

ನವದೆಹಲಿ: ಈ ಹುಡುಗಿಯನ್ನು ನೋಡಿ... ಭಾರತೀಯ ಸೌಂದರ್ಯ ರಾಶಿಯೇ ಮೂರ್ತಿವೆತ್ತಂತಿದೆ. ಹೆಸರು ನಯನಾ. ಹುಟ್ಟೂರು ಉತ್ತರ ಪ್ರದೇಶದ ಝಾನ್ಸಿ, ಈಕೆ ಮುಂಬೈನಲ್ಲಿ ನೆಲೆಸಿದ್ದಾಳೆ ಎಂದಿದೆ ವಿವರ. ಸಾಮಾಜಿಕ ಜಾಲತಾಣದಲ್ಲಿ ಹಲವರಿಗೆ ಪರಿಚಿತಳು. ಸೌಂದರ್ಯ, ಕೇಶವಿನ್ಯಾಸ, ಉಡುಗೆ ವಿನ್ಯಾಸ ಸಲಹೆಗಳನ್ನು ಹೇಳುತ್ತಾಳೆ. ಟ್ರೆಂಡಿಂಗ್ ಹಾಡುಗಳಿಗೆ ನಯನಾ ಮಾಡುವ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗುತ್ತಿರುತ್ತಾರೆ. ಈ ಫಾಲೋಯಿಂಗ್ ನೋಡಿಯೇ ಆಕೆಯನ್ನು ಜಾಹೀರಾತುಗಳಿಗಾಗಿ ಸಂಪರ್ಕಿಸುತ್ತಿವೆ. ಆ ಶೂಟ್ಗಳ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾಳೆ. ಆದರೆ ಈಕೆ ಮಾತ್ರ ನಿಜವಲ್ಲ. ಆಶ್ಚರ್ಯವಾಗುತ್ತಿದೆಯೇ? ಹೌದು, ಈ ಸುಂದರಿ ನಯನಾ ಇಲ್ಲವೇ ಇಲ್ಲ. ಡೀಪ್ ಫೇಕ್ ನಂತೆಯೇ ತಂತ್ರಜ್ಱಆನ ಬಳಸಿ ಕೃತಕವಾಗಿ ಸೃಷ್ಟಿಸಿದ ಮಾಯೆಯೇ ಈ ನಯನಾ. 'ಅವತಾರ್ ಮೆಟಾ ಲ್ಯಾಬ್ಸ್' ಕಂಪನಿ ಈಕೆಯನ್ನು ವಿನ್ಯಾಸಗೊಳಿಸಿದೆ.
ಮಾತು, ನಡೆ ಎಲ್ಲವೂ ನಮ್ಮಂತೆಯೇ ಇರುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುವುದು, ಅಭಿಮಾನಿಗಳೊಂದಿಗೆ ಮಾತನಾಡುವುದು ಸೇರಿದಂತೆ ಈ ಮಾಯಾ ಸುಂದರಿ ಹಲವು ಕೆಲಸಗಳನ್ನು ಮಾಡುತ್ತದೆ. ತಾಂತ್ರಿಕ ಪರಿಭಾಷೆಯಲ್ಲಿ ಇದನ್ನು 'ವರ್ಚುವಲ್ ಇನ್ಫ್ಲುಯೆನ್ಸರ್' ಎಂದು ಕರೆಯಲಾಗುತ್ತದೆ.
ಸಾಮಾನ್ಯ ಪ್ರಭಾವಿಗಳಂತೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಇದು ಹಂಚಿಕೊಳ್ಳುತ್ತದೆ. ಭಾರತದಲ್ಲಿ ಮೊದಲ ವರ್ಚುವಲ್ ಪ್ರಭಾವಶಾಲಿ 'ನಯನಾ ಅವತಾರ' ಎಂದು ಇನ್ಷ್ಟಾಗ್ರಾಮ್ಗೆ ಪ್ರವೇಶಿಸಿದ್ದು, ಒಂದೂವರೆ ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಗಳಿಸಿದ್ದಾಳೆ ಈ ಮಾಯಾ ಸುಂದರಿ.
ನೈಕ್ ಮತ್ತು ಪೂಮಾದಂತಹ ದೊಡ್ಡ ಕಂಪನಿಗಳೊಂದಿಗೆ ಕೆಲಸ ಮಾಡಿ, ಇತ್ತೀಚೆಗೆ ಈ ಮಾಯಾ ನಯನಾ ಟಾಲಿವುಡ್ ಮತ್ತು ಬಾಲಿವುಡ್ ತಾರೆಗಳಾದ ಸೋಬಿತಾ ಧೂಳಿಪಳ್ಳ, ಸಯಾಮಿ ಖೇರ್, ಹನ್ಸಿಕಾ, ಇಶಾ, ನರ್ಗಿಸ್ ಫಕ್ರಿ ಮಾತ್ರವಲ್ಲದೆ ಕ್ರೀಡೆ ಮತ್ತು ಇತರ ಸೆಲೆಬ್ರಿಟಿಗಳ ಸಂದರ್ಶನ ಸಹ ನಡೆಸುತ್ತಿದ್ದಾಳೆ.
'ನಯನಾಸ್ ಮತ್ತು ಪಾಪ್ ಡೈರೀಸ್' ಎಂಬ ಹೆಸರಿನಲ್ಲಿ ತನ್ನ ಯೂಟ್ಯೂಬ್ ಖಾತೆಯಲ್ಲಿ ಫೆಬ್ರವರಿಯಿಂದ ಇವುಗಳನ್ನು ಹಂಚಿಕೊಳ್ಳಲಿದ್ದಾಳೆ. ಈ ಕುರಿತ ಕಿರು ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು ಸ್ವಲ್ಪ ಮಟ್ಟಿಗೆ ಇದು ವೈರಲ್ ಆಗಿದೆ.
ಈ ಮಾಯಾ ನಯನಾ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕುತ್ತಿದ್ದಾರೆ. ತೀರಾ ಮಾಯೆ ಎಂದು ತಿಳಿದು.. ಆಶ್ಚರ್ಯ ಪಡುತ್ತಿದ್ದಾರೆ. ಈ ಮಾಯಾ ಸುಂದರಿ ನೋಡಿದಾಗ ಮತ್ತೆ ನಿನಗೆ ಏನನ್ನಿಸಿತು?