ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ಬಂಧನ

cricketer Michael Slater
Published on

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್(51) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೌಟುಂಬಿಕ ದೌರ್ಜನ್ಯದ ಆರೋಪ ಮೈಕೆಲ್ ಸ್ಲೇಟರ್ ವಿರದ್ಧ ಕೇಳಿಬಂದಿದ್ದು, ಈ ಪ್ರಕರಣದಡಿ ನ್ಯೂ ಸೌತ್ ವೇಲ್ಸ್ ಠಾಣೆಯ ಪೊಲೀಸರು ಬುಧವಾರ ಬೆಳಗ್ಗೆ ಮಾಜಿ ಕ್ರಿಕೆಟಿಗನ ಮನೆಯಲ್ಲಿ ಮೈಕೆಲ್ ಸ್ಲೇಟರ್​ರನ್ನು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

1993ರಿಂದ 2001ರವರೆಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿದ್ದ ಮೈಕೆಲ್​ ಸ್ಲೇಟರ್​, 74 ಟೆಸ್ಟ್‌ಗಳಲ್ಲಿ ಆಟವಾಡಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದ ಸ್ಲೇಟರ್​, ಇತ್ತೀಚಿಗೆ ಟಿವಿ ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಿದ್ದರು. ಕ್ರಿಕೆಟ್​ ಕಾಮೆಂಟರಿ ಕೊಡುತ್ತಿದ್ದರು.

ಕಳೆದ ವಾರ ಕೌಟುಂಬಿಕ ದೌರ್ಜನ್ಯ ನಡೆಸಿದ್ದರು ಎನ್ನಲಾಗಿದೆ. ಆದರೆ, ಏನು, ಯಾರ ಮೇಲೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net