

IPL 2025; ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಭೂತಪೂರ್ವ ಜಯ ಗಳಿಸಿದ ಚೈನ್ನೈ ಸೂಪರ್ ಕಿಂಗ್ಸ್ ತಂಡ, ಈ ಮೂಲಕ ನಾಯಕ ಧೋನಿ ಹೊಸದೊಂದು ದಾಖಲೆ ಬರೆದಿದ್ದಾರೆ.
ಹೌದು, ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಧೋನಿ ಅವರು 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ನೊಂದಿಗೆ 26 ರನ್ ಗಳಿಸಿ ಅಜೇಯರಾಗಿ ಉಳಿದರು. 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದರೂ, ತಾನು ಅದಕ್ಕೆ ಅರ್ಹನಲ್ಲ ಎಂದು ಧೋನಿ ಹೇಳಿದ್ದಾರೆ. ನಿನ್ನೆ (ಏಪ್ರಿಲ್ 14) ಲಖನೌದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ದ ಮಹಿ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದೇ ಎಂ.ಎಸ್.ಧೋನಿಯ ದಾಖಲೆಯಾಗಿದೆ.
ಧೋನಿ T20 ಲೀಗ್ ಇತಿಹಾಸದಲ್ಲಿ ಈ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಅವರಿಗೆ 43 ವರ್ಷ ಮತ್ತು 280 ದಿನಗಳು. ಈ ಪ್ರಶಸ್ತಿ ಪಡೆದ ಬಳಿಕ ಧೋನಿ 11 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಈ ಮುಂಚೆ ಈ ಸ್ಥಾನದಲ್ಲಿದ್ದ ಪ್ರವೀಣ್ ತಾಂಬೆ ಅವರನ್ನು ಹಿಂದಿಕ್ಕಿ ನಂ.1 ಸ್ಥಾನವನ್ನು ಪಡೆದರು. ಹೀಗಾಗಿ, ಧೋನಿ ಲೀಗ್ ಇತಿಹಾಸದಲ್ಲಿ 43 ನೇ ವಯಸ್ಸಿನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಆಟಗಾರರಾದರು.
ಸೋಮವಾರದವರೆಗೆ ತಾಂಬೆ ನ್ಯೂಮೆರೊ ಒನೊ ಸ್ಥಾನವನ್ನು ಹೊಂದಿದ್ದರು, ಐಪಿಎಲ್ 2014 ರಲ್ಲಿ ಕೆಕೆಆರ್ ವಿರುದ್ಧ 42 ವರ್ಷ ಮತ್ತು 208 ದಿನಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದರು. ರಾಜಸ್ಥಾನ್ ರಾಯಲ್ಸ್ ಪರ ಆಡುವಾಗ ಅವರು ಈ ದಾಖಲೆಯನ್ನು ಮಾಡಿದ್ದರು.
ಪಂದ್ಯದ ನಂತರದ ನಡೆಯುವ ಪ್ರಶಸ್ತಿ ಪ್ರಸ್ತುತಿ ಕಾರ್ಯಕ್ರಮದಲ್ಲಿ 18ನೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಅನುಭವ ಹೇಗಿತ್ತು ಎಂದು ನಿರೂಪಕ ಮುರಳಿ ಕಾರ್ತಿಕ್ ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಧೋನಿ, ನೀವು ನನಗೆ ಪ್ರಶಸ್ತಿಯನ್ನು ಏಕೆ ನೀಡುತ್ತಿದ್ದೀರಿ ಎಂದು ನಾನು ಯೋಚಿಸುತ್ತಿದ್ದೇನೆ. ನೂರ್ ಅಹ್ಮದ್ ಈ ಪ್ರಶಸ್ತಿಗೆ ಅರ್ಹರು. ಅವರು ಇಂದು ಉತ್ತಮ ಕೆಲಸ ಮಾಡಿದರು. ಅವರು ಮಧ್ಯಮ ಓವರ್ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು ಎಂದು ಧೋನಿ ಉತ್ತರಿಸಿದರು.(ಏಜೆನ್ಸೀಸ್)