4ನೇ ಬಾರಿ ಐಪಿಎಲ್ ಟ್ರೋಫಿ ಜಯಿಸಿದ ಸಿಎಸ್‌ಕೆ

IPL FINAL TROPHY.jpg for web new
Published on

ದುಬೈ: ಸರ್ವಾಂಗೀಣ ನಿರ್ವಹಣೆ ತೋರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 4ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟವೇರಿದೆ. ಮಹೇಂದ್ರ ಸಿಂಗ್ ಧೋನಿ ಪಡೆ ಐಪಿಎಲ್ 14ನೇ ಆವೃತ್ತಿಯ ಫೈನಲ್ ಹಣಾಹಣಿಯಲ್ಲಿ ಕೋಲ್ಕತ ನೈಟ್ ರೈಡರ್ಸ್‌ ತಂಡವನ್ನು 27 ರನ್‌ಗಳಿಂದ ಮಣಿಸಿತು. 7 ವರ್ಷಗಳ ಬಳಿಕ 3ನೇ ಪ್ರಶಸ್ತಿ ಜಯಿಸುವ ಕನಸಿನಲ್ಲಿದ್ದ ಕೆಕೆಆರ್ ನಿರಾಸೆ ಅನುಭವಿಸಿತು.

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಆರಂಭಿಕ ಫಾಫ್ ಡು ಪ್ಲೆಸಿಸ್ (86 ರನ್, 59 ಎಸೆತ, 7 ಬೌಂಡರಿ, 3 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಜತೆಗೆ ಕನ್ನಡಿಗ ರಾಬಿನ್ ಉತ್ತಪ್ಪ (31 ರನ್, 15 ಎಸೆತ, 3 ಸಿಕ್ಸರ್) ಹಾಗೂ ಎಡಗೈ ಬ್ಯಾಟ್ಸ್‌ಮನ್ ಮೊಯಿನ್ ಅಲಿ (37*ರನ್, 20 ಎಸೆತ, 2 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್‌ನಿಂದ 3 ವಿಕೆಟ್‌ಗೆ 192 ರನ್ ಕಲೆಹಾಕಿತು. ಬಳಿಕ ವೆಂಕಟೇಶ್ ಅಯ್ಯರ್ (50ರನ್, 32 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಶುಭಮಾನ್ ಗಿಲ್ (51ರನ್, 43 ಎಸೆತ, 6 ಬೌಂಡರಿ) ಬಿರುಸಿನ ಆರಂಭದ ನಡುವೆಯೂ ಶಾರ್ದೂಲ್ ಠಾಕೂರ್ (38ಕ್ಕೆ 3) ಮಾರಕ ದಾಳಿಗೆ ನಲುಗಿದ ಕೆಕೆಆರ್ 9 ವಿಕೆಟ್‌ಗೆ 165 ರನ್ ಪೇರಿಸಲಷ್ಟೇ ಶಕ್ತವಾಯಿತು.

ಸಿಎಸ್‌ಕೆ: 3 ವಿಕೆಟ್‌ಗೆ 192 (ಋತುರಾಜ್ ಗಾಯಕ್ವಾಡ್ 32, ಪ್ಲೆಸಿಸ್ 86, ರಾಬಿನ್ ಉತ್ತಪ್ಪ 31, ಮೊಯಿನ್ ಅಲಿ 37*, ಶಿವಂ ಮಾವಿ 26ಕ್ಕೆ 2), ಕೆಕೆಆರ್: 9 ವಿಕೆಟ್‌ಗೆ 165 (ಶುಭಮಾನ್ ಗಿಲ್ 51, ವೆಂಕಟೇಶ್ ಅಯ್ಯರ್ 50, ಶಾರ್ದೂಲ್ ಠಾಕೂರ್ 38ಕ್ಕೆ 3, ಜೋಸ್ ಹ್ಯಾಸಲ್‌ವುಡ್ 29ಕ್ಕೆ 2, ರವೀಂದ್ರ ಜಡೇಜಾ 37ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net