

ನವದೆಹಲಿ: ಐಪಿಎಲ್ 18ನೇ ಆವೃತ್ತಿ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಈಗಾಗಲೇ ಹಲವು ವಿಷಯಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಲು ಆರಂಭಿಸಿವೆ. ಮುಂಬರುವ ಸೀಸನ್ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ನಿರೀಕ್ಷೆಗಳೇ ಸದ್ಯ ಜೋರಾಗಿದ್ದು, ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ (IPL 2025 Auction) ಆಯಾ ಫ್ರಾಂಚೈಸಿಗಳ ಕ್ಯಾಪ್ಟನ್ಗಳು ಸೇರಿದಂತೆ ಸ್ಟಾರ್ ಆಟಗಾರರು ಈಗಿರುವ ತಮ್ಮ ತಂಡ ಬಿಟ್ಟು ಬೇರೆ ತಂಡಗಳಿಗೆ ಸೇರುತ್ತಾರೆ ಎಂಬ ಸುದ್ದಿಗಳು ಐಪಿಎಲ್ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಕಳೆದ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ ಕೋಲ್ಕತ ನೈಟ್ ರೈಡರ್ಸ್ ಪಡೆ, ಆಕ್ಷನ್ನಲ್ಲಿ ಯಾವ ಸ್ಟಾರ್ ಆಟಗಾರರನ್ನು ತಮ್ಮ ತಂಡಕ್ಕೆ ಕರೆದುಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ಮುಳುಗಿದೆ. ವರದಿಗಳ ಪ್ರಕಾರ, ಮೂರು ಆಸ್ಟ್ರೇಲಿಯಾ ಆಟಗಾರರಿಗೆ ಗಾಳ ಹಾಕಿದೆ ಎನ್ನಲಾಗಿದೆ.
ಪ್ರಸ್ತುತ ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಐಪಿಎಲ್ 2024ರ ಆವೃತ್ತಿಯ ಪ್ರಶಸ್ತಿ ಮುಡಿಗೇರಿಸಿಕೊಂಡ ಕೋಲ್ಕತ ನೈಟ್ ರೈಡರ್ಸ್, ಸುನಿಲ್ ನರೈನ್, ವೆಂಕಟೇಶ್ ಐಯ್ಯರ್, ಕ್ಯಾಪ್ಟನ್ ಶ್ರೇಯಸ್ ಐಯ್ಯರ್, ಆ್ಯಂಡ್ರೆ ರಸ್ಸೆಲ್, ರಿಂಕು ಸಿಂಗ್, ಮಿಚೆಲ್ ಸ್ಟಾರ್ಕ್ ಸೇರಿದಂತೆ ಸ್ಟಾರ್ ಪ್ಲೇಯರ್ಗಳ ಭರ್ಜರಿ ಪ್ರದರ್ಶನದಿಂದ 17ನೇ ಆವೃತ್ತಿಯನ್ನು ವಶಪಡಿಸಿಕೊಳ್ಳುವಲ್ಲಿ ಸಾಧ್ಯವಾಯಿತು. ಈ ಹಿಂದಿನಿಂದಲೂ ಐಪಿಎಲ್ ಲೀಗ್ನಲ್ಲಿ ಇತರೆ ತಂಡಗಳಿಗೆ ಭಾರೀ ಪೈಫೋಟಿ ನೀಡುತ್ತ ಬಂದಿರುವ ಕೆಕೆಆರ್, ಇದೀಗ ತಮ್ಮ ಫ್ರಾಂಚೈಸಿಗೆ ಮೂವರು ಆಸ್ಟ್ರೇಲಿಯಾ ಆಟಗಾರರನ್ನು ಖರೀದಿಸಲು ಎದುರುನೋಡುತ್ತಿದೆ. ಅಷ್ಟಕ್ಕೂ ಯಾರು ಆ ಮೂವರು? ಎಂಬ ಪ್ರಶ್ನೆಗೆ ಉತ್ತರ ಈ ಕೆಳಕಂಡಂತಿದೆ.
ಇದನ್ನೂ ಓದಿ: ಲೋನ್ ಕೊಡುವ ನೆಪದಲ್ಲಿ 74 ಸಾವಿರ ರೂ. ವಂಚನೆಪ್ಯಾಟ್ ಕಮ್ಮಿನ್ಸ್: ಆಸ್ಟ್ರೇಲಿಯಾ ಕ್ಯಾಪ್ಟನ್ ಆಗಿರುವ ಬೌಲಿಂಗ್ ಸ್ಪೆಷಲಿಸ್ಟ್ ಕಮ್ಮಿನ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೂ ನಾಯಕನಾಗಿ ಐಪಿಎಲ್ನಲ್ಲಿ ಕಣಕ್ಕಿಳಿಯುತ್ತಾರೆ. ಕಳೆದ ಸೀಸನ್ನಲ್ಲಿ ತಂಡವನ್ನು ಫೈನಲ್ ಹಂತದವರೆಗೂ ಯಶಸ್ವಿಯಾಗಿ ಕೊಂಡೊಯ್ದ ಪ್ಯಾಟ್ ಕಮ್ಮಿನ್ಸ್, ಸನ್ರೈಸರ್ಸ್ ಎದುರು ಗೆಲ್ಲುವಲ್ಲಿ ವಿಫಲರಾದರು. ಅತ್ಯುತ್ತಮ ಕ್ಯಾಪ್ಟನ್ಸಿ ಜತೆ ಉತ್ತಮ ಬೌಲಿಂಗ್ ಸಾಮರ್ಥ್ಯ ಹೊಂದಿರುವ ಕಮ್ಮಿನ್ಸ್ ಮೇಲೆ ಕೆಕೆಆರ್ ಕಣ್ಣಿಟ್ಟಿರುವುದು ಬೆಸ್ಟ್ ಚಾಯ್ಸ್ ಎಂದೇ ಹೇಳಬಹುದು.
ಡೇವಿಡ್ ವಾರ್ನರ್: ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಎಂದೇ ಕರೆಯಲ್ಪಡುವ ವಾರ್ನರ್, ಓಪನಿಂಗ್ ಇರಲಿ, ಮೂರನೇ ಕ್ರಮಾಂಕದಲ್ಲಿಯೇ ಬರಲಿ ತಮ್ಮ ಬ್ಯಾಟಿಂಗ್ ಆರ್ಭಟವನ್ನು ಎಂದಿಗೂ ನಿಲ್ಲಿಸುವುದಿಲ್ಲ. ಸಿಕ್ಸರ್, ಬೌಂಡರಿಯಿಂದಲೇ ಸ್ಟೇಡಿಯಂನಲ್ಲಿ ತುಂಬಿರುವ ಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡುತ್ತಾರೆ. ಮೈದಾನದಲ್ಲಿ ಆಗಾಗ್ಗೆ ಡ್ಯಾನ್ಸ್ ಮಾಡುವ ಮುಖೇನ ಎಲ್ಲರ ಗಮನಸೆಳೆಯುತ್ತಾರೆ. ಯುವ ಕ್ರಿಕೆಟಿಗರನ್ನೇ ನಾಚಿಸುವಂತೆ ಆಟ ಪ್ರದರ್ಶಿಸುವ ವಾರ್ನರ್, ತಮ್ಮ ತಂಡದಲ್ಲಿದ್ದರೆ ಉತ್ತಮ ಎಂದು ಕೆಕೆಆರ್ ಯೋಚಿಸಿದೆ. ಸದ್ಯ ಈ ಮೂವರನ್ನು ಬಿಡ್ ಮಾಡಿ ಕರೆದುಕೊಳ್ಳಲಿದೆಯಾ ಅಥವಾ ಯಾರಾದರೂ ಒಬ್ಬರನ್ನು ಖರೀದಿ ಮಾಡಲಿದೆಯಾ ಎಂಬುದನ್ನು ಕಾದು ತಿಳಿಯಬೇಕಿದೆ,(ಏಜೆನ್ಸೀಸ್).