

ಸಿಂಗಾಪುರ: ಬ್ರಿಟಿಷ್ ಕಾಲದಿಂದಲೂ ಕುದುರೆ ರೇಸ್ ನಡೆಯುತ್ತಿದ್ದ 182 ವರ್ಷ ಹಳೆಯ ರೇಸ್ಕೋರ್ಸ್ಅನ್ನು ಮುಚ್ಚಿರುವ ಸಿಂಗಾಪುರ ಸರ್ಕಾರ, ಇದೀಗ ಅದೇ ಜಾಗದಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಮುಂದಾಗಿದೆ. ಜತೆಗೆ ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಯೋಜನೆಯನ್ನು ರೂಪಿಸಿದೆ.
ಸಿಂಗಾಪುರ ಟರ್ಫ್ ಕ್ಲಬ್ನಲ್ಲಿ (ಎಸ್ಟಿಸಿ) ಅಕ್ಟೋಬರ್ 5ರಂದು ಕೊನೆಯ ಕುದುರೆ ರೇಸ್ ನಡೆಯಿತು ಮತ್ತು ಇದಕ್ಕೆ ಸಾವಿರಾರು ಮಂದಿ ಸಾಯಾದರು. ಇಲ್ಲಿ 1842ರಿಂದಲೂ ಕುದುರೆ ರೇಸ್ ನಡೆಯುತಿತ್ತು.
ಈ ರೇಸ್ ಕೋರ್ಸ್ ಒಟ್ಟಾರೆ 124 ಹೆಕ್ಟೇರು ಜಾಗದಲ್ಲಿದ್ದು, 2027ರ ಮಾರ್ಚ್ ವೇಳೆಗೆ ಈ ಜಾಗ ಸಂಪೂರ್ಣವಾಗಿ ಸಿಂಗಾಪುರ ಸರ್ಕಾರದ ಕೈಸೇರಲಿದೆ. ನಂತರದಲ್ಲಿ ವಸತಿ ಸಮುಚ್ಚಯ ಸಹಿತ ಇತರ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಲಾಗುವುದು.