Special Train: ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ 6 ಸಾವಿರ ವಿಶೇಷ ರೈಲುಗಳ ಸಂಚಾರ!

Railway
Published on

ನವದೆಹಲಿ: ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಜನದಟ್ಟಣೆ ಉಂಟಾಗುವ ಸಾಧ್ಯತೆ ಇರುವ ಕಾರಣದಿಂದ ದೇಶಾದ್ಯಂತ ಒಟ್ಟು  6,000 ವಿಶೇಷ ರೈಲುಗಳ  Special Train ಸಂಚಾರಕ್ಕೆ ಭಾರತೀಯ ರೈಲ್ವೆ ಇಲಾಖೆ ವ್ಯವಸ್ಥೆ ಮಾಡಿದ್ದು, ಇದರಿಂದ 1 ಕೋಟಿ ಪ್ರಯಾಣಿಕರಿಗೆ ಅನಕೂಲವಾಗಲಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ದುರ್ಗಾ ಪೂಜೆ, ದೀಪಾವಳಿ ಮತ್ತು ಛಾತ್ ಹಬ್ಬಗಳ ಸಂದರ್ಭದಲ್ಲಿ ದೇಶದ ಅನೇಕ ಕಡೆಗಳಿಂದ ತಮ್ಮ ಊರುಗಳಿಗೆ ತೆರಳುವ ಜನರಿಗೆ ಅನುಕೂಲ ಕಲ್ಪಿಸಲು ಹಾಗೂ ಜನದಟ್ಟಣೆ ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಉದ್ದೇಶದಿಂದ 108 ರೈಲುಗಳಿಗೆ ಹೆಚ್ಚುವರಿಯಾಗಿ ಬರೋಬ್ಬರಿ 12,500 ಕೋಚ್‌ಗಳ ವ್ಯವಸ್ಥೆ ಮಾಡಲಾಗಿದೆ. ದುರ್ಗಾ ಪೂಜೆ, ದೀಪಾವಳಿ ಮತ್ತು ಛಾತ್ ಹಬ್ಬಗಳ ಸಂದರ್ಭದಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಮಾರ್ಗದ ರೈಲುಗಳಲ್ಲಿ ಭಾರೀ ದಟ್ಟಣೆ ಉಂಟಾಗುತ್ತದೆ. ಕಳೆದ ವರ್ಷ ಈ ಸಂದರ್ಭದಲ್ಲಿ ಸುಮಾರು 4,429 ವಿಶೇಷ ರೈಲುಗಳು ಸಂಚರಿಸಿದ್ದವು. ಈ ವರ್ಷ ಒಟ್ಟು 5,975 ವಿಶೇಷ ರೈಲುಗಳು ಸಂಚರಿಸಲಿವೆ ಎಂದು ವೈಷ್ಣವ್ ಹೇಳಿದರು.

ಹಬ್ಬದ ವೇಳೆ ಒಂದು ಕೋಟಿಗೂ ಹೆಚ್ಚು ಪ್ರಯಾಣಿಕರು ಮನೆಗೆ ಹೋಗಲು ಇದು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು. ಅಕ್ಟೋಬರ್ 9ರಿಂದ ದುರ್ಗಾ ಪೂಜೆ ಪ್ರಾರಂಭವಾಗಲಿದೆ. ಅದೇ ತಿಂಗಳು 31 ರಂದು ದೀಪಾವಳಿ ಹಬ್ಬ, ನವೆಂಬರ್ 7 ಮತ್ತು 8 ರಂದು ಛತ್ ಪೂಜೆ ನಡೆಯಲಿದೆ.

ಟಿಕೆಟ್ ರಹಿತ ಪ್ರಯಾಣಿಕರಿಗೆ ಕಡಿವಾಣ

ಏತನ್ಮಧ್ಯೆ, ರೈಲ್ವೆ ಸಚಿವಾಲಯವು ಹಬ್ಬದ ಸಮಯದಲ್ಲಿ ವಿಶೇಷ ಟಿಕೆಟ್-ಪರಿಶೀಲನಾ ಡ್ರೈವ್ ಅನ್ನು ಪ್ರಾರಂಭಿಸಲು ನಿರ್ಧರಿಸಿದೆ. ಪೊಲೀಸರು ಸೇರಿದಂತೆ ಟಿಕೆಟ್ ರಹಿತ ಪ್ರಯಾಣಿಕರನ್ನು ಪರಿಶೀಲಿಸಲು ಅವರು ಉನ್ನತ ಉಲ್ಲಂಘಿಸುವವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಚಿವಾಲಯವು ಸೆಪ್ಟೆಂಬರ್ 20 ರಂದು 17 ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ ಪತ್ರ ಬರೆದಿದ್ದು, "ಅಕ್ಟೋಬರ್ 1 ರಿಂದ 15 ಮತ್ತು ಅಕ್ಟೋಬರ್ 25 ರಿಂದ ನವೆಂಬರ್ 10 ರ ಅವಧಿಗೆ" ಟಿಕೆಟ್ ರಹಿತ ಮತ್ತು ಅನಧಿಕೃತ ಪ್ರಯಾಣಿಕರ ವಿರುದ್ಧ ವಿಶೇಷ ಡ್ರೈವ್ ಪ್ರಾರಂಭಿಸಲು ಮತ್ತು ಅದರ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net