

ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. 1-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಬರೋಬ್ಬರಿ 372 ರನ್ಗಳ ಅಮೋಘ ಗೆಲುವು ಕಾಣುವ ಮೂಲಕ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ. ಇದು ಭಾರತ ದಾಖಲಿಸಿದ ಮತ್ತೊಂದು ದೊಡ್ಡ ಮೊತ್ತದ ಗೆಲುವಾಗಿದೆ.
ಪಂದ್ಯದ ಆರಂಭದಿಂದಲೂ ಉತ್ತಮ ಪದರ್ಶನ ಕೊಟ್ಟ ಭಾರತ, 540 ರನ್ಗಳ ಗುರಿಯನ್ನ ಪ್ರವಾಸಿ ತಂಡ ನ್ಯೂಜಿಲೆಂಡ್ಗೆ ನೀಡಿತ್ತು. ಈ ಸವಾಲಿನ ಬೆನ್ನಟ್ಟಿದ್ದ ನ್ಯೂಜಿಲೆಂಡ್, ಮೂರನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 138 ರನ್ ಪೇರಿಸಿತ್ತು. ಜಯ ದಾಖಲಿಸಲು ಇನ್ನೂ 402 ರನ್ ಗಳಿಸಬೇಕಿತ್ತು. ಸೋಮವಾರ ನಡೆದ 4ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಕಿವೀಸ್ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದು ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 171 ರನ್ಗೆ ಆಲೌಟ್ ಆದರು.
ಭಾರತ ಮೊದಲ ಇನ್ನಿಂಗ್ಸ್: 109.5 ಓವರ್ಗಳಲ್ಲಿ 325 ರನ್ಗೆ ಆಲ್ಔಟ್
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್: 28.1 ಓವರ್ಗಳಲ್ಲಿ 62 ರನ್ಗಳಿಗೆ ಆಲ್ಔಟ್
ಭಾರತ ಎರಡನೇ ಇನಿಂಗ್ಸ್: 70 ಓವರ್ನಲ್ಲಿ 7 ವಿಕೆಟ್‌ಗೆ 276 ರನ್ ಡಿಕ್ಲೇರ್ (ಮಯಾಂಕ್ ಅಗರ್ವಾಲ್ 62, ಪೂಜಾರ 47, ಶುಭಮಾನ್ ಗಿಲ್ 47, ಕೊಹ್ಲಿ 36, ಅಕ್ಷರ್ ಪಟೇಲ್41*, ಅಜಾಜ್ ಪಟೇಲ್ 106ಕ್ಕೆ 4, ರಚಿನ್ ರವೀಂದ್ರ 56ಕ್ಕೆ 3).
ನ್ಯೂಜಿಲೆಂಡ್ 2ನೇ ಇನಿಂಗ್ಸ್: 45 ಓವರ್ಗಳಲ್ಲಿ 5 ವಿಕೆಟ್‌ಗೆ 140 ರನ್ (ಡೆರಿಲ್ ಮಿಚೆಲ್ 60, ಹೆನ್ರಿ ನಿಕೋಲಸ್ 36, ಆರ್.ಅಶ್ವಿನ್ 27ಕ್ಕೆ 3, ಅಕ್ಷರ್ ಪಟೇಲ್ 42ಕ್ಕೆ 1).