ನಾನು ನೆಟ್ನಲ್ಲಿ ಆಡುತ್ತೇನೆಯೋ ಅಥವಾ ಕ್ರೀಡಾಂಗಣದಲ್ಲಿಯೋ ಇನ್ನೂ ಸ್ಪಷ್ಟ ಇಲ್ಲ ಎಂದು ಹೇಳಿಕೊಂಡಿದ್ದರು.''
ಆದರೆ, ಇದೀಗ ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಎರಡನೇ ಋತುವಿನಲ್ಲಿ ಡಿವಿಲಿಯರ್ಸ್ ಆಡುವುದನ್ನು ಕೆಲ ವರದಿಗಳು ಧೃಢಪಡಿಸಿವೆ. ಟೂರ್ನಿಯಲ್ಲಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಪರ ಆಡಲಿದ್ದಾರೆ. ಅವರು ಟೂರ್ನಿಯ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಮೂಲಕ ಡಿವಿಲಿಯರ್ಸ್ ನಿವೃತ್ತಿಯ ಬಳಿಕ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ ಎಂದು ವರದಿ ಉಲ್ಲೇಖಿಸಲಾಗಿದೆ.
ಒಂದು ಎಬಿ ಡಿವಿಲಿಯರ್ಸ್ ಕ್ರೀಡಾಂಗಣಕ್ಕೆ ಮತ್ತೊಮ್ಮೆ ಮರಳಿದರೆ ಅವರ ಹೊಡಿಬಡಿ ಆಟಕವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಕೋಟಿಗಟ್ಟಲೇ ಫ್ಯಾನ್ಸ್ ಇದೀಗ ಕಾಯುತ್ತಿದ್ದಾರೆ.(ಏಜೆನ್ಸೀಸ್)