ಈ ವರ್ಷ ಐಪಿಎಲ್ ಗೆಲ್ಲಲು ಕೆಕೆಆರ್ ಅರ್ಹವಾಗಿತ್ತು: ಎಂ.ಎಸ್​.ಧೋನಿ

IPL csk kkr
Published on

ದುಬೈ: 14ನೇ ಐಪಿಎಲ್​(ಇಂಡಿಯನ್​ ಪ್ರೀಮಿಯರ್​ ಲೀಗ್​) ಫೈನಲ್ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ 27 ರನ್​ಗಳಿಂದ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​(ಸಿಎಸ್​ಕೆ) ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ಪಂದ್ಯದ ಬಳಿಕ ಮಾತನಾಡಿದ ಎಂ.ಎಸ್​. ಧೋನಿ, ಐಪಿಎಲ್ 2021ರಲ್ಲಿ ಉತ್ತಮ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಶ್ಲಾಘಿಸಿದದ್ದಾರೆ. ಈ ವರ್ಷದ ಐಪಿಎಲ್ ಗೆಲ್ಲಲು ಯಾವುದೇ ತಂಡ ಅರ್ಹವಾಗಿದ್ದರೆ ಅದು ಕೆಕೆಆರ್ ಎಂದಿದ್ದಾರೆ.

'ನಾನು ಸಿಎಸ್‌ಕೆ ಬಗ್ಗೆ ಮಾತನಾಡಲು ಪ್ರಾರಂಭಿಸುವ ಮೊದಲು ಕೆಕೆಆರ್ ಬಗ್ಗೆ ಮಾತನಾಡುವುದು ಮುಖ್ಯ' ಎಂದ ಧೋನಿ, ಐಪಿಎಲ್‌ನ ಮೊದಲಾರ್ಧದಲ್ಲಿ ಕೆಕೆಆರ್​ ಇದ್ದ ಸ್ಥಾನ, ಆ ನಂತರ ಕಮ್​ ಬ್ಯಾಕ್​ ಆಗಿ ಸಾಧಿಸಿದ್ದನ್ನು ನೋಡಿದ್ರೆ ನಿಜವಾಗಿಯೂ ಐಪಿಎಲ್​ ಗೆಲ್ಲಲು ಅರ್ಹವಾಗಿದ್ದ ತಂಡ ಅಂದ್ರೆ ಅದು ಕೆಕೆಆರ್​ ಎಂದು ಭಾವಿಸುತ್ತೇನೆ' ಎಂದರು.

ಮಹೇಂದ್ರ ಸಿಂಗ್ ಧೋನಿ ಪಡೆ ಐಪಿಎಲ್ 14ನೇ ಆವೃತ್ತಿಯ ಫೈನಲ್ ಹಣಾಹಣಿಯಲ್ಲಿ ಕೋಲ್ಕತ ನೈಟ್ ರೈಡರ್ಸ್‌ ತಂಡವನ್ನು 27 ರನ್‌ಗಳಿಂದ ಮಣಿಸಿತು. 7 ವರ್ಷಗಳ ಬಳಿಕ 3ನೇ ಪ್ರಶಸ್ತಿ ಜಯಿಸುವ ಕನಸಿನಲ್ಲಿದ್ದ ಕೆಕೆಆರ್ ನಿರಾಸೆ ಅನುಭವಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net