

ಉಪ್ಪಿನಂಗಡಿ: ಕ್ರೀಡಾಕೂಟಗಳು ಮನಸ್ಸುಗಳನ್ನು ಒಗ್ಗೂಡಿಸಿ ಐಕ್ಯ, ಸಾಮರಸ್ಯ ಮೂಡಿಸುವುದರ ಜತೆಗೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಿಸಲು ಸಹಕಾರಿ ಎಂದು ಕ್ರೀಡಾ ನಿರ್ದೇಶಕ ನಿವೃತ್ತ ಪಶು ಸಂಗೋಪನಾ ಇಲಾಖಾಧಿಕಾರಿ ಅಶೋಕ್ ಕೊಯಿಲ ಹೇಳಿದರು.
ಉಪ್ಪಿನಂಗಡಿಯ ವೇದಶಂಕರ ನಗರದ ಶ್ರೀ ಮಾಧವ ಶಿಶು ಮಂದಿರದಲ್ಲಿ ಆಯೋಜಿಸಿದ ಕ್ರೀಡಾಕೂಟದಲ್ಲಿ ಮಾತನಾಡಿದರು.
ಕ್ರೀಡಾಕೂಟವನ್ನು ನಿರ್ದೇಶಿಸಿದ ಕ್ರೀಡಾ ತರಬೇತುದಾರರಾದ ಪ್ರಕಾಶ್ ಕೊಯಿಲ, ಅನಿತಾ, ಸುನೀಲ್ ಸಂಗಮ್ ಅವರನ್ನು ಗೌರವಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಕರಾಯ ರಾಘವೇಂದ್ರ ನಾಯಕ್, ಯು.ರಾಜೇಶ್ ಪೈ, ಜಯಶ್ರೀ ಜನಾರ್ದನ್, ಪಾಲಕ ಸಂಘದ ಅಧ್ಯಕ್ಷೆ ಶ್ರೀದೇವಿ ಉಪಸ್ಥಿತರಿದ್ದರು.
ಹರಿರಾಮಚಂದ್ರ, ವೆಂಕಪ್ಪ ಗೌಡ, ಕೃಷ್ಣ ಪ್ರಸಾದ್ ದೇವಾಡಿಗ, ವಿದ್ಯಾಧರ್ ಜೈನ್, ಸುರೇಶ್ ಅತ್ರಮಜಲು, ರಾಜು ಅಲಗುರಿ ಮಜಲು, ಕಲಳ, ರಾಜೇಶ್ ಕುಕ್ಕೆಶ್ರೀ, ಉದಯ ಅತ್ರಮಜಲು, ವೇಣುಗೋಪಾಲ್, ಯಶೋಧರ ಆಚಾರ್ಯ, ಶ್ವೇತಾ ಶಶಿಧರ್, ಚೈತ್ರಾ, ಕಾಂತಿಮಣಿ, ಚಂದ್ರಾವತಿ, ತಾರಾ ಸುರೇಶ್ ಮೊದಲಾದವರು ಭಾಗವಹಿಸಿದ್ದರು.