ರಣಜಿ ಟ್ರೋಫಿಯಲ್ಲಿ ಒಂದೇ ದಿನ 4 ತ್ರಿಶತಕ, ದಾಖಲೆ ಜತೆಯಾಟ!

web 300
Published on

ನವದೆಹಲಿ: ರಣಜಿಯಲ್ಲಿ ಗುರುವಾರ ಒಂದೇ ದಿನ 4 ತ್ರಿಶತಕ ದಾಖಲಾಯಿತು. ಗೋವಾ ಪರ ಕಶ್ಯಪ್​ ಬಾಕ್ಲೆ (300*ರನ್​, 269 ಎಸೆತ, 39 ಬೌಂಡರಿ, 2 ಸಿಕ್ಸರ್​) ಮತ್ತು ಸ್ನೇಹನ್​ ಕೌಥಂಕರ್​ (314*ರನ್​, 215 ಎಸೆತ, 45 ಬೌಂಡರಿ, 4 ಸಿಕ್ಸರ್​) ತ್ರಿಶತಕ ಸಿಡಿಸಿದರು. ರಣಜಿಯಲ್ಲಿ ಒಂದೇ ಇನಿಂಗ್ಸ್​ನಲ್ಲಿ ಅವಳಿ ತ್ರಿಶತಕ ದಾಖಲಾದ 2ನೇ ದೃಷ್ಟಾಂತ ಇದಾಗಿದೆ. ಈ ಮುನ್ನ 1989-90ರಲ್ಲಿ ತಮಿಳುನಾಡಿನ ಡಬ್ಲ್ಯುವಿ ರಾಮನ್​&ಕೃಪಾಲ್​ ಸಿಂಗ್​ ಒಂದೇ ಇನಿಂಗ್ಸ್​ನಲ್ಲಿ ತ್ರಿಶಕ ಸಿಡಿಸಿದ್ದರು.

ಕಶ್ಯಪ್​-ಸ್ನೇಹಲ್​ ಮುರಿಯದ 3ನೇ ವಿಕೆಟ್​ಗೆ 606 ರನ್​ ಜತೆಯಾಟವಾಡಿದರು. ಇದು ರಣಜಿ ಇತಿಹಾಸದಲ್ಲೇ ಗರಿಷ್ಠ ಜತೆಯಾಟವಾಗಿದೆ. ಮಹಾರಾಷ್ಟ್ರದ ಸ್ವಪ್ನಿಲ್​ ಗುಗಲೆ-ಅಂಕಿತ್​ ಬಾವ್ನೆ 594 ರನ್​ ಜತೆಯಾಟವಾಡಿದ್ದು ಹಿಂದಿನ ದಾಖಲೆ. ಅರುಣಾಚಲ ಪ್ರದೇಶ ವಿರುದ್ಧ ಗೋವಾ 2 ವಿಕೆಟ್​ಗೆ 727 ರನ್​ ಗಳಿಸಿ ಡಿಕ್ಲೇರ್​ ಮಾಡಿಕೊಂಡಿತು. ಶ್ರೀಲಂಕಾದ ಮಹೇಲ ಜಯವರ್ಧನೆ-ಕುಮಾರ ಸಂಗಕ್ಕರ 2006ರಲ್ಲಿ 624 ರನ್​ ಜತೆಯಾಟವಾಡಿದ ವಿಶ್ವದಾಖಲೆಯನ್ನು ಕೇವಲ 18 ರನ್​ಗಳಿಂದ ತಪ್ಪಿಸಿಕೊಂಡರು.

ಮಹಿಪಾಲ್​ ಲೊಮ್ರೊರ್​ (300*ರನ್​, 360 ಎಸೆತ, 25 ಬೌಂಡರಿ, 13 ಸಿಕ್ಸರ್​) ರಾಜಸ್ಥಾನ ಪರ ಮತ್ತು ಚೇತನ್​ ಬಿಷ್ಟ್​ (304*ರನ್​, 423 ಎಸೆತ, 33 ಬೌಂಡರಿ, 5 ಸಿಕ್ಸರ್​) ನಾಗಾಲ್ಯಾಂಡ್​ ಪರ ತ್ರಿಶತಕ ಸಿಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net