ಸೂರ್ಯ ಕುಮಾರ್ ಯಾದವ್, ಅಕ್ಷರ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಅವರ ಕಠಿಣ ಪರಿಶ್ರಮದ ಆಧಾರದ ಮೇಲೆ ಟೀಮ್ ಇಂಡಿಯಾ ಗೆಲುವು ಸಾಧಿಸಿತು. ಟೀಮ್ ಇಂಡಿಯಾದ ಅಗ್ರಗಣ್ಯ ಆಟಗಾರರಾದ ಅಭಿಶೇಕ್ ಶರ್ಮಾ, ಇಶಾನ್ ಕಿಶಾನ್, ತಿಲಕ್ ವರ್ಮಾ, ಶಿವಂ ದುಬೆ, ರಿಂಕು ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಆಟಗಾರರೇ ಪ್ರಮುಖ ಪಂದ್ಯದಲ್ಲಿ ವಿಫಲರಾದರು. ನಾಯಕ ಸೂರ್ಯಕುಮಾರ್ ಅವರು ನಾಯಕತ್ವದ ಜವಬ್ದಾರಿಯುತ ಆಟವಾಡಿದ್ದರಿಂದ ಟೀಮ್ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಬಳಿಕ ಬೌಲರ್ಗಳ ನಿಖರ ದಾಳಿಯ ನೆರವಿನಿಂದಾಗಿ ಅಂತಿಮವಾಗಿ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿತು.