

Virat Kohli: ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ಒನ್ಡೇ ವಿಶ್ವಕಪ್ನಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಡಬೇಕು ಎಂದು ಭಾರತ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ತಿಳಿಸಿದ್ದಾರೆ.
ಈ ಬಗ್ಗೆ ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ರಾಯುಡು, ಭಾರತೀಯ ಏಕದಿನ ತಂಡದಲ್ಲಿ ಕೊಹ್ಲಿಗೆ ಸ್ಥಾನ ನೀಡುವಂತೆ ರಾಯುಡು ಕೂಡ ಬೆಂಬಲ ವ್ಯಕ್ತಪಡಿಸಿದರು. 3ನೇ ಸ್ಥಾನ ಪಡೆಯಲು ವಿರಾಟ್ನಂತ ಉತ್ತಮ ಆಟಗಾರ ತಂಡದಲ್ಲಿ ಯಾರೂ ಇಲ್ಲ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ರಾಯಡು, ನನ್ನ ಅಭಿಪ್ರಾಯದಲ್ಲಿ, 100% ಕೊಹ್ಲಿ ವಲ್ಡ್ಕಪ್ ಆಡಲೇಬೇಕು. ಏಕೆಂದರೆ, ಮೂರನೇ ಕ್ರಮಾಂಕದಲ್ಲಿ ವಿರಾಟ್ ಆಡುವುದರಿಂದ. ಮಧ್ಯಮ ಕ್ರಮಾಂಕವನ್ನು ನಿಯಂತ್ರಿಸುತ್ತಾರೆ. ಏಕದಿನ ಪಂದ್ಯವು ವಿಭಿನ್ನ ಸ್ವರೂಪವಾಗಿದೆ, ಅದು ಕೇವಲ ಹೊಡೆಯುವುದರ ಬಗ್ಗೆ ಅಲ್ಲ. ನೀವು ಸುದೀರ್ಘ ಆಡಬೇಕು. ತಂಡದ ಸಮತೋಲನದ ವಿಷಯಕ್ಕೆ ಬಂದಾಗ, ಒಂಡೇ ಮಾದರಿಯಲ್ಲಿ ವಿರಾಟ್‌ಗಿಂತ ಉತ್ತಮರು ಯಾರೂ ಇಲ್ಲ ಎಂದು ರಾಯಡು ಶ್ಲಾಘಿಸಿದ್ದಾರೆ.
ಮುಂಬರುವ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಮತ್ತು ರೋಹಿತ್ ಏಕದಿನ ಮಾದರಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಹೀಗಾಗಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯ್ಕೆಗೆ ದೇಶೀಯ ಕ್ರಿಕೆಟ್ ಆಡಬೇಕೆಂದು ಬಿಸಿಸಿಐ ಬಯಸಿರುವುದರಿಂದ ಈ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವ ಸಾಧ್ಯತೆ ಇದೆ ವರದಿಗಳಾಗಿವೆ. (ಏಜೆನ್ಸೀಸ್)