

ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಲ್ಲಿ ನಡೆಯುತ್ತಿದ್ದು, ಈ ವೇಳೆ ಹರಾಜುಗಾರರೊಬ್ಬರು ವೇದಿಕೆಯಲ್ಲೇ ಕುಸಿದು ಬಿದ್ದರು. ಬಿಡ್ಡಿಂಗ್ ವೇಳೆ ಹರಾಜುದಾರ ಹ್ಯೂ ಎಡ್ ಮೀಡ್ಸ್ ವೇದಿಕೆಯಲ್ಲೇ ಕುಸಿದು ಬಿದ್ದಿದ್ದು, ತಾತ್ಕಾಲಿಕವಾಗಿ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.
ಹ್ಯೂ ಎಡ್ ಮೀಡ್ಸ್ ಅವರು ಆರಾಮಾಗಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಊಟದ ವಿರಾಮ ತೆಗೆದುಕೊಳ್ಳಲಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ವೀಟ್ ಮಾಡಿದೆ.
ಇಂದು(ಶನಿವಾರ) ಮತ್ತು ನಾಳೆ(ಭಾನುವಾರ) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಹ್ಯೂ ಎಡ್ಮೀಡ್ಸ್ ಅವರು ಕುಸಿದು ಬಿದ್ದ ಕಾರಣ ಕೆಲಕಾಲ ಸ್ಥಗಿತವಾದ ಹರಾಜು ಪ್ರಕ್ರಿಯೆ ಮಧ್ಯಾಹ್ನ 3.30ಕ್ಕೆ ಪುನರಾರಂಭವಾಗಲಿದೆ.