ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್‌ಗೆ ಇಂದು 49ನೇ ಜನ್ಮದಿನದ ಸಂಭ್ರಮ; ಇಲ್ಲಿದೆ ಅವರ 49 ದಾಖಲೆಗಳ ಮೆಲುಕು

sachin web
Published on

ಬೆಂಗಳೂರು: ಎರಡು ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ್ದ ದಿಗ್ಗಜ ಸಚಿನ್ ತೆಂಡುಲ್ಕರ್ ಭಾನುವಾರ 49ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಈಗಲೂ ಅಚ್ಚಳಿಯದೆ ಉಳಿದಿರುವ ಸಚಿನ್, ಈ ಬಾರಿ ತಾನು ಐಕಾನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಸತತ ಸೋಲಿನ ನಡುವೆ ಜನ್ಮದಿನದ ಸಂಭ್ರಮವನ್ನು ಆಚರಿಸಿಕೊಳ್ಳಬೇಕಾಗಿದೆ. ಮುಂಬೈ ಇಂಡಿಯನ್ಸ್ ತಂಡ ಭಾನುವಾರವಾದರೂ ಐಪಿಎಲ್-15ರಲ್ಲಿ ಗೆಲುವಿನ ಖಾತೆ ತೆರೆದು ಸಚಿನ್‌ಗೆ ಜನ್ಮದಿನದ ಉಡುಗೊರೆ ನೀಡುವುದೇ ಎಂಬ ಕುತೂಹಲವಿದೆ. ಜತೆಗೆ ಪುತ್ರ ಅರ್ಜುನ್ ತೆಂಡುಲ್ಕರ್ ತಂದೆಯ ಜನ್ಮದಿನದಂದೇ ಐಪಿಎಲ್‌ಗೆ ಪದಾರ್ಪಣೆ ಮಾಡುವರೇ ಎಂಬ ಕುತೂಹಲವೂ ಇದೆ. ಇದರ ನಡುವೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ 49 ಪ್ರಮುಖ ದಾಖಲೆಗಳ ಸಂಕ್ಷಿಪ್ತ ಮೆಲುಕು ಇಲ್ಲಿದೆ.

1. ಭಾರತರತ್ನ ಪ್ರಶಸ್ತಿ ಪುರಸ್ಕೃತ ಏಕೈಕ ಕ್ರೀಡಾಪಟು. ಖೇಲ್‌ರತ್ನ, ಅರ್ಜುನ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳನ್ನೆಲ್ಲ ಪಡೆದ ಏಕೈಕ ಕ್ರಿಕೆಟಿಗ.

2. ಟೆಸ್ಟ್ (15,921) ಮತ್ತು ಏಕದಿನ (18,426) ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್.

3. ಅತಿ ಹೆಚ್ಚು ಟೆಸ್ಟ್ (200) ಮತ್ತು ಏಕದಿನ ಪಂದ್ಯ (463) ಪಂದ್ಯ ಆಡಿದ ಆಟಗಾರ.

4. ಟೆಸ್ಟ್ (51) ಮತ್ತು ಏಕದಿನ (49) ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್.

5. ಅತಿ ಹೆಚ್ಚು ಮೈದಾನಗಳಲ್ಲಿ ಟೆಸ್ಟ್ (59) ಮತ್ತು ಏಕದಿನ (96) ಪಂದ್ಯ ಆಡಿದ ಸಾಧನೆ.

6. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ (34,347).

7. ಸತತವಾಗಿ ಅತಿಹೆಚ್ಚು ಏಕದಿನ (185) ಮತ್ತು ಟೆಸ್ಟ್ (85) ಪಂದ್ಯ ಆಡಿದ ದಾಖಲೆ.

8. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬೌಂಡರಿ (4,074) ಸಿಡಿಸಿರುವುದು.

9. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ (72).

10. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕದ ಸಾಧನೆ.

11. ಟೆಸ್ಟ್ (5) ಮತ್ತು ಏಕದಿನ (15) ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸರಣಿಶ್ರೇಷ್ಠ ಪ್ರಶಸ್ತಿ.

12. 4 ಬಾರಿ ಒಂದೇ ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ಸಾವಿರಕ್ಕಿಂತ ಹೆಚ್ಚು ರನ್.

13. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್.

14. ಒಂದೇ ದೇಶದ ವಿರುದ್ಧ (ಆಸ್ಟ್ರೇಲಿಯಾ) ಅತಿ ಹೆಚ್ಚು 6,707 ರನ್ ಗಳಿಕೆ.

15. ಒಂದೇ ದೇಶದ ವಿರುದ್ಧ (ಆಸ್ಟ್ರೇಲಿಯಾ) ಅತಿ ಹೆಚ್ಚು 20 ಶತಕ ಸಾಧನೆ.

16. ಭಾರತ ಪರ ಟೆಸ್ಟ್ ಮತ್ತು ಏಕದಿನ (16 ವರ್ಷ) ಪಂದ್ಯ ಆಡಿದ ಅತಿ ಕಿರಿಯ ಆಟಗಾರ.

17. ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ (8,705).

18. ಏಕದಿನದಲ್ಲಿ ಆರಂಭಿಕನಾಗಿ ಅತಿ ಹೆಚ್ಚು (15,310) ರನ್, ಶತಕ (45), ಅರ್ಧಶತಕ (75).

19. ಟೆಸ್ಟ್‌ನಲ್ಲಿ ಒಂದೇ (4) ಕ್ರಮಾಂಕದಲ್ಲಿ ಅತಿ ಹೆಚ್ಚು (13,482) ರನ್, ಶತಕ (44), ಅರ್ಧಶತಕ (58).

20. 20 ವರ್ಷ ವಯಸ್ಸಿಗೆ ಮುನ್ನವೇ ಟೆಸ್ಟ್ ಕ್ರಿಕೆಟ್‌ನಲ್ಲಿ 5 ಶತಕ ಸಾಧನೆ.

21. 1990ರಿಂದ 1998ರ ನಡುವೆ ಸತತವಾಗಿ 239 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕೆ.

22. ಟೆಸ್ಟ್‌ನಲ್ಲಿ ಅತಿ ಹೆಚ್ಚು 50 ಪ್ಲಸ್ (51 ಶತಕ+68 ಅರ್ಧಶತಕ=119) ಗಳಿಕೆ.

23. ಟೆಸ್ಟ್‌ನಲ್ಲಿ ಔಟಾಗುವ ನಡುವೆ ಅತಿ ಹೆಚ್ಚು 497 ರನ್ (241*, 60*, 194*, 2).

24. ಏಕದಿನದಲ್ಲಿ 3 ಬಾರಿ 175 ಪ್ಲಸ್ ರನ್ ಇನಿಂಗ್ಸ್.

25. ರಣಜಿ ಟ್ರೋಫಿ, ಇರಾನಿ ಟ್ರೋಫಿ ಮತ್ತು ದುಲೀಪ್ ಟ್ರೋಫಿ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಏಕೈಕ ಆಟಗಾರ.

26. ಭಾರತ ಪರ ಅತಿ ಹೆಚ್ಚು ಟೆಸ್ಟ್ ಗೆಲುವು (70) ಮತ್ತು ಸೋಲು (56).

27. ಜಿಂಬಾಬ್ವೆ ಮತ್ತು ಬಾಂಗ್ಲಾ ಹೊರತಾಗಿ ಟೆಸ್ಟ್ ಆಡುವ ಉಳಿದ 7 ರಾಷ್ಟ್ರಗಳ ವಿರುದ್ಧ ಕನಿಷ್ಠ ಒಂದು ಸಾವಿರ ರನ್.

28. ಟೆಸ್ಟ್‌ನಲ್ಲಿ ಪೂರ್ಣಗೊಂಡ ಇನಿಂಗ್ಸ್‌ಗಳ ಪೈಕಿ 53 ಬಾರಿ ತಂಡದ ಗರಿಷ್ಠ ಸ್ಕೋರರ್.

29. ಟೆಸ್ಟ್ ಆಡುವ ಎಲ್ಲ 9 ದೇಶಗಳ ವಿರುದ್ಧ ಕನಿಷ್ಠ 2 ಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್‌ಮನ್.

30. ಆರಂಭಿಕನಾಗಿ ಸೌರವ್ ಗಂಗೂಲಿ ಜತೆ ಅತಿ ಹೆಚ್ಚು ರನ್ (6,609), ಶತಕದ (21) ಜತೆಯಾಟ.

31. ಏಕದಿನದಲ್ಲಿ ಶ್ರೀಲಂಕಾ (3,113) ಮತ್ತು ಆಸ್ಟ್ರೇಲಿಯಾ ವಿರುದ್ಧ (3,077) 3 ಸಾವಿರಕ್ಕಿಂತ ಹೆಚ್ಚು ರನ್.

32. ಕ್ಯಾಲೆಂಡರ್ ವರ್ಷವೊಂದರಲ್ಲಿ (1998) ಅತಿ ಹೆಚ್ಚು 9 ಏಕದಿನ ಶತಕ.

33. ಅತಿ ಹೆಚ್ಚು 6 ವಿಶ್ವಕಪ್‌ಗಳಲ್ಲಿ (1992ರಿಂದ 2011) ಆಡಿದ ದಾಖಲೆಯಲ್ಲಿ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಜತೆ ಸಮಬಲ.

34. ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ (2,278), ಶತಕ (6), ಅರ್ಧಶತಕ (15).

35. ಒಂದೇ ವಿಶ್ವಕಪ್‌ನಲ್ಲಿ (2003) ಅತಿ ಹೆಚ್ಚು 673 ರನ್.

36. ಟೆಸ್ಟ್‌ನಲ್ಲಿ 20 ಬಾರಿ 150 ಪ್ಲಸ್ ಇನಿಂಗ್ಸ್.

37. ಏಕದಿನದಲ್ಲಿ 15 ಸಾವಿರಕ್ಕಿಂತ ಹೆಚ್ಚು ರನ್ ಮತ್ತು 150 ವಿಕೆಟ್ ಗಳಿಸಿದ ಏಕೈಕ ಕ್ರಿಕೆಟಿಗ.

38. ದ್ರಾವಿಡ್ ಜತೆ 2ನೇ ವಿಕೆಟ್‌ಗೆ 331 ರನ್ ಸೇರಿಸಿರುವುದು ಏಕದಿನದಲ್ಲಿ ಯಾವುದೇ ವಿಕೆಟ್‌ಗೆ 3ನೇ ಗರಿಷ್ಠ ಜತೆಯಾಟ.

39. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತಿ ಕಿರಿಯ (16 ವರ್ಷ, 238 ದಿನ) ಭಾರತೀಯ.

40. ಏಕದಿನದಲ್ಲಿ ಅತಿ ಹೆಚ್ಚು 50 ಪ್ಲಸ್ (49 ಶತಕ+96 ಅರ್ಧಶತಕ) ಇನಿಂಗ್ಸ್.

41. ಟೆಸ್ಟ್ ಕ್ರಿಕೆಟ್‌ನಲ್ಲಿ 12, 13, 14, 15 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್. 42. ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ 10 ವರ್ಷಗಳ ಕಾಲ ಅಗ್ರ 10ರಲ್ಲಿ ಸ್ಥಾನ. 43. ಏಕದಿನದಲ್ಲಿ 21 ಆಟಗಾರರೊಂದಿಗೆ 99 ಬಾರಿ 100ಪ್ಲಸ್ ರನ್ ಜತೆಯಾಟದಲ್ಲಿ ಭಾಗಿ. 44. 129 ಬಾರಿ ಭಾರತ ಪರ ಗರಿಷ್ಠ ಸ್ಕೋರರ್ ಎನಿಸಿದ್ದು ಜಾಗತಿಕ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ. 45. ಗೆದ್ದ ಏಕದಿನ ಪಂದ್ಯದಲ್ಲಿ (234) ಅತಿಹೆಚ್ಚು 11,157 ರನ್, 33 ಶತಕ ಬಾರಿಸಿದ ಹೆಗ್ಗಳಿಕೆ. 46. ಟೆಸ್ಟ್‌ನಲ್ಲಿ 593 (108 ಸಹ, 485 ಎದುರಾಳಿ), ಏಕದಿನದಲ್ಲಿ 866 (123 ಸಹ, 743 ಎದುರಾಳಿ) ಆಟಗಾರರೊಂದಿಗೆ ಆಟ. 47. ವಿವಿಧ ಕ್ರಿಕೆಟ್ ಪ್ರಕಾರಗಳಲ್ಲಿ (ಟೆಸ್ಟ್, ಏಕದಿನ, ಟಿ20, ಐಪಿಎಲ್, ಚಾಂಪಿಯನ್ಸ್ ಲೀಗ್ ಟಿ20, ವಿಶ್ವಕಪ್, ರಣಜಿ ಟ್ರೋಫಿ) ಗೆಲುವಿನೊಂದಿಗೆ ವಿದಾಯ. 48. 2019ರಲ್ಲಿ ಐಸಿಸಿ ಹಾಲ್ ಆಫ್​ ಫೇಮ್‌ಗೆ ಸೇರ್ಪಡೆ. 49. ಆತ್ಮಚರಿತ್ರೆ ‘ಪ್ಲೇಯಿಂಗ್ ಇಟ್ ಮೈ ವೇ’ ಪ್ರಕಟಗೊಳ್ಳುವುದಕ್ಕೆ ಮುನ್ನವೇ 1,50,289 ಪ್ರತಿ ಮುಂಗಡ ಆರ್ಡರ್ ಆದ ಲಿಮ್ಕಾ ಬುಕ್ ಆಫ್​ ರೆಕಾರ್ಡ್ಸ್ ದಾಖಲೆ.

Koo App
Growing up with you has been a delight. Wishing the best for the evergreen friend on his 49th birthday. 🙏 “Bharat Ratna🙏 ##HappyBirthdaSachin #SachinSachin
View attached media content
-Amol Muzumdar (@amolm11)24 Apr 2022
Koo App
On Sachin Tendulkar’s 49th Birthday, this photo by Atul Kamble of him walking out to bat in his final Test innings is the perfect reminder of his significance in our lives. A figure of reverence, awe and adoration, Tendulkar was quite simply the hearbeat of the country. Happy Birthday Legend! #HappyBirthdaySachin #SachinSachin
View attached media content
-Gaurav Kalra (@GK75)24 Apr 2022
Koo App
Happy Birthday Sachin paaji! Wishing you a beautiful day with lots of happiness in the year ahead 🙏 #happybirthdaysachin #sachinsachin
View attached media content
-Robin Uthappa (@robinuthappa)24 Apr 2022
Koo App
One Man 24 Yrs 664 Matches 782 Innings 34357 Runs 48.52 Avg 248* HS 164 50s 28 90s 100 100s 25 150s 6 200s 76 M.O.M 20 M.O.S 4076 4s 264 6s 201 wickets 2 5wk Haul 4 5wk Haul 5/32 Best 107 maidens 256 catches Billion Memories Sachin Tendulkar #HappyBirthdaySachin #SachinSachin #GodOfCricket
View attached media content
-Manoj Dubey (@ManojDubey_VU)24 Apr 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net