

ಮುಂಬೈ: ಟಾಲಿವುಡ್ನ ಬ್ಯೂಟಿ, ‘ಸೀತಾರಾಮಂ’ ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಇದೀಗ ಆಗಾಗ್ಗೆ ಮಾಧ್ಯಮದಲ್ಲಿ, ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಬಹುತೇಕ ಸಿನಿಮಾ ವಿಷಯಗಳಿಂದಲೇ ಹೆಚ್ಚು ಸದ್ದು ಮಾಡುವ ಈ ಸೌತ್ ಬ್ಯೂಟಿ, ಕೆಲವೊಂದು ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ ಮಾತನಾಡುವ ವಿಚಾರಗಳಿಗೂ ಸಖತ್ ಟ್ರೆಂಡ್ ಆಗುತ್ತಾರೆ. ಆದರೆ, ಈ ಬಾರಿ ಸಿನಿಮಾ ಕುರಿತಾಗಿ ಅಥವಾ ವದಂತಿಗಳಿಂದ ಅಲ್ಲ, ಬದಲಿಗೆ ಚಿತ್ರರಂಗಕ್ಕೂ ಬರುವ ಮುನ್ನ ನಟಿಯ ಹಳೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋ ನೆಟ್ಟಿಗರ ಹುಬ್ಬೇರಿಸಿದ್ದು, ಇದು ನಿಜಕ್ಕೂ ಮೃಣಾಲ್ ಅವರೇನಾ? ಎಂದು ಆಶ್ಚರ್ಯ ವ್ಯಕ್ತಪಡಿಸುವಂತೆ ಮಾಡಿದೆ.
ಈ ಹಿಂದೆ ಒಂದಲ್ಲ ಒಂದು ವಿಷಯಕ್ಕಾಗಿ ನಟಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿತ್ತು. ಅದು ವೇದಿಕೆಗಳಲ್ಲಿ ಅಥವಾ ಸಂದರ್ಶನಗಳಲ್ಲಿ ನೀಡಿದ ಹೇಳಿಕೆಗಳು ಇರಬಹುದು. ಒಟ್ಟಿನಲ್ಲಿ ಮೃಣಾಲ್ ನೀಡುತ್ತಿದ್ದ ಹೇಳಿಕೆಗಳು ಮಾತ್ರ ಭಾರೀ ಟೀಕೆ, ಚರ್ಚೆಗೆ ಗುರಿಯಾಗುತ್ತಿತ್ತು. ಇದಲ್ಲದೇ ಕೆಲವು ತಿಂಗಳುಗಳ ಹಿಂದೆಯಷ್ಟೇ ನಟಿಯ ವಿರುದ್ಧ ಕೇಳಿಬಂದ ಡೇಟಿಂಗ್ ವದಂತಿ ಬಗ್ಗೆ ನಟಿ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸದೆ ಮೌನಕ್ಕೆ ಶರಣಾಗಿದ್ದರು. ಸದ್ಯ ತನ್ನ ಕೆಲಸಗಳತ್ತ ಹೆಚ್ಚು ಗಮನಹರಿಸುತ್ತಿರುವ ಮೃಣಾಲ್, ಬಾಲಿವುಡ್ಗೂ ಎಂಟ್ರಿ ಕಾಲಿಟ್ಟಿದ್ದಾರೆ. ಸೌತ್ ಬ್ಯೂಟಿ ಬಾಲಿವುಡ್ ಬಂದ ನಂತರ ಅವರ ಹಳೆಯ ಫೋಟೋ ಸದ್ಯ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ.
ಚಿತ್ರರಂಗಕ್ಕೆ ಬರುವ ಮುನ್ನ ಟಿವಿ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಮೃಣಾಲ್ ಠಾಕೂರ್, ತದನಂತರ ಸಿನಿಮಾಗಳಲ್ಲಿ ಅವಕಾಶ ಪಡೆದು, ಇಂದು ಟಾಲಿವುಡ್ನ ಸ್ಟಾರ್ ನಟಿಯಾಗಿ ಮಿಂಚುತ್ತಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿದೆ. ಸದ್ಯ ನಟಿ ಚಿತ್ರರಂಗಕ್ಕೂ ಬರುವ ಮೊದಲು ಹೇಗಿದ್ದರು? ಈಗ ಹೇಗಿದ್ದಾರೆ ಎಂಬ ವ್ಯತ್ಯಾಸ ಕಂಡುಹಿಡಿಯುವ ಫೋಟೋ ಇದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಹೃದಯ ಗೆದ್ದಿದೆ,(ಏಜೆನ್ಸೀಸ್).