ನಿಣಾರ್ಯಕ ಪಂದ್ಯಗಳಿಗೆ ಆತ ನಮಗೆ ಬೇಕು ಎಂದ ಆಯ್ಕೆ ಸಮಿತಿ ಅಧ್ಯಕ್ಷ ಅಗರ್ಕರ್ ; ಯಾರು ಆ ಆಟಗಾರ..?| Ajit Agarkar

Ajit Agarkar
Published on

Ajit Agarkar: ವಿಶ್ವಕಪ್‌ಗಳು, ಚಾಂಪಿಯನ್ಸ್ ಟ್ರೋಫಿ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ದೊಡ್ಡ ಸರಣಿಗಳಿಗೆ ಬುಮ್ರಾ ಲಭ್ಯತೆ ನಮಗೆ ತುಂಬಾ ಮುಖ್ಯವಾಗಿದ್ದು, ಇಡೀ ದೇಶ ಅವರು ಆಡಬೇಕೆಂದು ಬಯಸುತ್ತದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ತಿಳಿಸಿದ್ದಾರೆ.

ಏಷ್ಯಾಕಪ್​​ ತಂಡವನ್ನು ಘೋಷಿಸುವ ಸಲುವಾಗಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಗರ್ಕರ್, ಬುಮ್ರಾ ಅವರ ಲಭ್ಯತೆಯು ಅವರ ದೈಹಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ ಮತ್ತು ಅವರು ಈ ಪಂದ್ಯಾವಳಿಯಲ್ಲಿ ಆಡಲು ಫಿಟ್​​ ಆಗಿದ್ದಾರೆ ಎಂದರು. ಅತ್ಯಂತ ಮುಖ್ಯವಾದ ಪಂದ್ಯಗಳಿಗೆ ಬುಮ್ರಾ ಲಭ್ಯವಾಗುವಂತೆ ನೋಡಿಕೊಳ್ಳುವುದು ಯೋಜನೆಯ ಉದ್ದೇಶವಾಗಿದೆ ಎಂದು  ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.

ಬುಮ್ರಾ ಕುರಿತಂತೆ ಯಾವುದೇ ಲಿಖಿತ ಯೋಜನೆಗಳನ್ನು ಬಿಸಿಸಿಐ ಹಾಕಿಕೊಂಡಿಲ್ಲ, ಇಂಗ್ಲೆಂಡ್ ಸರಣಿಯ ಬಳಿಕ ಅವರಿಗೆ ವಿರಾಮ ಸಿಕ್ಕಿದ್ದು, ಅವರ ಬಗ್ಗೆ ಫಿಸಿಯೋಗಳು ಮತ್ತು ತಂಡದ ನಿರ್ವಹಣೆ ಮಂಡಳಿ ಸಂಪರ್ಕದಲ್ಲಿದೆ ಎಂದರು.

ಬುಮ್ರಾ ಜೊತೆಗೆ, ಅರ್ಶ್ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರನ್ನು ಕೂಡ ಆಯ್ಕೆಮಾಡಲಾಗಿದ್ದು, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಆಲ್‌ರೌಂಡರ್‌ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net