ಸ್ಯಾಂಡಲ್​ವುಡ್​ಗೆ ಟಿಕ್​ಟಾಕ್​ ಸ್ಟಾರ್​ ಸೋನು ಶ್ರೀನಿವಾಸ ಗೌಡ ಎಂಟ್ರಿ! ಅದ್ವಿತಿ ಶೆಟ್ಟಿ, ಧರ್ಮ ಕೀರ್ತಿರಾಜ್​ ಜತೆ ಸ್ಕ್ರೀನ್​ ಶೇರ್​

sonu
Published on

ಬೆಂಗಳೂರು: ಟಿಕ್​ಟಾಕ್​ ಅಭಿಮಾನಿಗಳಿಗೆ ಸೋನು ಶ್ರೀನಿವಾಸ ಗೌಡ ಅತ್ಯಂತ ಪರಿಚಯದ ಹುಡುಗಿ. ಟಿಕ್​ಟಾಕ್​ನಲ್ಲಿ ಪ್ರತಿಭೆಯೊಂದಿಗೆ ವಾದ ವಿವಾದ, ಜಗಳದಿಂದಲೇ ಈಕೆ ಪ್ರಸಿದ್ಧರಾಗಿದ್ದರು. ಇದೀಗ ಈ ಸೋನು ಗೌಡ ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಡುತ್ತಿದ್ದಾರೆ. ನಟಿ ಅದ್ವಿತಿ ಶೆಟ್ಟಿಯೊಂದಿಗೆ ತೆರೆ ಹಂಚಿಕೊಳ್ಳುವುದಾಗಿ ಆಕೆ ಹೇಳಿಕೊಂಡಿದ್ದಾರೆ.

ಧರ್ಮ ಕೀರ್ತಿರಾಜ್​ ನಾಯಕ ನಟನಾಗಿ ಮತ್ತು ಅದ್ವಿತಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿರುವ ಕ್ಯಾಡ್ಬರೀಸ್​ ಸಿನಿಮಾದಲ್ಲಿ ಸೋನು ಗೌಡ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ. ನನ್ನ ಟಿಕ್​ಟಾಕ್​ಗಳನ್ನು ನೋಡಿ ಸಿನಿಮಾಗೆ ನೇರವಾಗಿ ಆಯ್ಕೆ ಮಾಡಿದ್ದಾರೆ. ನಾನು ಎಲ್ಲಿಯೂ ಆಡಿಷನ್​ ನೀಡಿಲ್ಲ ಎಂದೂ ಆಕೆ ತಿಳಿಸಿದ್ದಾರೆ.

ಬರೀ ಸಿನಿಮಾ ಮಾತ್ರವಲ್ಲ, ವೆಬ್​ ಸಿರೀಸ್​ ಮತ್ತು ಶಾರ್ಟ್​ ಸಿನಿಮಾಗಳಲ್ಲೂ ಈಕೆ ಬಣ್ಣ ಹಚ್ಚಿದ್ದಾರಂತೆ. ಈಕೆ ಅಭಿನಿಯಿಸಿರುವ ಮೊದಲ ವೆಬ್​ ಸಿರೀಸ್​ ಕೆಲ ದಿನಗಳಲ್ಲೇ ಬಿಡುಗಡೆಯಾಗಲಿದೆಯಂತೆ. ಟಿಕ್​ಟಾಕ್​ ಮಾಡಿದಷ್ಟು ಸುಲಭವಲ್ಲ ಈ ಸಿನಿಮಾವೆಂದು ಆಕೆ ಹೇಳಿಕೊಂಡಿದ್ದಾರೆ. ಕ್ಯಾಡ್ಬರೀಸ್​ ಜತೆಗೆ ಅನೇಕ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ. ಎಲ್ಲ ಸಿನಿಮಾಗಳಲ್ಲೂ ಬೋಲ್ಡ್ ಪಾತ್ರವನ್ನೇ ಮಾಡುವಂತೆ ಕೇಳುತ್ತಿದ್ದಾರೆ. ಆದರೆ ಈಗ ಅದರಿಂದಲೇ ಆರಂಭಿಸಿದರೆ ಮುಂದೆ ಬೇರೆ ಪಾತ್ರಗಳಿಗೆ ಅವಕಾಶ ಸಿಗುವುದಿಲ್ಲವೆಂದು ನಾನೇ ಸುಮ್ಮನಾಗಿದ್ದೇನೆ. ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತೇನೆ ಎಂದು ಆಕೆ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net