

ಮುಂಬೈ: ಟೀಮ್ ಇಂಡಿಯಾದ ಮಾಜಿ ಆಟಗಾರ, ಸಚಿನ್ ತೆಂಡೂಲ್ಕರ್ ಅವರ ಆಪ್ತ ವಿನೋದ್ ಕಾಂಬ್ಳಿ ಅವರು ನಡೆಯಲಾಗದ ಪರಿಸ್ಥಿತಿಯಲ್ಲಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆದಿತ್ತು. ಈ ಬಗ್ಗೆ ಇದೀಗ ವಿನೋದ್ ಕಾಂಬ್ಳಿ ಮಾತನಾಡಿದ್ದು, ತಾವು ಕುಡಿದಿದ್ದರು ಎಂಬ ವರದಿಯನ್ಉ ತಳ್ಳಿಹಾಕಿದ್ದಾರೆ. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವನ್ನು ನಂಬಬೇಡಿ ಎಂದು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ವಿನೋದ್ ಕಾಂಬ್ಳಿ ಅವರ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ವಿಡಿಯೋದಲ್ಲಿ ವಿನೋದ್ ಕಾಂಬ್ಳಿ ಅವರ ನಡೆಯಲು ಸಾಧ್ಯವಾಗದೆ ಬೈಕ್ ಅನ್ನು ಹಿಡಿದುಕೊಂಡು ಕಷ್ಟಪಡುತ್ತಿದ್ದರು. ನಂತರ ಮುಂದೆ ಬಂದು ನಡೆಯಲು ಪರದಾಡುತ್ತಿದ್ದ ವಿನೋದ್ ಕಾಂಬ್ಳಿ ಅವರನ್ನು ಸ್ಥಳೀಯರು ಕೈ ಹಿಡಿದು ಸಹಾಯ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಿಂದ ಅಭಿಮಾನಿಗಳು ವಿನೋದ್ ಕಾಂಬ್ಳಿ ಅವರ ಪರಿಸ್ಥಿತಿಯನ್ನು ನೋಡಿ ಶಾಕ್ ಆಗಿದ್ದರು.
ನನ್ನ ಆರೋಗ್ಯದಲ್ಲಿ ಯಾವುದೇ ತರಹದ ಸಮಸ್ಯೆಯಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬರುವ ವಿಡಿಯೋವನ್ನು ನಂಬಬೇಡಿ ಎಂದು ತಮ್ಮ ಶಾಲಾ ಸಹಪಾಠಿ ರಿಕ್ಕಿ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನ ಅಂಪೈರ್ ಮಾರ್ಕಸ್ ಅವರ ಬಳಿ ಹೇಳುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಅವರ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದೆ.
ಈ ಕುರಿತು ಮಾತನಾಡಿರುವ ಮಾರ್ಕಸ್, ವಿನೋದ್ ಕಾಂಬ್ಳಿಯನ್ನು ನಾನು ಭೇಟಿಯಾದಾಗ ಅವರು ತುಂಬಾ ಜಾಲಿ ಮೂಡ್‌ನಲ್ಲಿದ್ದರು. ಗುಣಮುಖರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಹಳೆಯ ವಿಡಿಯೋ. ಆತನನ್ನು ಕುಟುಂಬಸ್ಥರು ಚೆನ್ನಾಗಿ ಆರೈಕೆ ಮಾಡುತ್ತಿದ್ದು, ಅರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಮಾರ್ಕಸ್ ತಿಳಿಸಿದ್ದಾರೆ.