ನಿಜಕ್ಕೂ ಇದು ಅಸಹ್ಯಕರ... ಆರ್​ಸಿಬಿ WPL ಗೆದ್ದ ಬೆನ್ನಲ್ಲೇ ಪ್ರಕಾಶ್​ ರಾಜ್​ ಮಾಡಿದ ಟ್ವೀಟ್​ ವೈರಲ್​! RCB

WPL ಗೆದ್ದ ಬೆನ್ನಲ್ಲೇ ಪ್ರಕಾಶ್​ ರಾಜ್​ ಮಾಡಿದ ಟ್ವೀಟ್​ ವೈರಲ್​
WPL ಗೆದ್ದ ಬೆನ್ನಲ್ಲೇ ಪ್ರಕಾಶ್​ ರಾಜ್​ ಮಾಡಿದ ಟ್ವೀಟ್​ ವೈರಲ್​
Published on

ಪ್ರಮುಖ ಮುಖ್ಯಾಂಶಗಳು

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2026ನೇ ಸಾಲಿನ ಡಬ್ಲ್ಯುಪಿಎಲ್​ ವಿನ್ನರ್​ ಆಯಿತು
  • ರಲ್ಲಿ ಪ್ರಶಸ್ತಿ ಗೆದ್ದ ಆರ್​ಸಿಬಿ ಈ ಸೀಸನ್​​ನಲ್ಲಿ ಮತ್ತೆ ಟ್ರೋಫಿ ಗೆಲ್ಲುವ ಮೂಲಕ 2ನೇ ಬಾರಿ ಟ್ರೋಫಿ ಎತ್ತಿಹಿಡಿಯಿತು
  • ಆರ್​ಸಿಬಿ ಚಾಂಪಿಯನ್​ ಆದ ಕೂಡಲೇ ಹೊಸ ವಿವಾದವೊಂದು ಮುನ್ನೆಲೆಗೆ ಬಂದಿದೆ
  • ಡಬ್ಲ್ಯುಪಿಎಲ್​ ಫೈನಲ್​ ಪಂದ್ಯದ ಫಲಿತಾಂಶಕ್ಕೆ ಧರ್ಮದ ಲೇಪನ ಮಾಡಿದ್ದಾರೆ
ನವದೆಹಲಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ( RCB ) 2026ನೇ ಸಾಲಿನ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಮೆಂಟ್​ ವಿಜೇತರಾಗಿ ಹೊರಹೊಮ್ಮಿರುವುದು ಎಲ್ಲರಿಗು ತಿಳಿದಿರುವ ಸಂಗತಿ. ಆರ್​ಸಿಬಿ ಮಹಿಳಾ ತಂಡ, ಈ ಟೂರ್ನಮೆಂಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಆಯಿತು. 2024 ರಲ್ಲಿ ಪ್ರಶಸ್ತಿ ಗೆದ್ದ ಆರ್​ಸಿಬಿ, ಈ ಸೀಸನ್​​ನಲ್ಲಿ ಮತ್ತೆ ಟ್ರೋಫಿ ಗೆಲ್ಲುವ ಮೂಲಕ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದ ದಾಖಲೆ ಬರೆಯಿತು.
ಡಬ್ಲ್ಯುಪಿಎಲ್​ ಟೂರ್ನಮೆಂಟ್‌ಗೂ ಮುನ್ನ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಮದುವೆ ಮುರಿದು ಬಿದ್ದಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದರ ನೋವಿನ ಮಧ್ಯೆಯೂ ತಮ್ಮ ಹೃದಯವನ್ನು ಗಟ್ಟಿ ಮಾಡಿಕೊಂಡು, ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಹೀಗಾಗಿ, ಸ್ಮೃತಿ ಅವರನ್ನು ಎಲ್ಲರು ಕೊಂಡಾಡುತ್ತಿದ್ದಾರೆ. ಆರ್​ಸಿಬಿ ಚಾಂಪಿಯನ್​ ಆದ ಕೂಡಲೇ ಹೊಸ ವಿವಾದವೊಂದು ಮುನ್ನೆಲೆಗೆ ಬಂದಿದೆ. ಆ ವಿವಾದದ ವಿಷಯ ಏನೆಂದರೆ, ತಿರುಮಲ ಶ್ರೀವಾರು vs. ಜೀಸಸ್‌.
ಇಂಡಿಯನ್ ಪ್ರೀಮಿಯರ್ ಲೀಗ್-2026 ಟೂರ್ನಮೆಂಟ್‌ಗೂ ಮೊದಲು ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ, ತಿರುಮಲ ಶ್ರೀವಾರಿಗೆ ಭೇಟಿ ನೀಡಿದ್ದರು. ಹೀಗಾಗಿಯೇ, ಆರ್​ಸಿಬಿ ಗೆದ್ದಿದೆ ಎಂದು ಕೆಲವು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಫೈನಲ್‌ನಲ್ಲಿ ಆರ್​ಸಿಬಿ ವಿರುದ್ಧ ಸೋತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಜೆಮಿಮಾ ರೊಡ್ರಿಗಸ್ ಎಂಬುದು ಎಲ್ಲರಿಗೂ ತಿಳಿದಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಯೇಸು ಇದ್ದರೂ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಕೆಲವರು ಜೆಮಿಮಾರನ್ನು ಟ್ರೋಲ್​ ಮಾಡುತ್ತಿದ್ದಾರೆ. ಡಬ್ಲ್ಯುಪಿಎಲ್​ ಫೈನಲ್​ ಪಂದ್ಯದ ಫಲಿತಾಂಶಕ್ಕೆ ಧರ್ಮದ ಲೇಪನ ಮಾಡಿದ್ದಾರೆ.
ಈ ಹಿಂದೆ ಟೀಮ್​ ಇಂಡಿಯಾ ಮಹಿಳಾ ತಂಡ ಏಕದಿನ ವಿಶ್ವಕಪ್​ನಲ್ಲಿ ಗೆಲುವು ಸಾಧಿಸಿತು. ಇದಕ್ಕೆ ಮುಖ್ಯ ಕಾರಣ ಜೆಮಿಮಾ ರೋಡ್ರಿಗಸ್​. ಏಕೆಂದರೆ, ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ, ಭಾರತ ಫೈನಲ್​ಗೇರಲು ನೆರವಾದರು. ಅಂದು ಜೆಮಿಮಾ ಅವರು ಏಕಾಂಗಿ ಹೋರಾಟ ನಡೆಸಿದರು. ಈ ಒಂದು ಇನ್ನಿಂಗ್ಸ್​ನಿಂದ ರಾತ್ರೋರಾತ್ರಿ ಜೆಮಿಮಾ ಸ್ಟಾರ್​ ಆಗಿಬಿಟ್ಟರು. ಅಂದು ತಮ್ಮ ಇನ್ನಿಂಗ್ಸ್​ ಬಗ್ಗೆ ಮಾತನಾಡಿದ್ದ ಜೆಮಿಮಾ, ನನ್ನ ಶತಕಕ್ಕೆ ಯೇಸುವಿನ ಆಶೀರ್ವಾದವೇ ಕಾರಣ ಎಂದಿದ್ದರು. ಅಂದು ಕೂಡ ಜೆಮಿಮಾ, ಸಿಕ್ಕಾಪಟ್ಟೆ ಟ್ರೋಲ್​ಗೆ ಗುರಿಯಾಗಿದ್ದರು. ಅದೇ ಹೇಳಿಕೆಯನ್ನು ಉಲ್ಲೇಖಿಸಿ, ಇಂದು ಡಬ್ಲ್ಯುಪಿಎಲ್​ ಫೈನಲ್​ನಲ್ಲಿ ಆರ್​ಸಿಬಿ ವಿರುದ್ಧ ಸೋತಿದ್ದಕ್ಕೆ ಮತ್ತೆ ಜೆಮಿಮಾರನ್ನು ಟ್ರೋಲ್​ ಮಾಡಲಾಗುತ್ತಿದೆ. ಯೇಸು, ಜೆಮಿಮಾರ ಕೈಹಿಡಿಯಲಿಲ್ಲ ಆದರೆ, ತಿರುಪತಿ ತಿಮ್ಮಪ್ಪ ಸ್ಮೃತಿಯ ಕೈಹಿಡಿದು, ಗೆಲುವು ತಂದು ಕೊಟ್ಟ ಎಂದು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ.

ನಟ ಪ್ರಕಾಶ್​ ರಾಜ್​ ಆಕ್ರೋಶ

ಜೆಮಿಮಾ ಮತ್ತು ಸ್ಮೃತಿ ಮಂಧಾನ ಅವರ ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ ನಟ ಮತ್ತು ರಾಜಕಾರಣಿ ಪ್ರಕಾಶ್ ರಾಜ್ ತುಂಬಾ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ಇದೊಂದು ವಿಷಕಾರಿ ಬೆಳವಣಿಗೆ ಎನ್ನುವ ಮೂಲಕ ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಇದು ಅಸಹ್ಯಕರ. ಕೊಳೆತ ಮನಸ್ಸುಗಳು ಮಾತ್ರ ಹೀಗೆ ಯೋಚಿಸಬಹುದು. ನಾವೆಲ್ಲ ಈ ಹಂತಕ್ಕೂ ಬಂದುಬಿಟ್ಟೆವಾ? ಎಂದು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡುವ ಮೂಲಕ ಪ್ರಕಾಶ್​ ರಾಜ್​ ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ.
ಪ್ರಕಾಶ್​ ರಾಜ್​ ಅವರ ಟ್ವೀಟ್​ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ಅನೇಕ ಬಿಜೆಪಿ ನಾಯಕರು ಪ್ರಕಾಶ್​ ರಾಜ್​ಗೆ ತಿರುಗೇಟು ನೀಡುತ್ತಿದ್ದಾರೆ. ತಿರುಮಲ ಶ್ರೀವಾರಿಯಿಂದಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆದ್ದಿದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net