ಭಾರತ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋಲಬೇಕು... ಈ ರೀತಿ ಹೇಳಿದ್ದೇಕೆ ಪಾಕ್ ಯೂಟ್ಯೂಬರ್?​! Pakistan Youtuber ​

ಭಾರತ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋಲಬೇಕೆಂದ ಪಾಕ್​ ಯೂಟ್ಯೂಬರ್​
ಭಾರತ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋಲಬೇಕೆಂದ ಪಾಕ್​ ಯೂಟ್ಯೂಬರ್​
Published on

ಪ್ರಮುಖ ಮುಖ್ಯಾಂಶಗಳು

  • ಫೆ.7 ರಿಂದ ಆರಂಭವಾಗಿರುವ ಟಿ20 ವಿಶ್ವಕಪ್ ಟೂರ್ನಮೆಂಟ್ ರೋಚಕ ಹಾದಿಯಲ್ಲಿ ಸಾಗುತ್ತಿದೆ
  • ಭಾರತ ಮತ್ತು ಪಾಕಿಸ್ತಾನ ಈಗಾಗಲೇ ಒಂದೊಂದು ಗೆಲುವು ದಾಖಲಿಸಿವೆ
  • ಫೆಬ್ರವರಿ 15 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್​ ಪಂದ್ಯ ನಡೆಯಬೇಕಿದೆ
  • ಪಾಕ್​ನ ಯೂಟ್ಯೂಬರ್ ಓರ್ವ ಪಾಕಿಸ್ತಾನ, ಭಾರತ ವಿರುದ್ಧ ಸೋಲುವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ
Pakistan Youtuber : ಫೆ.7 ರಿಂದ ಆರಂಭವಾಗಿರುವ ಟಿ20 ವಿಶ್ವಕಪ್ ಟೂರ್ನಮೆಂಟ್ ರೋಚಕ ಹಾದಿಯಲ್ಲಿ ಸಾಗುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಈಗಾಗಲೇ ಒಂದೊಂದು ಗೆಲುವು ದಾಖಲಿಸಿವೆ. ಫೆಬ್ರವರಿ 15 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್​ ಪಂದ್ಯ ನಡೆಯಬೇಕಿದೆ. ಆದರೆ, ಈ ಪಂದ್ಯ ನಡೆಯೋದು ಈಗಲೂ ಅನುಮಾನವಾಗಿದೆ. ಏಕೆಂದರೆ, ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿರುವುದಾಗಿ ಪಾಕಿಸ್ತಾನ ಈಗಾಗಲೇ ಘೋಷಿಸಿದೆ. ಇದೇ ಸಂದರ್ಭದಲ್ಲಿ, ಪಾಕ್​ ಅಭಿಮಾನಿಗಳು ತಮ್ಮ ತಂಡವನ್ನು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಪಾಕ್​ನ ಯೂಟ್ಯೂಬರ್ ಒಬ್ಬರು ಪಾಕಿಸ್ತಾನ, ಭಾರತ ವಿರುದ್ಧ ಸೋಲುವುದನ್ನು ನೋಡಲು ಬಯಸುತ್ತೇನೆ ಎಂಬ ಸಂಚಲನಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೀಮ್​ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಖಂಡಿತವಾಗಿಯೂ ಸೋಲುತ್ತದೆ. ನಮ್ಮ ತಂಡ ಸೋಲುವುದನ್ನು ನನ್ನ ಕಣ್ಣಾರೆ ನೋಡಲು ಬಯಸುತ್ತೇನೆ. ಭಾರತ ವಿರುದ್ಧ ಸೋತರೆ ನಮ್ಮ ತಂಡದ ಎಲ್ಲಾ ಕ್ರಿಕೆಟಿಗರು ಅಳುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಬಹಿರಂಗಪಡಿಸಿದ್ದಾರೆ. ಹೀಗಾಗಿ, ಅವರೆಲ್ಲರೂ ಅಳುವುದನ್ನು ನೋಡಲು ನಾನು ಬಯಸುತ್ತೇನೆ ಎಂದು ಹೇಳಿರುವ ವಿಡಿಯೋವನ್ನು ಪಾಕ್​ ಯೂಟ್ಯೂಬರ್ ಪೋಸ್ಟ್ ಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆದರೆ ಯಾರು ಗೆಲ್ಲುತ್ತಾರೆ ಎಂದು ಇದೇ ಸಮಯದಲ್ಲಿ ಯೂಟ್ಯೂಬರ್​, ಗೂಗಲ್ ಜೆಮಿನಿಯನ್ನು ಪ್ರಶ್ನೆ ಮಾಡಿದನು. ಇದಕ್ಕೆ ಉತ್ತರ ನೀಡಿದ ಜೆಮಿನಿ, ಈ ಹಿಂದಿನ ದಾಖಲೆಗಳನ್ನು ನೋಡಿದರೆ, ಫೆಬ್ರವರಿ 15 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆದರೆ, ಪಾಕಿಸ್ತಾನ ಖಂಡಿತವಾಗಿಯೂ ಸೋಲುತ್ತದೆ ಎಂದು ಗೂಗಲ್ ಜೆಮಿನಿ ಬಹಿರಂಗಪಡಿಸಿದೆ. ಈ ವಿಡಿಯೋ ಕೂಡ ವೈರಲ್ ಆಗಿದೆ. ಈ ರೀತಿಯಾಗಿ, ಟಿ20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿರುವ ಪಾಕಿಸ್ತಾನವನ್ನು ಆ ದೇಶದ ಅಭಿಮಾನಿಗಳೇ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ.
ನಿನ್ನೆ ಆರಂಭವಾದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ, ತನ್ನ ಮೊದಲ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಆಡಿತು. ಈ ಪಂದ್ಯವನ್ನು ಸುಲಭವಾಗಿ ಗೆಲ್ಲದೇ, ಎದ್ದು ಬಿದ್ದು ಗೆಲುವು ಸಾಧಿಸಿತು. ಸ್ವಲ್ಪ ಯಾಮಾರಿದ್ದರೆ ಮೊದಲ ಪಂದ್ಯದಲ್ಲೇ ಕ್ರಿಕೆಟ್​ ಶಿಶು ನೆದರ್ಲೆಂಡ್ಸ್​ ವಿರುದ್ಧ ಪಾಕ್​, ಹೀನಾಯ ಸೋಲು ಅನುಭವಿಸುವ ಸ್ಥಿತಿ ಎದುರಾಗುತ್ತಿತ್ತು. ಇದನ್ನು ನೆನಪಿಸಿದ ಯೂಟ್ಯೂಬರ್, ಪಾಕಿಸ್ತಾನ ಖಂಡಿತವಾಗಿಯೂ ಭಾರತ ವಿರುದ್ಧ ಸೋಲಲೇಬೇಕು ಎಂದು ಹೇಳುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾನೆ. ಬಾಬರ್‌ನಂತಹ ಆಟಗಾರ ತಂಡದಲ್ಲಿದ್ದರೆ ಪಾಕಿಸ್ತಾನ ಗೆಲ್ಲುವುದು ಅಸಾಧ್ಯ ಎನ್ನುವ ಮೂಲಕ ತಮ್ಮ ತಂಡವನ್ನೇ ಕಾಲೆಳೆದನು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net