

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ (RCB) ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲಕ್ಕೆ ಫ್ರಾಂಚೈಸಿ ತೆರೆ ಎಳೆದಿದ್ದು, ಮಧ್ಯಪ್ರದೇಶದ ಮೂಲದ ಸ್ಫೋಟಕ ಆಟಗಾರ ರಜತ್ ಪಾಟಿದಾರ್ಗೆ (Rajat Patidar) ಕ್ಯಾಪ್ಟನ್ಸಿ ಪಟ್ಟವನ್ನು ನೀಡಿದೆ. ಈ ಮೊದಲು ವಿರಾಟ್ಗೆ ಕ್ಯಾಪ್ಟನ್ಸಿ ಪಟ್ಟ ನೀಡಲಾಗುತ್ತದೆ ಎಂದು ಊಹಿಸಲಾಗಿತ್ತಾದರು ಅಂತಿಮವಾಗಿ ಫ್ರಾಂಚೈಸಿ ಯುವ ಹಾಗೂ ಅನುಭವಿ ಆಟಗಾರನಿಗೆ ಮಣೆ ಹಾಕುವ ಮೂಲಕ ಅಚ್ಚರಿ ಮೂಡಿಸಿದೆ.
ಇನ್ನೂ ಆರ್ಸಿಬಿ (RCB) ನೂತನ ನಾಯಕನ ಆಯ್ಕೆ ಹಿಂದೆ ಹಲವು ಕಾರಣಗಳು ಅಡಗಿದ್ದು, ಪ್ರಮುಖವಾಗಿ ಏಳು ಕಾರಣಗಳನ್ನು ಉಲ್ಲೇಖಿಸಲಾಗುತ್ತಿದೆ. 20222ರಿಂದಲೂ ಆರ್ಸಿಬಿ ಭಾಗವಾಗಿರುವ ರಜತ್ ತಮ್ಮ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, ಫ್ಯಾನ್ಸ್ಗೆ ಅಚ್ಚುಮೆಚ್ಚಾಗಿದ್ದಾರೆ. ರಜತ್ ಆಯ್ಕೆ ಹಿಂದೆ ಏಳು ಕಾರಣಗಳನ್ನು ಉಲ್ಲೇಖಿಸಲಾಗಿದ್ದು, ಅಭಿಮಾನಿಗಳ ಆಸೆಯನ್ನು ಸಾಕಾರಗೊಳಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.
ಮಧ್ಯಪ್ರದೇಶ ಮೂಲದ 31 ವರ್ಷದ ರಜತ್ ಪಾಟಿದಾರ್ ಇತ್ತೀಚೆಗೆ ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತನ್ನ ತವರು ರಾಜ್ಯ ತಂಡದ ನಾಯಕರಾಗಿ ಫೈನಲ್ಗೇರಿಸಿದ್ದರು. ಅಲ್ಲದೆ ಬ್ಯಾಟಿಂಗ್ನಲ್ಲೂ ಮಿಂಚಿ 428 ರನ್ಗಳೊಂದಿಗೆ ಟೂರ್ನಿಯ 2ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದರು. ಅಲ್ಲದೇ, ಕಳೆದ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ಪರ ಪಾಟೀದರ್ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಹಿನ್ನೆಲೆಯಲ್ಲಿ ರಜತ್ ಪಾಟಿದಾರ್, ಆರ್ಸಿಬಿ ನಾಯಕತ್ವದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದರು. ಅಂತಿಮವಾಗಿ ಫ್ರಾಂಚೈಸಿ (RCB) ಅವರನ್ನೇ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.