

ನವದೆಹಲಿ: 2025ರಲ್ಲಿ ನಡೆಯಲಿರುವ ವಿಶ್ವದ ಬಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಮೆಗಾ ಹರಾಜಿಗೂ ಮುನ್ನ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. 2025ರ ಆರಂಭದಲ್ಲಿ ನಡೆಯಲಿರುವ ಮೆಗಾ ಹರಾಜಿಗೂ ಮುನ್ನ ಯಾವೆಲ್ಲಾ ಫ್ರಾಂಚೈಸಿಗಳು ಯಾವೆಲ್ಲಾ ಆಟಗಾರರನ್ನು ತಮ್ಮ ಬಳಿ ಉಳಿಸಿಕೊಂಡು ಯಾವ್ಯಾವ ಆಟಗಾರರನ್ನು ಬಿಡುಗಡೆ ಮಾಡಲಿದೆ ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಮೂಡಲು ಶುರುವಾಗಿದೆ. ಇದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಅಂದರೆ ಆರ್ಸಿಬಿ ತಂಡದ ಸ್ಪೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಅವರದ್ದು ಎಂದು ಹೇಳಿದರೆ ತಪ್ಪಾಗಲಾರದು.
2025ರಲ್ಲಿ ನಡೆಯಲಿರುವ ಐಪಿಎಲ್ ಮೆಗ ಹರಾಜಿಗೂ ಮುನ್ನ ಗ್ಲೆನ್ ಮ್ಯಾಕ್ಸ್ವೆಲ್ ತಂಡದಿಂದ ಹೊರಬೀಳಲಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೆ ಪೂರಕವೆಂಬಂತೆ ಮ್ಯಾಕ್ಸ್ವೆಲ್ ಇನ್ಸ್ಟಾಗ್ರಾಂನಲ್ಲಿ ಆರ್ಸಿಬಿ ಪೇಜ್ಅನ್ನು ಅನ್ಫಾಲೋ ಮಾಡಿದ್ದಾರೆ. ಈ ಸುದ್ದಿ ವೈರಲ್ ಆಗಿದ್ದು, ಮ್ಯಾಕ್ಸ್ವೆಲ್ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಸಿದ್ದತೆ ನಡೆಸುತ್ತಿವೆ. 2021ರಲ್ಲಿ ನಡೆದ ಹರಾಜಿನಲ್ಲಿ ಆರ್ಸಿಬಿ ತಂಡ ಮ್ಯಾಕ್ಸ್ವೆಲ್ರನ್ನು 14.25 ಕೋಟಿ ರೂ. ಕೊಟ್ಟು ಖರೀದಿಸಿತ್ತು. 2022ರಲ್ಲಿ ನಡೆದ ಮೆಗಾ ಹರಾಜಿಗೂ ಮುನ್ನ 11 ಕೋಟಿ ರೂ. ಕೊಟ್ಟು ಮ್ಯಾಕ್ಸ್ವೆಲ್ರನ್ನು ತಂಡದಲ್ಲೇ ಉಳಿಸಿಕೊಂಡಿತ್ತು, ಆದರೆ, ಈ ಬಾರಿ ಮ್ಯಾಕ್ಸ್ವೆಲ್ರನ್ನು ರಿಟೇನ್ ಮಾಡುವುದು ಡೌಟ್ ಎಂದು ಹೇಳಲಾಗಿದ್ದು, ತಂಡದಿಂದ ಕೈಬಿಡುವ ವಿಚಾರವನ್ನು ಅನಧಿಕೃತವಾಗಿ ಕನ್ಫರ್ಮ್ ಆಗಿದೆ.
ಏಕೆಂದರೆ 17ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಬ್ಯಾಟ್ ಬೀಸಿದ ಮ್ಯಾಕ್ಸ್ವೆಲ್ ಗಳಿಸಿದ್ದು ಮಾತ್ರ 52 ರನ್. ಆಡಿದ 10 ಪಂದ್ಯಗಳಲ್ಲಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿರುವ ಮ್ಯಾಕ್ಸಿ ಐದು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಹೀಗಾಗಿಯೇ ಮ್ಯಾಕ್ಸ್ವೆಲ್ರನ್ನು ರಿಟೇನ್ ಮಾಡದಿರಲು ಆರ್ಸಿಬಿ ನಿರ್ಧರಿಸಿದ್ದು, ತಂಡದಿಂದ ಕೈಬಿಡುವುದು ಕನ್ಫರ್ಮ್ ಎಂದು ಹೇಳಲಾಗಿದೆ. ಇತ್ತ ಮ್ಯಾಕ್ಸ್ವೆಲ್ರನ್ನು ಆರ್ಸಿಬಿ ಫ್ರಾಂಚೈಸಿ ಕೈಬಿಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ತಂಡಗಳು ಮ್ಯಾಕ್ಸಿಯನ್ನು ಖರೀದಿಸಲು ಮುಂದಾಗಿವೆ. ಪ್ರಮುಖವಾಗಿ ಮೂರು ತಂಡಗಳ ಹೆಸರು ಕೇಳಿ ಬರುತ್ತಿದ್ದು, ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮ್ಯಾಕ್ಸವೆಲ್ರನ್ನು ಖರೀದಿಸಲು ತಯಾರಿ ನಡೆಸುತ್ತಿದ್ದು, ಮೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಏಕೆಂದರೆ 17ನೇ ಆವೃತ್ತಿಯ ಐಪಿಎಲ್ನಲ್ಲಿ ಈ ಮೂರು ತಂಡಗಳ ಪ್ರದರ್ಶನ ತೀರಾ ಸಾಧಾರಣವಾಗಿತ್ತು. ಹೀಗಾಗಿ ಮೆಗಾ ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿಸಿ ತಂಡದ ಸಂಯೋಜನೆ ಬದಲಿಸಲು ಈ ಫ್ರಾಂಚೈಸಿಗಳು ಮುಂದಾಗಿದ್ದು, ಅಂತಿಮವಾಗಿ ಮ್ಯಾಕ್ಸ್ವೆಲ್ ಯಾವ ತಂಡದ ಪಾಲಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಆರ್ಸಿಬಿ ಪರ 52 ಪಂದ್ಯಗಳನ್ನಾಡಿರುವ ಗ್ಲೆನ್ ಮ್ಯಾಕ್ಸ್ವೆಲ್ 12 ಅರ್ಧಶತಕ ಒಳಗೊಂಡಂತೆ 1266 ರನ್ ಕಲೆಹಾಕಿದ್ದಾರೆ. ಬೌಲಿಂಗ್ನಲ್ಲಿ 398 ಎಸೆತಗಳನ್ನು ಎಸೆದಿರುವ ಮ್ಯಾಕ್ಸಿ ಒಟ್ಟು 18 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹೀಗಾಗಿಯೇ ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮ್ಯಾಕ್ಸ್ವೆಲ್ ಅವರನ್ನು ಬಿಡುಗಡೆ ಮಾಡಿ, ಬದಲಿ ಆಲ್ರೌಂಡರ್ನ ಖರೀದಿಗೆ ಆರ್ಸಿಬಿ ಫ್ರಾಂಚೈಸಿ ಮುಂದಾಗಿದೆ.