ಗಂಭೀರ್​ ಹಾಗೂ ದಿ ಓವಲ್​ ಪಿಚ್​ ಕ್ಯುರೇಟರ್ ನಡುವೆ ತೀವ್ರ ವಾಗ್ವಾದ! Gautam Gambhir

GAUTAM GAMBHIR
Published on

Gautam Gambhir: ಗುರುವಾರ (ಜು.30) ಆರಂಭವಾಗುವ ಇಂಡಿಯಾ ಮತ್ತು ಇಂಗ್ಲೆಂಡ್​ ನಡುವಿನ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ದಿ ಓವೆಲ್​ ಮೈದಾನದ ಮುಖ್ಯ ಪಿಚ್​ ಕ್ಯುರೇಟರ್ ಲೀ ಪೋರ್ಟಿಸ್​ ಅವರೊಂದಿಗೆ ಭಾರತ ತಂಡದ ಮುಖ್ಯ ಕೋಚ್​ ಗೌತಮ್ ಗಂಭೀರ್​ ತೀವ್ರ ಮಾತಿನ ಚಕಮಕಿ ನಡೆಸಿದ್ದರೆಂದು ಎಂದು ವರದಿಯಾಗಿದೆ.

ಮಂಗಳವಾರ ಭಾರತ ತಂಡ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಲೀ ಮತ್ತು ಗಂಭೀರ್ ನಡುವೆ ಅಭ್ಯಾಸ ನಡೆಸುವ ಪಿಚ್ ಸೌಲಭ್ಯದ ಕುರಿತು ವಾಗ್ವಾದ ನಡೆದಿದೆ. ಪಿಚ್​ ಕ್ಯುರೇಟರ್ ಲೀಗೆ ಕಡೆಗೆ ಬೆರಳು ಮಾಡಿದ ಗಂಭೀರ್, ನೀವು ನಮಗೆ ಏನು ಮಾಡಬೇಕೆಂದು ಹೇಳುವ ಅವಶ್ಯಕತೆಯಿಲ್ಲ ಎಂದು ಕೋಪದಿಂದ ಹೇಳಿದ್ದಾರೆ.

ಲೀ ಅವರೊಂದಿಗೆ ಸಂಭಾಷಣೆಯ ಸಮಯದಲ್ಲಿ ಭಾರತದ ಸಹಾಯಕ ಕೋಚ್ ರಯಾನ್​ ಟೆನ್​ ಡೋಸ್ಟೇಚ್​ ಅವರು ಕೊಟರ್​ ಅವರೊಂದಿಗೆ ಸೇರಿಕೊಂಡರು. ಆದರೆ, ಗಂಭೀರ್ ಇನ್ನೊಂದು ತುದಿಯಿಂದ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿದ್ದರು. ಲೀ ಗಂಭೀರ್​ಗೆ ​ಒಂದೆರಡು ಮಾತು ಹೇಳಿ ಅಂತಿಮವಾಗಿ ಹೊರ ನಡೆದರು.

ಈ ಪರಿಸ್ಥಿಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ ಸಂದರ್ಭದಲ್ಲಿ ಮಾತನಾಡಿದ ಲೀ, ಅವರನ್ನು ಖುಷಿಯಾಗಿಡುವುದು ನನ್ನ ಕೆಲಸವಲ್ಲ. ನನಗೆ ಏನು ತಿಳಿದಿಲ್ಲ, ನೀವು ಅವರನ್ನೇ ಹೋಗಿ ಕೇಳಿ ಎಂದು ಗರಂ ಆಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net