6,6,6,6,6,6…ಒಂದೇ ಓವರ್’ನಲ್ಲಿ 6 ಸಿಕ್ಸರ್: ಯುವರಾಜ್ ಸಿಂಗ್ ಕ್ಲಬ್ ಸೇರಿದ ನೇಪಾಳ ಬ್ಯಾಟರ್, ಇಲ್ಲಿದೆ ವಿಡಿಯೋ..!

nepal batsman
Published on

ಅಲ್ ಅಮರತ್: ಟಿ20 ಕ್ರಿಕೆಟ್ ನ ಇತಿಹಾಸದಲ್ಲೇ ಐತಿಹಾಸಿಕ ದಾಖಲೆಯೊಂದು ನಿರ್ಮಾಣವಾಗಿದೆ. ಒಂದೇ ಓವರ್​ನಲ್ಲಿ 6 ಸಿಕ್ಸರ್​ ಸಿಡಿಸಿದ ನೇಪಾಳದ ಬ್ಯಾಟರ್​ ಭಾರತದ ಯುವರಾಜ್​ ಸಿಂಗ್​ ಕ್ಲಬ್​ ಸೇರಿದ್ದಾರೆ.

ನೇಪಾಳದ ದಿಪೇಂದ್ರ ಸಿಂಗ್ ಐರಿ ಇಲ್ಲಿ ನಡೆಯುತ್ತಿರುವ ಎಸಿಸಿ ಪುರುಷರ ಪ್ರೀಮಿಯರ್ ಕಪ್ ಟಿ20 ಅಂತಾರಾಷ್ಟ್ರೀಯ ಪಂದ್ಯದ ವೇಳೆ ಶನಿವಾರ ಆತಿಥೇಯ ಕತಾರ್ ವಿರುದ್ಧ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದ್ದಾರೆ ಸಾಧನೆ ಮಾಡಿದ್ದಾರೆ. ಈ ಮೂಲಕ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಭಾರತದ ಆಲ್​ರೌಂಡರ್ ಯುವರಾಜ್ ಸಿಂಗ್ ಅವರು 2007ರ ಟಿ-20 ವಿಶ್ವಕಪ್ ವೇಳೆ ಇಂಗ್ಲೆಂಡ್​ನ ಸ್ಟುವರ್ಟ್ ಬ್ರಾಡ್ ವಿರುದ್ಧ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ನಂತರ ವೆಸ್ಟ್​ ಇಂಡೀಸ್​ನ ಕೀರಾನ್ ಪೊಲಾರ್ಡ್ 2021 ರಲ್ಲಿ ಶ್ರೀಲಂಕಾದ ಅಕಿಲಾ ದನಂಜಯ ವಿರುದ್ಧ ಈ ಸಾಧನೆ ಮಾಡಿದ್ದರು. ಇದೀಗ ನೇಪಾಳದ ದಿಪೇಂದ್ರ ಸಿಂಗ್ ಐರಿ ಅವರು ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿ ಆ ಗುಂಪನ್ನು ಸೇರಿದ್ದಾರೆ.

ಎಸಿಸಿ ಪ್ರೀಮಿಯರ್ ಕಪ್ ಸಮಯದಲ್ಲಿ ನಡೆದ ಪಂದ್ಯಾವಳಿಯು ಸದ್ಯ ಎಲ್ಲರ ಗಮನ ಸೆಳೆದಿದೆ. ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ 7 ವಿಕೆಟ್ ಗೆ 210 ರನ್ ಗಳಿಸಿತು.

ಇದರಲ್ಲಿ ದೀಪೇಂದ್ರ ಸಿಂಗ್ ಐರಿ ಅವರ ಅಜೇಯ 64 ರನ್ ಗಳನ್ನು ಗಳಿಸಿದ್ದರು. ಈ ಬ್ಯಾಟ್ಸ್‌ಮನ್ ಕತಾರ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಈ ಮೂಲಕ ಒಂದು ಓವರ್‌ನಲ್ಲಿ ಸತತ 6 ಸಿಕ್ಸರ್‌ಗಳ ವಿಶ್ವದಾಖಲೆಯನ್ನು ಸರಿಗಟ್ಟಿ ಹೊಸ ಇತಿಹಾಸ ನಿರ್ಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net