VIDEOS| ಟಿಕ್​ಟಾಕ್​ ಬ್ಯಾನ್ ಆಗ್ತಿದ್ದಂತೆ ಡೂಪ್ಲಿಕೇಟ್​ ನಯನತಾರಾ ವಿಡಿಯೋಗಳು ವೈರಲ್​!

Jr Nayana
Published on

ನಿನ್ನೆಯಷ್ಟೇ ಕೇಂದ್ರ ಸರ್ಕಾರ ಚೀನಾದ 59 ಅಪ್ಲಿಕೇಷನ್​ಗಳಿಗೆ ನಿಷೇಧ ಹೇರಿದೆ. ಅದರ ಬೆನ್ನಲ್ಲೆ ಇದೀಗ ಸೌತ್​ ಸೂಪರ್​ಸ್ಟಾರ್ ನಯನತಾರಾ ಅವರನ್ನೇ ಹೋಲುವ ಯುವತಿಯ ಟಿಕ್​ಟಾಕ್​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಆಕೆಯ ಎಕ್ಸ್‌ಪ್ರೆಶನ್, ಕಣ್ಣುಗಳು ಮತ್ತು ಸಂಭಾಷಣೆ ಹೇಳುವ ಶೈಲಿಗೆ ನೆಟ್ಟಿಗರು ಬಹುಪರಾಕ್ ಹೇಳುತ್ತಿದ್ದಾರೆ.

ಹೌದು, ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ನಯನತಾರಾ ಅವರ ವಿಡಿಯೋಗಳು ಬಹಳ ಜನಪ್ರಿಯವಾಗುತ್ತಿರುವುದಷ್ಟೇ ಅಲ್ಲ, ಸಿಕ್ಕಾಪಟ್ಟೆ ಲೈಕ್ಸ್ ಗಿಟ್ಟಿಸುತ್ತಿವೆ. ಈಗಾಗಲೇ ನಯನತಾರಾ ನಟಿಸಿದ ಡೈಲಾಗ್​ಗಳು, ಸಿನಿಮಾದ ಹಾಡುಗಳನ್ನು ತಮ್ಮದೆ ಶೈಲಿಯಲ್ಲಿ ನಟಿಸಿ ನೆಟ್ಟಿಗರಿಂದ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ‘ನಾನುಮ್​ ರೌಡಿ ಧಾನ್’, ‘ಪುತಿಯ ನಿಯಾಮಮ್​​’ ಸಿನಿಮಾದ ಡೈಲಾಗ್​ ಭಾರೀ ಹವಾ ಕ್ರಿಯೇಟ್​ ಮಾಡಿವೆ.

ಹೀಗೆ ನಯನತಾರಾರನ್ನೇ ಹೋಲುವ ಈ ಯುವತಿಯ ಹೆಸರು ಮಿತೂಝ್​. ಯೂಟ್ಯೂಬ್​ನಲ್ಲಿಯೂ ಸಾಕಷ್ಟು ವಿಡಿಯೋಗಳನ್ನು ಅಪ್​ಲೋಡ್ ಮಾಡಿರುವ ಅವರು, ಮೈ ಟಿಪ್ಸ್ ​ಮೈ ಓನ್​ ಸ್ಟೈಲ್​ ಮಿತೂಝ್​ ಹೆಸರಿನಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದು, ಟಿಕ್​ಟಾಕ್​ನಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಇದಕ್ಕೂ ಮುನ್ನ, ಕೆಲವು ದಿನಗಳ ಹಿಂದೆ ಐಶ್ವರ್ಯಾ ರೈ ಅವರನ್ನೇ ಹೋಲುವ ಯುವತಿಯೊಬ್ಬರು ದಿಢೀರ್​ ಪ್ರತ್ಯಕ್ಷವಾಗಿ ಸಿನಿಮಾ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದರು. ಕರೀಷ್ಮಾ ಕಪೂರ್ ಅವರ ತದ್ರೂಪಿ ಹೀನಾ ಖಾನ್ ಎಂಬ ಯುವತಿ, ಕರೀಷ್ಮಾ ಅಭಿನಯದ ದೃಶ್ಯಗಳಿಗೆ ಮತ್ತು ಹಾಡುಗಳಿಗೆ ಲಿಪ್‌ಸಿಂಕ್ ಮಾಡಿ ಶಹಬ್ಭಾಸ್‌ಗಿರಿ ಪಡೆದುಕೊಂಡಿದ್ದರು.ಹೀನಾಗೆ ಟಿಕ್‌ಟಾಕ್‌ನಲ್ಲಿ 2.4 ಮಿಲಿಯನ್ ಹಿಂಬಾಲಕರು ಇರುವುದು ಇನ್ನೊಂದು ವಿಶೇಷ. ಇದೀಗ ಮಿತೂಝ್​ ವಿಡಿಯೋ ಮೂಲಕ ಸೆನ್ಸೆಷನ್​ ಕ್ರಿಯೇಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net