

ಆಸ್ಟಾನಾ: ಭಾರತದ ಮಹಿಳಾ ತಂಡ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಮೊಟ್ಟಮೊದಲ ಬಾರಿಗೆ ಪದಕ ಗೆಲುವು ಖಾತ್ರಿಪಡಿಸಿಕೊಂಡಿದೆ. ಮಂಗಳವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ದಣ ಕೊರಿಯಾ ತಂಡವನ್ನು 3-2ರಿಂದ ಮಣಿಸುವ ಮೂಲಕ ಭಾರತ ಈ ಸಾಧನೆ ಮಾಡಿದೆ.
ವಿಶ್ವ ನಂ. 92 ಐಹಿಕಾ ಮುಖರ್ಜಿ ವಿಶ್ವ ನಂ. 8 ಶಿನ್ ಯುಬಿನ್ ಮತ್ತು ವಿಶ್ವ ನಂ. 16 ಜಿಆನ್ ಜಿಹೀ ವಿರುದ್ಧ ಅವಳಿ ಗೆಲುವು ದಾಖಲಿಸುವ ಮೂಲಕ ಭಾರತದ ಐತಿಹಾಸಿಕ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿದರು.
ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದ ಐಹಿಕಾ ಮತ್ತು ಮನಿಕಾ ಬಾತ್ರಾ ಭಾರತಕ್ಕೆ 2-0ಯಿಂದ ಅಚ್ಚರಿಯ ಮುನ್ನಡೆ ಒದಗಿಸಿದರು. ನಂತರ ಕೊರಿಯಾ ತಂಡ 2-2ರಿಂದ ಸಮಬಲ ಸಾಧಿಸಿದರೂ, ಐಹಿಕಾ ನಿರ್ಣಾಯಕ ಪಂದ್ಯದಲ್ಲಿ ಜಿಹೀ ವಿರುದ್ಧ ಗೆದ್ದು ಬೀಗಿದರು.