More

    ‘ಕೆಜಿಎಫ್‌’, ‘ಕಾಂತಾರ’ ದಾಖಲೆ ಮುರಿದ ‘ಹನುಮಾನ್’..!

    ಹೈದರಾಬಾದ್​: ʼಹನುಮಾನ್ʼ ಸಿನಿಮಾ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸಧ್ಯ ಈ ಸಿನಿಮಾ ‘ಕೆಜಿಫ್’ ಮತ್ತು ‘ಕಾಂತಾರ’ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ.

    ಇದನ್ನೂ ಓದಿ: ನಾಯಕಿ ಪ್ರಧಾನ ಥ್ರಿಲ್ಲರ್‌ ಶೈಲಿಯ ‘ಫಿಯರ್‌’ ಚಿತ್ರದಲ್ಲಿ ವೇದಿಕಾ

    ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹವಾ ಸೃಷ್ಟಿಸಿರುವ ಈ ಚಿತ್ರವು ಕನ್ನಡದ ಎರಡು ದಾಖಲೆ ಬರೆದ ಚಿತ್ರಗಳನ್ನು ಹಿಂದಿಕ್ಕಿದೆ. ತೆಲುಗು, ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿಯಲ್ಲೂ ಹೊಸ ದಾಖಲೆ ಸೃಷ್ಟಿಸುತ್ತಿದೆ.

    ಉತ್ತರದಲ್ಲಿ ‘ಹನುಮಾನ್’ ಚಿತ್ರ ಅಭೂತಪೂರ್ವ ಜನಪ್ರಿಯತೆ ಗಳಿಸುತ್ತಿದ್ದು, ದಾಖಲೆಯ ಕಲೆಕ್ಷನ್ ಗಳಿಸುತ್ತಿದೆ. ಉತ್ತರ ಭಾರತದಲ್ಲಿ ಬಿಡುಗಡೆಯಾದ ಆರು ದಿನಗಳಲ್ಲಿ ‘ಹನುಮಾನ್’ ಚಿತ್ರ ರೂ. 21.02 ಕೋಟಿ ಸಂಗ್ರಹಿಸಿದೆ. ಬುಧವಾರ ಈ ಚಿತ್ರ ರೂ. 2.25 ಕೋಟಿ ಕಲೆಹಾಕಿದೆ. ಗುರುವಾರದ ಕಲೆಕ್ಷನ್ಸ್ ಕೂಡಿಸಿದರೆ… ಒಟ್ಟು 23 ಕೋಟಿ ಬಾಚಿಕೊಂಡಿದೆ.

    ಯುವ ನಟ ತೇಜ ಸಜ್ಜಾ ನಟನೆಯ ಕಡಿಮೆ ಬಜೆಟ್​ನ ‘ಹನುಮಾನ್’ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಫ್’ ಭಾಗ 1 ಹಿಂದಿಯಲ್ಲಿ ಮೊದಲ ವಾರದಲ್ಲಿ 20 ಕೋಟಿ ರೂ.ಗಿಂತ ಕಡಿಮೆ ಕಲೆಕ್ಷನ್ ಮಾಡಿತ್ತು. ರಿಷಬ್ ಶೆಟ್ಟಿ ನಾಯಕನಾಗಿ ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಹಿಂದಿ ಡಬ್ಬಿಂಗ್ ಕಲೆಕ್ಷನ್ ನೋಡಿದರೆ… ‘ಹನುಮಾನ್’ ಮೊದಲ ವಾರದಲ್ಲಿಲ್ಲೇ ಈ ಎರಡು ಸಿನಿಮಾಗಳ ದಾಖಲೆ ಮುರಿದಿದೆ.

    ಹಿಂದಿಗೆ ಡಬ್ ಆದ ದಕ್ಷಿಣ ಭಾರತದ ಸಿನಿಮಾಗಳ ಟಾಪ್ 10 ಪಟ್ಟಿಯಲ್ಲಿ ‘ಬಾಹುಬಲಿ 2’, ‘ಕೆಜಿಎಫ್ 2’, ‘ಆರ್‌ಆರ್‌ಆರ್’, ‘2.0’, ‘ಸಾಲಾರ್’ ಸೇರಿವೆ. ‘, ‘ಸಾಹೋ’, ‘ಬಾಹುಬಲಿ 1’. ‘, ‘ಪುಷ್ಪ’, ‘ಕಾಂತಾರ’, ‘ಕೆಜೀಫ್’ ಸಿನಿಮಾಗಳು ಪ್ರಮುಖವು, ನಿಖಿಲ್ ಸಿದ್ಧಾರ್ಥ್ ಅಭಿನಯದ ‘ಕಾರ್ತಿಕೇಯ 2’ ಟಾಪ್ 11 ಸ್ಥಾನದಲ್ಲಿದೆ. ಅದರ ನಂತರ ರಜನಿಕಾಂತ್, ವಿಜಯ್, ಪ್ರಭಾಸ್ ಮತ್ತು ವಿಕ್ರಮ್ ಅವರ ಚಿತ್ರಗಳಿವೆ.

    ಸದ್ಯ ಟಾಪ್ 18 ಸ್ಥಾನದಲ್ಲಿ ತೇಜ ಸಜ್ಜಾ ‘ಹನುಮಾನ್‌’ ಸಿನಿಮಾ ಇದೆ. ಗಣರಾಜ್ಯೋತ್ಸವದವರೆಗೆ (ಜ.26) ಹಿಂದಿಯಲ್ಲಿ ಯಾವುದೇ ದೊಡ್ಡ ಚಿತ್ರಗಳಿಲ್ಲ. ಇದರಿಂದಾಗಿ ಈ ಸಿನಿಮಾ ಬಾಲಿವುಡ್‌ನ 50 ಕೋಟಿ ಕ್ಲಬ್ ಸೇರುವ ಸಾಧ್ಯತೆ ಹೆಚ್ಚಿದೆ. ಈ ದಾಖಲೆ ನಿರ್ಮಿಸಿದರೆ, ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಡಬ್ಬಿಂಗ್ ಸಿನಿಮಾಗಳ ಟಾಪ್ 10 ಪಟ್ಟಿಗೆ ‘ಹನುಮಾನ್’ ಸೇರಲಿದೆ.

    ‘ಜೀವನದಲ್ಲಿ ನಾನು ಮಾಡಿದ ದೊಡ್ಡ ತಪ್ಪು ಅದೇ..’: ಸಮಂತಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts