ಸ್ಟಾರ್​ ಬ್ಯಾಟರ್​ ಜಾಸ್​ ಬಟ್ಲರ್​ಗೆ ಗಾಳ! ಐಪಿಎಲ್​ ಹರಾಜಿನತ್ತ ಈ ಐದು ಬಲಿಷ್ಠ ಫ್ರಾಂಚೈಸಿಗಳ ಚಿತ್ತ | Jos Buttler

ವಿಜಯವಾಣಿ - 2024-11-11T162340.704
Published on

ನವದೆಹಲಿ: ಈಗಾಗಲೇ ಐಪಿಎಲ್​ ರಿಟೆನ್ಶನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫ್ರಾಂಚೈಸಿಗಳಿಂದ ಸ್ಟಾರ್​ ಆಟಗಾರರೇ ಹೊರಬಿದ್ದಿದ್ದಾರೆ.​ ಇದೀಗ ಐಪಿಎಲ್​ ಹರಾಜಿನತ್ತ ಮುಖ ಮಾಡಿರುವ ಆಟಗಾರರನ್ನು ತಮ್ಮ ಫ್ರಾಂಚೈಸಿಗೆ ಎಳೆದುಕೊಳ್ಳುವುದು ಆಯಾ ತಂಡಗಳಿಗೆ ದೊಡ್ಡ ಸವಾಲಾಗಿದೆ. ಇದಕ್ಕೆ ಕಾರಣ, ನಿಗದಿತ ಬಜೆಟ್​ನಡಿ ಕ್ರಿಕೆಟಿಗರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಈ ಮಧ್ಯೆ ಅವರು ಟೀಮ್​ಗೆ ಲಾಭದಾಯಕವೇ, ಅತ್ಯುತ್ತಮ ಆಟಗಾರರೇ, ಉತ್ತಮ ಕೊಡುಗೆ ಕೊಡಬಲ್ಲರೇ? ಈ ಎಲ್ಲಾ ಅಂಶವನ್ನು ಗಮನದಲ್ಲಿಟ್ಟುಕೊಂಡು, ನಿರ್ದಿಷ್ಟ ಬಜೆಟ್​ನಲ್ಲಿ ಖರೀದಿ ಮಾಡಬೇಕು. ಈ ಕುರಿತು ಸದ್ಯ 10 ತಂಡಗಳಲ್ಲಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸ್ಟಾರ್​ ಆಟಗಾರರ ಪೈಕಿ ಕಳೆದ ಸೀಸನ್​ ರಾಜಸ್ಥಾನ ರಾಯಲ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್​ನ ಸ್ಫೋಟಕ ಬ್ಯಾಟರ್​ ಜಾಸ್​ ಬಟ್ಲರ್ (Jos Buttler)​ ಮೇಲೆ ಇದೀಗ ಐದು ಬಲಿಷ್ಠ ಫ್ರಾಂಚೈಸಿಗಳು ಕಣ್ಣಿಟ್ಟಿದ್ದು, ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಲು ಎದುರುನೋಡುತ್ತಿವೆ ಎಂದು ವರದಿಯಾಗಿದೆ.

ಪಂಜಾಬ್​ ಕಿಂಗ್ಸ್​ನಿಂದ ಶಿಖರ್ ಧವನ್​, ಲಖನೌ ಸೂಪರ್ ಜೈಂಟ್ಸ್​ನ​ ಕೆ.ಎಲ್. ರಾಹುಲ್​, ಡೆಲ್ಲಿ ಕ್ಯಾಪಿಟಲ್ಸ್​ನ ರಿಷಭ್ ಪಂತ್​, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್​​ ಮತ್ತು ಕೋಲ್ಕತ ನೈಟ್​ ರೈಡರ್ಸ್​ನಿಂದ ಶ್ರೇಯಸ್ ಅಯ್ಯರ್, ಮಿಚೆಲ್ ಸ್ಟಾರ್ಕ್​ ರಿಟೆನ್ಶನ್​ ಪ್ರಕ್ರಿಯೆಯಲ್ಲಿ ತಮ್ಮ ತಂಡದಿಂದ ಹೊರಬಿದ್ದ ಸ್ಟಾರ್​ ಕ್ರಿಕೆಟಿಗರು. ಇವರೊಂದಿಗೆ ಕೆಲವು ತಂಡದ ಆಟಗಾರರಿಗೂ ಐಪಿಎಲ್ ಹರಾಜಿನಲ್ಲಿ ಬೇಡಿಕೆ ಹೆಚ್ಚಿರುವುದು ಹುಬ್ಬೇರುವ ಸಂಗತಿ ಎಂದೇ ಹೇಳಬಹುದು.

ಅದ್ಭುತ ಓಪನರ್​ ಮತ್ತು ವಿಕೆಟ್​ ಕೀಪಿಂಗ್ ಕೌಶಲ್ಯ

ಸದ್ಯ ಈ ಎಲ್ಲಾ ಆಟಗಾರರ ಮಧ್ಯೆ ಜಾಸ್​ ಬಟ್ಲರ್​ ಅವರ ಅಬ್ಬರದ ಬ್ಯಾಟಿಂಗ್ ವೈಖರಿ ಹಾಗೂ ಉತ್ತಮ ವಿಕೆಟ್ ಕೀಪಿಂಗ್ ಕೌಶಲ್ಯಗಳ ಮೇಲೆ ಕಣ್ಣಾಯಿಸಿರುವ ಹಲವು ಪ್ರಾಂಚೈಸಿಗಳು, ಬಟ್ಲರ್​ ಕೊಡುವ ಅದ್ಭುತ ಓಪನಿಂಗ್ ಆಟ, ತಂಡದ ರನ್​ಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ ಅವರಂತಹ ಓಪನಿಂಗ್ ಬ್ಯಾಟ್ಸ್​ಮನ್ ನಮ್ಮ ತಂಡಕ್ಕೆ ಅಗತ್ಯವಿದೆ ಎಂದು ಭಾವಿಸಿದೆ. ಈ ಸಾಲಿನಲ್ಲಿ ಐಪಿಎಲ್​ ಆವೃತ್ತಿಯ ಐದು ಬಲಿಷ್ಠ ತಂಡಗಳು ಮುಂಚೂಣಿಯಲ್ಲಿವೆ.

ಐಪಿಎಲ್​ 2025ರ ಹರಾಜಿನಲ್ಲಿ ಜಾಸ್​ ಬಟ್ಲರ್ ಮೇಲೆ ಗುರಿಯಿಟ್ಟಿರುವ 5 ಫ್ರಾಂಚೈಸಿಗಳು ಹೀಗಿವೆ

1. ಕೋಲ್ಕತ ನೈಟ್ ರೈಡರ್ಸ್​

2. ರಾಯಲ್ ಚಾಲೆಂಜರ್ಸ್​ ಬೆಂಗಳೂರು

3. ಚೆನ್ನೈ ಸೂಪರ್ ಕಿಂಗ್ಸ್​

4. ಪಂಜಾಬ್ ಕಿಂಗ್ಸ್​

5. ಮುಂಬೈ ಇಂಡಿಯನ್ಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net