

ಲಂಡನ್: ಇಂಗ್ಲೆಂಡ್ನ ಮಾಜಿ ಆಲ್ರೌಂಡರ್ ಆಂಡ್ರ್ಯೋ ಫ್ಲಿಂಟಾಫ್ ಪುತ್ರ ರಾಕಿ ಫ್ಲಿಂಟಾಫ್ ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ನ 19 ವಯೋಮಿತಿಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.
16 ವರ್ಷದ ರಾಕಿ ಫ್ಲಿಂಟಾಫ್ ಲಂಕಾಶೈರ್ನ ಸೆಕೆಂಡ್ ಇಲೆವೆನ್ ತಂಡದ ಪರ ಮಿಂಚಿರುವ ಹಿನ್ನೆಲೆಯಲ್ಲಿ ಈ ಅವಕಾಶ ಪಡೆದಿದ್ದಾರೆ. 46 ವರ್ಷದ ಆಂಡ್ರ್ಯೋ ಫ್ಲಿಂಟಾಫ್ ಸದ್ಯ ಟಿ20 ವಿಶ್ವಕಪ್ಗೆ ಇಂಗ್ಲೆಂಡ್ ತರಬೇತಿ ಬಳಗದ ಭಾಗವಾಗಿ ವೆಸ್ಟ್ ಇಂಡೀಸ್ನಲ್ಲಿದ್ದಾರೆ. 79 ಟೆಸ್ಟ್, 141 ಏಕದಿನ ಮತ್ತು 7 ಟಿ20 ಪಂದ್ಯ ಆಡಿರುವ ಫ್ಲಿಂಟಾಫ್ 2009ರಲ್ಲಿ ನಿವೃತ್ತಿ ಹೊಂದಿದ್ದರು.
19 ವಯೋಮಿತಿಯ ಮುಂದಿನ ವಿಶ್ವಕಪ್ 2026ರಲ್ಲಿ ಜಿಂಬಾಬ್ವೆ-ನಮೀಬಿಯಾ ಆತಿಥ್ಯದಲ್ಲಿ ನಡೆಯಲಿದ್ದು, ರಾಕಿ ಫ್ಲಿಂಟಾಫ್ ಅದಕ್ಕೆ ಸಜ್ಜಾಗುತ್ತಿದ್ದಾರೆ. ಆಂಡ್ರ್ಯೋ ಫ್ಲಿಂಟಾಫ್ ಅವರ ಹಿರಿಯ ಪುತ್ರ 18 ವರ್ಷದ ಕೋರಿ ಫ್ಲಿಂಟಾಫ್ ಕೂಡ ಲಂಕಾಶೈರ್ ಸೆಕೆಂಡ್ ಇಲೆವೆನ್ ತಂಡದ ಭಾಗವಾಗಿದ್ದಾರೆ.