ಕ್ರಿಕೆಟ್ ಅಭಿಮಾನಿಗಳಿಗೆ ಗುಡ್​ ನ್ಯೂಸ್: ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ, ಆರ್​ಸಿಬಿಯ ಮೊದಲ ಎದುರಾಳಿ ಇವರೇ ನೋಡಿ! | WPL 2027 Full Schedule

ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ, ಆರ್​ಸಿಬಿಯ ಮೊದಲ ಎದುರಾಳಿ ಇವರೇ ನೋಡಿ!
ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ, ಆರ್​ಸಿಬಿಯ ಮೊದಲ ಎದುರಾಳಿ ಇವರೇ ನೋಡಿ!
Published on: 

WPL 2027 Full Schedule: ಮಹಿಳಾ ಪ್ರೀಮಿಯರ್ ಲೀಗ್​ನ ಐದನೇ ಆವೃತ್ತಿಯ ಪೂರ್ಣ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಪ್ರಕಟಿಸಿದೆ. 2027ರ ಜನವರಿ 14ರಿಂದ ಆರಂಭವಾಗಲಿರುವ ಈ ಚುಟುಕು ಕ್ರಿಕೆಟ್ ಸಮರದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಫೆಬ್ರವರಿ 7ರಂದು ಫೈನಲ್ ಪಂದ್ಯ ನಡೆಯಲಿದ್ದು, ಈ ಬಾರಿಯ ಪಂದ್ಯಾವಳಿಗಳು ವಡೋದರಾ ಹಾಗೂ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಆಯೋಜನೆಗೊಳ್ಳಲಿವೆ.

ಒಟ್ಟು 22 ಪಂದ್ಯಗಳ ಈ ಟೂರ್ನಿಯಲ್ಲಿ ಪ್ರತಿಯೊಂದು ನಗರದಲ್ಲೂ ತಲಾ 11 ಪಂದ್ಯಗಳು ನಡೆಯಲಿವೆ. ಟೂರ್ನಿಯ ಮೊದಲ ಹಂತ ಜನವರಿ 14ರಿಂದ 24ರವರೆಗೆ ವಡೋದರಾದಲ್ಲಿ ಜರುಗಲಿದ್ದು, ಎಲ್ಲಾ 5 ಫ್ರಾಂಚೈಸಿಗಳು ಈ ಹಂತದಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿವೆ. ತದನಂತರ ಜನವರಿ 26ರಿಂದ ಎರಡನೇ ಹಂತದ ಪಂದ್ಯಗಳು ಮುಂಬೈನ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿವೆ.

ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಹೀಗಿದೆ
ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಹೀಗಿದೆ�

ಲೀಗ್ ಹಂತದ ಪಂದ್ಯಗಳು ಫೆಬ್ರವರಿ 3ಕ್ಕೆ ಮುಕ್ತಾಯಗೊಳ್ಳಲಿದ್ದು, ಫೆಬ್ರವರಿ 5ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ 2ನೇ ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಕ್ಕಾಗಿ ಎಲಿಮಿನೇಟರ್‌ನಲ್ಲಿ ಕಾದಾಡಲಿವೆ. ಇನ್ನು ಲೀಗ್ ಹಂತದಲ್ಲಿ ಅಗ್ರಸ್ಥಾನ ಗಳಿಸುವ ತಂಡವು ನೇರವಾಗಿ ಫೆಬ್ರವರಿ 7ರಂದು ಮುಂಬೈನ ಬ್ರಬೋರ್ನ್ ಅಂಗಳದಲ್ಲಿ ನಡೆಯುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಟೂರ್ನಿಯ ಎಲ್ಲಾ 22 ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಲಿವೆ.

Also Read
ಶೂನ್ಯಕ್ಕೆ ನಿರ್ಗಮಿಸಿದರೂ ಪಂದ್ಯ ಗೆಲ್ಲಿಸಿಕೊಟ್ಟಿದ್ದು ರೋಹಿತ್ ಶರ್ಮಾ!: ಹಿಟ್‌ಮ್ಯಾನ್ ಮ್ಯಾಜಿಕ್ ಕುರಿತು ನಾಯಕ ಗಿಲ್ ಮಾತು | INDvNZ
ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ, ಆರ್​ಸಿಬಿಯ ಮೊದಲ ಎದುರಾಳಿ ಇವರೇ ನೋಡಿ!

WPL 2027ರ ತಂಡಗಳ ವಿವರ ಹೀಗಿದೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಸ್ಮೃತಿ ಮಂಧನಾ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಎಲಿಸ್ ಪೆರ್ರಿ, ಲೋರೆನ್ ಬೆಲ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ಜೆಸ್ ಜೊನಾಸೆನ್, ತೇಜಲ್ ಹಸಬ್ನಿಸ್, ಸಾಯಲಿ ಸತ್ಘರೆ, ಕ್ಲೋಯ್ ಟ್ರಯಾನ್, ಪ್ರೇಮಾ ರಾವತ್, ವೃಂದಾ ದಿನೇಶ್, ಕುಮಾರ್ ಪ್ರತ್ಯೂಷಾ.

ಮುಂಬೈ ಇಂಡಿಯನ್ಸ್ (MI): ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ, ಸಜನಾ ಸಜೀವನ್, ರಾಹಿಲ ಫಿರ್ದೌಸ್, ನಿಕೋಲಾ ಕೇರಿ, ವೈಷ್ಣವಿ ಶರ್ಮಾ, ತಾರಾ ನಾರಿಸ್, ದಿಶಾ ಕಸಟ್, ಭಾರತಿ ರಾವಲ್, ಲತಿಕಾ ಇನಾಮ್‌ದಾರ್, ಅಕ್ಷಿತಾ ಭಾಗರ್, ಶ್ವೇತಾ ಸೆಹ್ರಾವತ್, ಸಾನಿಕಾ ಚಾಲ್ಕೆ.

ದೆಹಲಿ ಕ್ಯಾಪಿಟಲ್ಸ್ (DC): ಜೆಮಿಮಾ ರೊಡ್ರಿಗಸ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ನಿಕಿ ಪ್ರಸಾದ್, ಲಾರಾ ವೊಲ್ವಾರ್ಡ್, ಚಿನೆಲ್ಲೆ ಹೆನ್ರಿ, ಶ್ರೀ ಚರಣಿ, ದಿಯಾ ಯಾದವ್, ಮಮತಾ ಮಡಿವಾಳ, ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್ಟನ್, ಮಿನ್ನು ಮಣಿ, ಅನ್ನಾಬೆಲ್ ಸದರ್ಲ್ಯಾಂಡ್, ಕಿರಣ್ ನವಗಿರೆ, ಉಮಾ ಕಾಶ್ವಿ, ಕಿರ್ಸ್ಟಿ ಗಾರ್ಡನ್, ನಜ್ಮಾ ಖಾನ್.

ಯುಪಿ ವಾರಿಯರ್ಜ್ (UPW): ಮೆಗ್ ಲ್ಯಾನಿಂಗ್ (ನಾಯಕಿ), ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟನ್, ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ದೇವೋಲ್, ಕ್ರಾಂತಿ ಗೌಡ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರಾನ್ ಶೇಖ್, ಪ್ರತಿಕಾ ರಾವಲ್, ಸೋಫಿ ಮೋಲಿನಕ್ಸ್, ಗ್ರೇಸ್ ಹ್ಯಾರಿಸ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಸಹನಾ ಪವಾರ್, ಮನಾಲಿ ದಕ್ಷಿಣಿ, ಕ್ಯಾಥರೀನ್ ಬ್ರೈಸ್, ಆಶಾ ಶೋಭನಾ.

ಗುಜರಾತ್ ಜೈಂಟ್ಸ್ (GG): ಆಶ್ಲೀ ಗಾರ್ಡ್ನರ್ (ನಾಯಕಿ), ಬೆತ್ ಮೂನಿ, ಸೋಫಿ ಡಿವೈನ್, ರೇಣುಕಾ ಸಿಂಗ್ ಠಾಕೂರ್, ಭಾರತಿ ಫುಲ್ಮಾಲಿ, ಕಾಶ್ವಿ ಗೌತಮ್, ಕನಿಕಾ ಅಹುಜಾ, ತನುಜಾ ಕನ್ವರ್, ಜಾರ್ಜಿಯಾ ವೇರ್ಹ್ಯಾಮ್, ಅನುಷ್ಕಾ ಶರ್ಮಾ, ಹ್ಯಾಪಿ ಕುಮಾರಿ, ಕಿಮ್ ಗಾರ್ತ್, ಯಸ್ತಿಕಾ ಭಾಟಿಯಾ, ರಾಜೇಶ್ವರಿ ಗಾಯಕ್ವಾಡ್, ಜಿಂಟಿಮಣಿ ಕಲಿತಾ, ಜಿ. ಕಮಲಿನಿ, ಓರ್ಲಾ ಪ್ರೆಂಡರ್‌ಗಾಸ್ಟ್, ಸಮೈರಾ ರಾಘವ್. (ಏಜೆನ್ಸೀಸ್​).