More

    ನೋಂದಣಿ ಮತ್ತು ಮುದ್ರಾಂಕ ಇಲಾಖೆ; 20 ಸಾವಿರ ಕೋಟಿ ಸಂಗ್ರಹ

    ಬೆಂಗಳೂರು: ರಾಜ್ಯದ ಖಜಾನೆಗೆ ಹೆಚ್ಚು ಆದಾಯ ತಂದುಕೊಡುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯೂ 2023-24ನೇ ಸಾಲಿನಲ್ಲಿ 19,952 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಂದಾಯ ಇಲಾಖೆ ಪ್ರತಿವರ್ಷಕ್ಕಿಂತ ಹೆಚ್ಚುವರಿಯಾಗಿ ಅಂದರೆ 25 ಸಾವಿರ ಕೋಟಿ ರೂ. ಗುರಿ ನೀಡಲಾಗಿತ್ತು. ಎಂದಿನಂತೆ ಶೇ.10 ಹೆಚ್ಚುವರಿ ಆದಾಯ ಸಂಗ್ರಹವಾಗಿದೆ. 2024-25ನೇ ಸಾಲಿಗೆ 26 ಸಾವಿರ ಕೋಟಿ ರೂ. ಟಾರ್ಗೆಟ್ ನೀಡಲಾಗಿದ್ದು, ಇದನ್ನು ತಲುಪುವ ಸಾಧ್ಯತೆಗಳು ಕಡಿಮೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಿರಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರೆವೆನ್ಯೂ ಬಡಾವಣೆಗಳಿಗೆ ಕಡಿವಾಣ ಹಾಕುವ ಉದ್ದೇಶಕ್ಕೆ ನೋಂದಣಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕಳೆದೊಂದು ತಿಂಗಳಿಂದ ಕಂದಾಯ ಸೈಟ್‌ಗಳ ನೋಂದಣಿ ನಿಂತಿವೆ. ಇದರಿಂದ ಸಹ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದ ಮೇಲೆ ದುಷ್ಪರಿಣಾಮ ಬೀರಲಿದೆ. ಪ್ರತಿವರ್ಷ ರೆವೆನ್ಯೂ ಸೈಟ್‌ಗಳ ನೋಂದಣಿಯಿಂದಾಗಿ ಸರ್ಕಾರಕ್ಕೆ ಅಂದಾಜು 7ರಿಂದ 8 ಸಾವಿರ ಕೋಟಿ ರೂ. ಆದಾಯ ಸಂಗ್ರಹವಾಗುತ್ತಿದೆ. ಆದರೆ, ಇದೀಗ ರೆವೆನ್ಯೂ ಸೈಟ್‌ಗಳ ನೋಂದಣಿಯೇ ನಿಲ್ಲಿಸಿರುವ ಕಾರಣಕ್ಕೆ ಟಾರ್ಗೆಟ್ ತಲುಪಲು ಕಷ್ಟಸಾಧ್ಯವಾಗಲಿದೆ ಎಂದು ಉಪ ನೋಂದಣಾಧಿಕಾರಿಗಳು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

    ಸಾಕಷ್ಟು ಮಂದಿ ದುಡಿಮೆ ಜೊತೆಗೆ ಸಾಲಗಳನ್ನು ಪಡೆದು ರೆವೆನ್ಯೂ ಸೈಟ್‌ಗಳನ್ನು ಖರೀದಿಸಿದ್ದಾರೆ. ಕೆಲವರು ಮನೆ ನಿರ್ಮಾಣ ಮಾಡಿಕೊಂಡಿದ್ದರೆ, ಕೆಲವರು ಕಷ್ಟಕಾಲಕ್ಕೆ ಸೈಟ್ ಮಾರಬಹುದು ಎಂದು ಖರೀದಿ ಮಾಡಿದವರ ಸಂಖ್ಯೆಯೂ ಹೆಚ್ಚಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಹೆಚ್ಚಾಗಿ ರೆವೆನ್ಯೂ ಲೇಔಟ್ ನಿರ್ಮಾಣಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೂ ಸಾಕಷ್ಟು ಕಾರಣಗಳು ಇವೆ. ಸಕಾಲದಲ್ಲಿ ಭೂ ಪರಿವರ್ತನೆ ಆಗುವುದಿಲ್ಲ. ಕಂದಾಯ ಮತ್ತು ಸಕ್ಷಮ ಪ್ರಾಧಿಕಾರಗಳಲ್ಲಿ ದಾಖಲೆ ಪತ್ರಗಳ ವ್ಯವಹಾರಗಳು ಶೀಘ್ರ ಗತಿಯಲ್ಲಿ ಆಗುವುದಿಲ್ಲ. ಜತೆಗೆ ಲಂಚಕ್ಕೆ ಅಧಿಕಾರಿ ಹೆಚ್ಚು ಬೇಡಿಕೆ ಒಡ್ಡುವುದರಿಂದ ರಿಯಲ್ ಎಸ್ಟೇಟ್ ಉದ್ಯಮಿಗಳು ಕಂದಾಯ ಬಡಾವಣೆಗಳನ್ನು ನಿರ್ಮಾಣ ಮಾಡಿ ಹೂಡಿಕೆ ಮಾಡಿದ ಬಂಡವಾಳಕ್ಕೆ ಲಾಭಾಂಶ ಪಡೆಯುವ ಯೋಜನೆ ಮಾಡುತ್ತಾರೆ.

    ಬೆಂಗಳೂರು, ಮೈಸೂರು, ಮಂಗಳೂರು ಸೇರಿ ನಗರ ಪ್ರದೇಶದ ಸುತ್ತಮುತ್ತ ಕಂದಾಯ ಬಡಾವಣೆಗಳೇ ತಲೆ ಎತ್ತಿವೆ. ಇದರಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೂ ಸಾಕಷ್ಟು ಆದಾಯ ಬರುತ್ತಿದೆ. ಜಮೀನು ಲೆಕ್ಕದಲ್ಲಿ ಇರುವ ಜಾಗವನ್ನು ಅಡಿ ಲೆಕ್ಕದಲ್ಲಿ ದಸ್ತಾವೇಜು ನೋಂದಣಿ ಮಾಡಿದಾಗ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚು ಹೆಚ್ಚು ಆದಾಯ ಸಹ ಬರುತ್ತಿದೆ. ಇದೀಗ ಏಕಾಏಕಿ ರೆವೆನ್ಯೂ ಲೇಔಟ್ ಸೈಟ್‌ಗಳ ನೋಂದಣಿಗೆ ಸರ್ಕಾರ ಕಡಿವಾಣ ಹಾಕಿದರೆ ಈಗಾಗಲೇ ಬಂಡವಾಳ ಹೂಡಿಕೆ ಮಾಡಿದವರಿಗೆ ಸಂಕಷ್ಟ ಎದುರಾಗಲಿದೆ. ಕಷ್ಟಕಾಲಕ್ಕೆ ಮಾರಾಟ ಮಾಡಿ ಕಷ್ಟ ತೀರಿಸಿಕೊಳ್ಳಲು ನಿರ್ಧಾರ ಮಾಡಿದವರಿಗೂ ಆರ್ಥಿಕ ಸಂಕಷ್ಟ ಎದುರಾಗಲಿದೆ. ಆದರಿಂದ ರೆವೆನ್ಯೂ ಸೈಟ್‌ಗಳ ನೋಂದಣಿಗೆ ಸರ್ಕಾರವೇ ಅಧಿಕೃತ ಮನ್ನಣೆ ಕೊಡಬೇಕೆಂದು ಸಾರ್ವಜನಿಕರು ಒತ್ತಾಯವಾಗಿದೆ. ಇದರಿಂದ ಸರ್ಕಾರಕ್ಕೂ ಅಧಿಕ ಆದಾಯ ಬರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts