

ನವದೆಹಲಿ: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 (Pushpa-2) ಚಿತ್ರದ ಕ್ರೇಜ್ ದಿನ ಕಳೆದಂತೆ ಕ್ರೇಜ್ ಹೆಚ್ಚಾಗುತ್ತಿದ್ದು, ಒಂದಿಲ್ಲೊಂದು ಕಾರಣಕ್ಕೆ ಸಿನಿರಸಿಕರ ಗಮನ ಸೆಳೆಯುತ್ತಿದೆ. ಇತ್ತ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ವಿಶ್ವಮಟ್ಟದಲ್ಲಿ ಅನೇಕ ಸೆಲೆಬ್ರಿಟಿಗಳು ಸಿನಿಮಾಗೆ ಬೆಂಬಲ ಸೂಚಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಆರ್ಸಿಬಿ (RCB) ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ (ABD) 10 ಸಾವಿರ ಟಿಕೆಟ್ಗಳನ್ನು ಗಿವ್ಅವೇ ಮಾಡುವ ಮೂಲಕ ಗಮನ ಸೆಳೆದಿದ್ದು, ಇದಕ್ಕೆ ಸಂಬಂಧಿಸಿದ ಟ್ವೀಟ್ ವೈರಲ್ ಆಗುತ್ತಿದೆ.
ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಎಬಿ ಡಿವಿಲಿಯರ್ಸ್ (ABD) ದೇಶದ ಬಗ್ಗೆ ಎಲ್ಲಿಲ್ಲದ ಒಲವನ್ನು ಹೊಂದಿದ್ದಾರೆ. ಇದೀಗ ಪುಷ್ಪ-2 ಚಿತ್ರದ 10 ಸಾವಿರ ಟಿಕೆಟ್ಗಳನ್ನು ಗಿವ್ ಅವೇ ಮಾಡುವ ಮೂಲಕ ಎಬಿಡಿ ಎಲ್ಲರ ಗಮನ ಸೆಳೆದಿದ್ದು, ಇಲ್ಲೊಂದು ಟ್ವಿಸ್ಟ್ ಇಟ್ಟಿದ್ದಾರೆ.
Hey everyone! I have some exciting news for all the movie buffs out there. 🎥💥
The first 10,000 depositors who deposit INR 100 or more on @Wolf7Pay will get tickets to the year’s biggest blockbuster – Pushpa 2! 🔥
Don’t wait – campaign ends this Saturday. Play responsibly and… pic.twitter.com/QRqEOAUGbt
— AB de Villiers (@ABdeVilliers17) December 2, 2024
ಬೆಟ್ಟಿಂಗ್ ಆ್ಯಪ್ ಒಂದರ ಪ್ರಮೋಷನ್ನಲ್ಲಿ ಟಿಕೆಟ್ ಗಿವ್ ಅವೇ ಬಗ್ಗೆ ಮಾತನಾಡಿರುವ ಎಬಿಡಿ 100 ರೂಪಾಯಿಗಿಂತ ಹೆಚ್ಚಿನ ಹಣ ಡಿಪೋಸಿಟ್ ಮಾಡಿದ ಮೊದಲ 10 ಸಾವಿರ ಮಂದಿಗೆ ‘ಪುಷ್ಪ 2’ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ. ಡಿಸೆಂಬರ್ 07ರಂದು ಈ ಕ್ಯಾಂಪೇನ್ ಪೂರ್ಣಗೊಳ್ಳಲಿದ್ದು, ಈ ಬೆಟ್ಟಿಂಗ್ ಆ್ಯಪ್ಅನ್ನು ಎಬಿಡಿ (ABD) ಪ್ರಮೋಟ್ ಮಾಡಿದ್ದಾರೆ.
ಎಬಿಡಿ ಟ್ವೀಟ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಅಪಸ್ವರ ತೆಗೆದಿದ್ದು, ಬಹಳಷ್ಟು ಮಂದಿ ಪುಷ್ಪ-2 ಚಿತ್ರದ ಪ್ರಮೋಷನ್ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. ಡಿಸೆಂಬರ್ 05ರಂದು ಪುಷ್ಪ-2 ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದ್ದು, ಡಿಸೆಂಬರ್ 04ರಂದು ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ.