ರೋಲ್​ ಮಾಡೆಲ್​ಗಳು ಹೀಗೆಲ್ಲ ಮಾಡಲ್ಲ! ಪರೋಕ್ಷವಾಗಿ ಐಸಿಸಿ, ಟೀಮ್ ಇಂಡಿಯಾಗೆ ಕುಟುಕಿದ ಪಾಕ್​ ನಾಯಕ | Pakistan

ಪಾಕಿಸ್ತಾನ ತಂಡದ ನಾಯಕ
ಪಾಕಿಸ್ತಾನ ತಂಡದ ನಾಯಕ
Published on

ಪ್ರಮುಖ ಮುಖ್ಯಾಂಶಗಳು

  • ಇಂದಿನಿಂದ ಟಿ20 ವಿಶ್ವಕಪ್​ ಟೂರ್ನಿ ಆರಂಭ
  • ಟೂರ್ನಿ ಆರಂಭಕ್ಕೂ ಮುನ್ನ ಪಾಕ್​ ಕ್ಯಾಪ್ಟನ್ ಹೇಳಿಕೆ ವೈರಲ್
  • ಪರೋಕ್ಷವಾಗಿ ಟೀಮ್ ಇಂಡಿಯಾ ಮತ್ತು ಐಸಿಸಿ ಕುಟುಕಿದ ಸಲ್ಮಾನ್ ಅಲಿ ಅಘಾ
ನವದೆಹಲಿ: ಇಂದಿನಿಂದ (ಫೆ.07) ಟಿ20 ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದ್ದು, ಕ್ರಿಕೆಟ್​ ಪ್ರಿಯರಿಗಂತು ಮಾರ್ಚ್​ 8 ರವರೆಗೆ ಭರಪೂರ ಮನರಂಜನೆ ಸಿಗಲಿದೆ. ಈ ಮಧ್ಯೆ, ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದ ಇದೀಗ ದೊಡ್ಡ ಮಟ್ಟದಲ್ಲಿ ಗೊಂದಲ ಸೃಷ್ಟಿಸಿದೆ. ಫೆ.15ರಂದು ಕೊಲೊಂಬೊದಲ್ಲಿ ನಡೆಯಲಿರುವ ಇಂಡೋ-ಪಾಕ್​ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿರುವ ಪಾಕಿಸ್ತಾನ ಕ್ರಿಕೆಟ್​ ಮಂಡಳಿ, ತಮ್ಮ ಮಾತಿಗೆ ನಿಲ್ಲುವುದಾಗಿ ಸ್ಪಷ್ಟಪಡಿಸಿದೆ. ಟೂರ್ನಿ ಆರಂಭಕ್ಕೂ ಮುನ್ನ ಕ್ಯಾಪ್ಟನ್​ ಸಲ್ಮಾನ್ ಅಲಿ ಅಘಾ ಆಡಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಹಚ್ಚಿದೆ.

ನಾವು ರೋಲ್​ ಮಾಡೆಲ್ಸ್​!

"ಪ್ರಸ್ತುತ, ಒಂದಷ್ಟು ವಿಷಯಗಳನ್ನು ಬದಿಗಿಟ್ಟು ಮೈದಾನದಲ್ಲಿ ಗೆಲುವಿನತ್ತ ಗಮನ ಹರಿಸಬೇಕಿದೆ. ಹೊರಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಒಂದು ತಂಡವಾಗಿ ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು. ಇನ್ನೂ ಹ್ಯಾಂಡ್​ ಶೇಕ್​ ವಿವಾದಕ್ಕೆ ಪ್ರತಿಕ್ರಿಯಿಸಿದ ಅಲಿ, ಇಂತಹ ವಿವಾದಗಳು ಆಟಕ್ಕೆ ಒಳ್ಳೆಯದಲ್ಲ. ನಾವು ವೈಯಕ್ತಿಕವಾಗಿ ಅದರ ಬಗ್ಗೆ ಕೆಟ್ಟದಾಗಿ ಭಾವಿಸದಿದ್ದರೂ, ಕ್ರಿಕೆಟ್‌ಗೆ ಇದು ಸೂಕ್ತವಲ್ಲ. ನಾವು ರೋಲ್​ ಮಾಡೆಲ್ಸ್​. ಇದು ನಾವೇನು ಮಾಡ್ತೇವೋ, ಮಕ್ಕಳು ಅದನ್ನೇ ಕಲಿಯುತ್ತಾರೆ. ಹೀಗಾಗಿಯೇ ಅಂತಹ ವಿಷಯಗಳನ್ನು ಆದಷ್ಟು ತಪ್ಪಿಸಬೇಕು" ಎಂದಿದ್ದಾರೆ.
ಪಾಕ್ ತಂಡದ ನಾಯಕನ ರೋಲ್ ಮಾಡೆಲ್ ಹೇಳಿಕೆಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದೆ. ಮತ್ತೊಂದೆಡೆ, ಈಗಾಗಲೇ ಹೇಳಿರುವಂತೆ ಪಾಕ್​ ಫೆ.15ರಂದು ಭಾರತ ಎದುರು ಆಡದೆ ಸುಮ್ಮನೆ ಇರಲಿದ್ಯಾ ಅಥವಾ ಕೊನೆ ಕ್ಷಣದಲ್ಲಿ ಕಣಕ್ಕಿಳಿಯಲಿದೆಯೇ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.
ಒಟ್ಟು 20 ತಂಡ, 50 ಪಂದ್ಯ
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ ಮೆಗಾ ಟೂರ್ನಮೆಂಟ್​ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿದ್ದು, ಒಟ್ಟು 50 ಪಂದ್ಯಗಳು ನಡೆಯಲಿವೆ. ಫೈನಲ್​ ಪಂದ್ಯ ಮಾರ್ಚ್​ 8ರಂದು ಅಹಮದಾಬಾದ್​ನಲ್ಲಿ ನಡೆಯಲಿದೆ. ಅಂದಹಾಗೆ, 2026ರ ಟಿ20 ವಿಶ್ವಕಪ್‌ನ ಸ್ವರೂಪ 2024ರಲ್ಲಿ ನಡೆದ ಪಂದ್ಯಾವಳಿಯಂತೆಯೇ ಇರುತ್ತದೆ. 2024ರಲ್ಲಿ 20 ತಂಡಗಳು ಮೊದಲ ಬಾರಿಗೆ ಈ ಪಂದ್ಯಾವಳಿಯಲ್ಲಿ ಆಡಿದ್ದವು. ಮೊದಲ ಸುತ್ತಿನಲ್ಲಿ, 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಆಯಾ ತಂಡಗಳು ತಮ್ಮ ಗುಂಪಿನಲ್ಲಿರುವ ಇತರ ತಂಡಗಳೊಂದಿಗೆ ರೌಂಡ್-ರಾಬಿನ್ ಸ್ವರೂಪದಲ್ಲಿ ಆಡುತ್ತವೆ. ನಾಲ್ಕು ಗುಂಪುಗಳಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಮುನ್ನಡೆಯುತ್ತವೆ.

ಟಿ20 ವಿಶ್ವಕಪ್​ 2026 ಗ್ರೂಪ್​ಗಳು

ಗ್ರೂಪ್​ ಎ: ಭಾರತ (X1), ನಮೀಬಿಯಾ, ನೆದರ್‌ಲ್ಯಾಂಡ್ಸ್, ಪಾಕಿಸ್ತಾನ (Y3), ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ.
ಗ್ರೂಪ್​ ಬಿ: ಆಸ್ಟ್ರೇಲಿಯಾ (X2), ಐರ್ಲೆಂಡ್, ಓಮನ್, ಶ್ರೀಲಂಕಾ (Y4), ಜಿಂಬಾಬ್ವೆ.
ಗ್ರೂಪ್​ ಸಿ: ಇಂಗ್ಲೆಂಡ್ (Y1), ಇಟಲಿ, ನೇಪಾಳ, ಸ್ಕಾಟ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ (X3).
ಗ್ರೂಪ್​ ಡಿ: ಅಫ್ಘಾನಿಸ್ತಾನ, ಕೆನಡಾ, ನ್ಯೂಜಿಲೆಂಡ್ (Y2), ದಕ್ಷಿಣ ಆಫ್ರಿಕಾ (X4), ಯುನೈಟೆಡ್ ಅರಬ್ ಎಮಿರೇಟ್ಸ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net