ವಿರಾಟ್​ ಕೊಹ್ಲಿಗೆ 4ನೇ, ರೋಹಿತ್​ಗೆ 3ನೇ ವಿಶ್ವಕಪ್​; ಆರು ಆಟಗಾರರಿಗೆ ಚೊಚ್ಚಲ ವಿಶ್ವಕಪ್​ ಅವಕಾಶ!

kohli web
Published on

ಬೆಂಗಳೂರು: ಮುಂಬರುವ ಏಕದಿನ ವಿಶ್ವಕಪ್​ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ 2011ರ ವಿಶ್ವಕಪ್​ ವಿಜೇತ ತಂಡದ ಏಕೈಕ ಸದಸ್ಯರಾಗಿರುವ ವಿರಾಟ್​ ಕೊಹ್ಲಿಗೆ (2011, 2015, 2019) ಇದು 4ನೇ ವಿಶ್ವಕಪ್​ ಎನಿಸಿದೆ.

ಉಳಿದಂತೆ ರೋಹಿತ್​ ಶರ್ಮ, ಮೊಹಮದ್​ ಶಮಿ, ರವೀಂದ್ರ ಜಡೇಜಾಗೆ (2015, 2019) ಇದು 3ನೇ ವಿಶ್ವಕಪ್​ ಆಗಿದ್ದರೆ, ಹಾರ್ದಿಕ್​ ಪಾಂಡ್ಯ, ಕೆಎಲ್​ ರಾಹುಲ್​, ಕುಲದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ (2019), ಅಕ್ಷರ್​ ಪಟೇಲ್​ಗೆ (2015) ಇದು 2ನೇ ವಿಶ್ವಕಪ್​. ಶ್ರೇಯಸ್​ ಅಯ್ಯರ್​, ಶುಭಮಾನ್​ ಗಿಲ್​, ಸೂರ್ಯಕುಮಾರ್​, ಇಶಾನ್​ ಕಿಶನ್​, ಮೊಹಮದ್​ ಸಿರಾಜ್​, ಶಾರ್ದೂಲ್​ ಠಾಕೂರ್​ಗೆ ಇದು ಚೊಚ್ಚಲ ವಿಶ್ವಕಪ್​ ಆಗಿದೆ.

ಕನ್ನಡಿಗ ಕೆಎಲ್​ ರಾಹುಲ್​ 2019ರ ವಿಶ್ವಕಪ್​ನಲ್ಲಿ ಆಡಿದ್ದರೂ, ಆಗ ಅವರು ಕೇವಲ ಬ್ಯಾಟರ್​ ಆಗಿದ್ದರು. ಹೀಗಾಗಿ ಈ ಬಾರಿ ಸಯ್ಯದ್​ ಕಿರ್ಮಾನಿ (1983) ಮತ್ತು ರಾಹುಲ್​ ದ್ರಾವಿಡ್​ (2003) ನಂತರದಲ್ಲಿ ಏಕದಿನ ವಿಶ್ವಕಪ್​ ತಂಡದಲ್ಲಿ ವಿಕೆಟ್​ ಕೀಪರ್​ ಆಗಿ ಸ್ಥಾನ ಸಂಪಾದಿಸಿದ 3ನೇ ಕನ್ನಡಿಗ ಎಂಬ ಹೆಗ್ಗಳಿಕೆ ಕೆಎಲ್​ ರಾಹುಲ್​ ಅವರದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net