ಎಸ್​ಪಿಬಿ ಕರೊನಾ ವರದಿ ನೆಗೆಟಿವ್​; ಐಪಿಎಲ್​ಗಾಗಿ ಕಾಯುತ್ತಿದ್ದಾರಂತೆ ಲೆಜೆಂಡರಿ ಗಾಯಕ

SPB1200
Published on

ಚೆನ್ನೈ: ಕಳೆದೊಂದು ತಿಂಗಳಿಂದ ಚೆನ್ನೈ ಎಂಜಿಎಂ ಆಸ್ಪತ್ರೆಯಲ್ಲಿ ಕರೊನಾ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಲೆಜೆಂಡರಿ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ ಅವರ ಪುತ್ರ ಎಸ್​ಪಿ ಚರಣ್.

‘ಅಪ್ಪನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಖುಷಿಯ ವಿಚಾರ ಏನೆಂದರೆ, ಅಪ್ಪನ ಕರೊನಾ ವರದಿ ನೆಗೆಟಿವ್ ಬಂದಿದ್ದು, ಒಂಚೂರು ಸಮಾಧಾನ ತಂದಿದೆ. ಅಷ್ಟೇ ಅಲ್ಲ ಅಪ್ಪ ತನಗೇನು ಬೇಕು ಎಂಬುದನ್ನು ಬರಹದ ಮೂಲಕ ಬರೆದು ಕೊಡುತ್ತಿದ್ದಾರೆ. ಅವರೀಗ ಐಪಿಎಲ್​ ಮತ್ತು ಟೆನಿಸ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಐಪ್ಯಾಡ್​ನಲ್ಲಿ ಅದರ ಅಪ್​ಡೇಟ್ಸ್​ಗಳನ್ನು ನೋಡುತ್ತಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

‘ನೆಗೆಟಿವ್​ ಬಂದಿದೆ ಎಂಬುದು ಖುಷಿಯ ವಿಚಾರವಾದರೂ, ಅವರ ಶ್ವಾಸ ಮೊದಲಿನಂತಾಗಬೇಕು. ಅವರೇ ಉಸಿರಾಡುವಂತಾಗಬೇಕು. ಸದ್ಯಕ್ಕೆ ನಮಗೆಲ್ಲ ಅದೇ ಮಹತ್ವದ್ದು. ಇನ್ನೊಂದು ವಾರದಲ್ಲಿ ಅಪ್ಪನ ವಿವಾಹ ವಾರ್ಷಿಕೋತ್ಸವ ಇರುವ ಹಿನ್ನೆಲೆಯಲ್ಲಿ ಆ ಖುಷಿಯ ಕ್ಷಣಗಳನ್ನೂ ಸಂಭ್ರಮಿಸಲಿದ್ದೇವೆ. ಎಂದಿನಂತೆ ಫಿಸಿಯೋಥೆರಪಿ ನಡೆಯುತ್ತಿದೆ. ನಿಮ್ಮಗಳ ಪ್ರಾರ್ಥನೆ ಹೀಗೆ ಮುಂದುವರಿಯಲಿ’ ಎಂದು ಕಿರು ವಿಡಿಯೋ ಮೂಲಕ ಅಪ್ಪನ ಆರೋಗ್ಯದ ಬಗ್ಗೆ ಅಪ್​ಡೇಟ್​ ಕೊಟ್ಟಿದ್ದಾರೆ ಎಸ್​ಪಿ ಚರಣ್​. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net