ನನ್ನನ್ನು ಆತ್ಮಹತ್ಯೆಯೆಡೆಗೆ ದೂಡುತ್ತಿದ್ದಾರೆ: ದಿಶಾ ಗರ್ಭಿಣಿ ವದಂತಿಯಲ್ಲಿ ಸಿಲುಕಿದ್ದ ನಟನ ಅಳಲು!

Sooraj
Published on

ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡರೋ? ಇಲ್ಲವೋ? ಗೊತ್ತಿಲ್ಲ. ಆದರೆ, ಈ ಜನ ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುವ ಕಡೆಗೆ ನನ್ನನ್ನು ದೂಡುತ್ತಿದ್ದಾರೆ ಎಂದು ಬಾಲಿವುಡ್​ ನಟಿ ಸೂರಜ್​ ಪಂಚೋಲಿ ಅಸಮಾಧಾನ ಹೊರಹಾಕಿದ್ದಾರೆ.

ಸುಶಾಂತ್​ ಹಾಗೂ ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ ಸಾವಿನ ಪ್ರಕರಣಗಳಲ್ಲಿ ಸೂರಜ್​ ಹೆಸರು ತಳುಕು ಹಾಕಿಕೊಂಡಿದ್ದು, ಈ ಕುರಿತಾಗಿ ಬರುತ್ತಿರುವ ವರದಿಗಳ ಬಗ್ಗೆ ಸೂರಜ್​ ಬೇಸರ ವ್ಯಕ್ತಪಸಿದ್ದಾರೆ. ಈ ಪ್ರಕರಣದಲ್ಲಿ ನನ್ನ ಹೆಸರನ್ನು ತಪ್ಪಾಗಿ ಎಳೆದು ತರಲಾಗುತ್ತಿದೆ. ಇದರಿಂದ ನನ್ನ ತಾಯಿ ನನ್ನ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಸುಶಾಂತ್​ ಅವರದ್ದು ಆತ್ಮಹತ್ಯೆ ಆಗಿರಬಹುದು ಅಥವಾ ಇಲ್ಲದಿರಬಹುದು. ಆದರೆ ನನ್ನನ್ನು ಮಾತ್ರ ಈ ಜನ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಾರೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಬೇಸರ ಹೊರಹಾಕಿದ್ದಾರೆ. ಅಂದಹಾಗೆ ಸೂರಜ್​ ಹೆಸರು ಜಿಹಾ ಖಾನ್​ ಸಾವಿನ ಪ್ರಕರಣದಲ್ಲೂ ತಳುಕು ಹಾಕಿಕೊಂಡಿತ್ತು.

ಈ ಕ್ಷಣದಲ್ಲೂ ನಾನು ಧನಾತ್ಮಕವಾಗಿ ಉಳಿಯಲು ಯತ್ನಿಸುತ್ತಿದ್ದೇನೆ. ನಾನೆಷ್ಟು ಸಕಾರಾತ್ಮಕ ವ್ಯಕ್ತಿ ಎಂಬುದು ನಿಮಗೆ ತಿಳಿದಿದೆ. ಈ ಪ್ರಕರಣಗಳನ್ನು ನಾನು ನನ್ನ ಕುಟುಂಬದೊಂದಿಗೆ ಚರ್ಚಿಸಲು ಹೋಗುವುದೇ ಇಲ್ಲ. ಏಕೆಂದರೆ, ಈಗಾಗಲೇ ಅವರು ನನ್ನಿಂದು ತುಂಬಾ ಒತ್ತಡದಲ್ಲಿದ್ದಾರೆ. ಎಲ್ಲಾ ಸಮಯದಲ್ಲೂ ನನ್ನ ಬಗ್ಗಯೇ ಚಿಂತಿಸುತ್ತಿರುತ್ತಾರೆ. ನನ್ನ ತಾಯಿಯಂತೂ ನಾನೇದರೂ ಹಾನಿ ಮಾಡಿಕೊಳ್ಳುತ್ತೇನೋ ಎಂಬ ಭಯದಲ್ಲಿದ್ದಾರೆ. ಏನೇ ಇದ್ದರೂ ನಮ್ಮೊಂದಿಗೆ ಮುಕ್ತವಾಗಿ ಹಂಚಿಕೋ ಎಂದು ನಮ್ಮ ಮನೆಯಲ್ಲಿ ನನಗೆ ಬೆಂಗಾವಲಾಗಿ ನಿಂತಿದ್ದಾರೆ. ವಾಸ್ತವವಾಗಿ ಸಮಸ್ಯೆಯಂತ ಬಂದಾಗ ನಾನು ಹೆಚ್ಚು ಮಾತನಾಡುವವನಲ್ಲ ಎಂದು ಸೂರಜ್​ ಹೇಳಿದ್ದಾರೆ.

ಇನ್ನು ಕಳೆದ ಬುಧವಾರ ಸೂರಜ್​ ತಮ್ಮ ಕುರಿತಾದ ವರದಿಯೊಂದರ ಸ್ಕ್ರೀನ್​ ಶಾಟ್​ ಒಂದನ್ನು ಶೇರ್​ ಮಾಡಿಕೊಂಡಿದ್ದರು. ಇದು ಸಂಪೂರ್ಣ ಸುಳ್ಳು. ಸುಳ್ಳು ಮಾಧ್ಯಮಗಳು ನಂಬಬೇಡಿ. ನಾವು ನಂಬುವಂತಹ ಮಾಧ್ಯಮಗಳು ಇದೇನಾ? ಈ ಚಿತ್ರದಲ್ಲಿರುವ ಹುಡುಗಿ ದಿಶಾ ಸಾಲಿಯಾನ ಅಲ್ಲ. ಅವಳು ನನ್ನ ಸ್ನೇಹಿತೆ ಅನುಶ್ರೀ ಗೌರ್​. ಆಕೆ ಸದ್ಯ ಇಂಡಿಯಾದಲ್ಲೂ ಇಲ್ಲ. ಆ ಚಿತ್ರವನ್ನು 2016ರಲ್ಲಿ ಕ್ಲಿಕ್ಕಿಸಲಾಗಿತ್ತು. ಜನರ ಮರಳು ಮಾಡುವುದನ್ನು ನಿಲ್ಲಿಸಿ. ದಯವಿಟ್ಟು ಈ ಪ್ರಕರಣದಲ್ಲಿ ನನ್ನನ್ನು ಎಳೆದುತಂದು ಕಿರುಕುಳ ನೀಡುವುದನ್ನು ನಿಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ. ಈ ಮುಂಚೆಯೇ ಹೇಳಿದಂತೆ ಈಗಲೂ ಹೇಳುತ್ತಿದ್ದೇನೆ. ನಾನೆಂದಿಗೂ ದಿಶಾ ಸಾಲಿಯಾನರನ್ನು ಭೇಟಿ ಮಾಡಿಲ್ಲ. ಇಂತಹ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net